ETV Bharat / state

ಕಮಲ, ತೆನೆ ಇಳಿಸಿ 'ಕೈ' ಹಿಡಿದ ಬೆಂಗಳೂರು ಗ್ರಾಮಾಂತರ ನಾಯಕರು

author img

By

Published : Jul 12, 2021, 6:08 PM IST

ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್​ ಪಕ್ಷ ಸೇರಿದ್ದಾರೆ.

party
ಬೆಂಗಳೂರು ಗ್ರಾಮಾಂತರ ನಾಯಕರು ಕಾಂಗ್ರೆಸ್​​ಗೆ ಸೇರ್ಪಡೆ

ಬೆಂಗಳೂರು: ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಇಂದು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರಿದ್ರು.

ಬೆಂಗಳೂರು ಗ್ರಾಮಾಂತರ ನಾಯಕರು ಕಾಂಗ್ರೆಸ್​​ಗೆ ಸೇರ್ಪಡೆ

ಪಕ್ಷ ಸೇರ್ಪಡೆ ಮಾಡಿಕೊಂಡ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆ ಆಗಬಹುದು. ಜಿಲ್ಲಾ ಮಟ್ಟದಲ್ಲಿ ಪಕ್ಷ ಸೇರ್ಪಡೆ ಆಗಲಿ. ಕಾಂಗ್ರೆಸ್ ದೇವಾಲಯದಲ್ಲಿ ಸೇರ್ಪಡೆ ಆಗಿದ್ದೇ ನಿಮ್ಮ ಭಾಗ್ಯ. ಹೊಸಬರು ಮತ್ತು ಹಳಬರು ಅನ್ನೋ ಭೇದಭಾವ ಬೇಡ ಎಂದು ಹೇಳಿದರು.

'ಡಬಲ್ ಎಂಜಿನ್ ಕೆಟ್ಟಿದೆ':

ಡಬಲ್ ಇಂಜಿನ್ ಸರ್ಕಾರ ಕೆಟ್ಟು ನಿಂತಿದೆ. ಇಂಜಿನ್ ಕೆಟ್ಟು ಹೋಗಿದೆ. ಪೆಟ್ರೋಲ್ ಡೀಸೆಲ್ ಯಾವುದೂ ಇಲ್ಲ. ಇಂಜಿನ್ ಹೇಗೆ ಹೋಗುತ್ತೆ? ಎಂದರು.

ಮಂಡ್ಯ ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತು 2013ರಲ್ಲಿ ಅಕ್ರಮ ಗಣಿಗಾರಿಕೆ ಹೋರಾಟದಿಂದಲೇ ಅಧಿಕಾರ ಪಡೆದ್ರಿ. ಮಂಡ್ಯ ಅಕ್ರಮ ಗಣಿಗಾರಿಕೆ ಪ್ರಕರಣವನ್ನ ಹೋರಾಟದ ಅಸ್ತ್ರವಾಗಿ ಬಳಸಿಕೊಳ್ಳುತ್ತೀರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೇ ಕೈಮುಗಿದು ಸುದ್ದಿಗೋಷ್ಠಿಯಿಂದ ಎದ್ದು ಹೋದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.