ETV Bharat / state

ಸ್ಕೂಟರ್ ಸ್ಕಿಡ್ ಆಗಿ ಬಿದ್ದು ಟ್ರ್ಯಾಕ್ಟರ್ ಟ್ರ್ಯಾಲಿ ತಗುಲಿ ಸವಾರ ಸಾವು- ಸಿಸಿಟಿವಿ ವಿಡಿಯೋ

author img

By

Published : Nov 14, 2022, 7:23 PM IST

ರಸ್ತೆ ಮೇಲೆ ಸ್ಕೂಟರ್​ ಸ್ಕಿಡ್​ ಆಗಿ ಸವಾರ ಕೆಳಬಿದಿದ್ದು, ಅದೇ ಮಾರ್ಗವಾಗಿ ಚಲಿಸುತ್ತಿದ್ದ ಟ್ರ್ಯಾಕ್ಟರ್​ ಟ್ರಾಲಿ ತಲೆಗೆ ತಗುಲಿ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

Kn_bng_0
ಮೃತ ವ್ಯಕ್ತಿ

ಬೆಂಗಳೂರು: ಅಸರ್ಮಪಕದಿಂದ ಕೂಡಿದ್ದ ರಸ್ತೆಯಲ್ಲಿ ಸ್ಕಿಡ್ ಆಗಿ ಏಕಾಏಕಿ ಬಿದ್ದಿದ್ದ ಸ್ಕೂಟರ್ ಸವಾರನಿಗೆ ಟ್ರ್ಯಾಕ್ಟರ್ ಟ್ರ್ಯಾಲಿ ತಗುಲಿ ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ದುರ್ಘಟನೆ ಮಲ್ಲೇಶ್ವರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರಪ್ಪನಪಾಳ್ಯ ನಿವಾಸಿ ಕುಮಾರ್ (35) ಸಾವನ್ನಪ್ಪಿದ‌ ವ್ಯಕ್ತಿ. ರಾಜಾಜಿನಗರದ ರಾಜ್​ ಕುಮಾರ್ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸ್ಕೂಟರ್​ನಲ್ಲಿ ತೆರಳುವಾಗ ಏಕಾಏಕಿ ಸ್ಕಿಡ್​ ಆಗಿ ಕೆಳಗೆ ಬಿದ್ದಿದ್ದಾರೆ. ಇದೇ ವೇಳೆ ಅದೇ ಮಾರ್ಗವಾಗಿ ಟ್ರ್ಯಾಕ್ಟರ್ ಬರುತ್ತಿದ್ದು, ಅದರ ಟ್ರ್ಯಾಲಿ ಕುಮಾರ್​ ಅವರ ತಲೆಗೆ ಬಲವಾಗಿ ತಗುಲಿದೆ ಎನ್ನಲಾಗುತ್ತಿದೆ.‌ ಸ್ಥಳೀಯರ ನೆರವಿನಿಂದ ಸವಾರರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಮೃತಪಟ್ಟಿದ್ದಾರೆ. ಗುಂಡಿಮಯವಾಗಿದ್ದ ರಸ್ತೆ ಕಾಮಗಾರಿ ನಡೆಸಲು ಸಿದ್ಧತೆಯಾಗಿತ್ತು. ಅಷ್ಟರಲ್ಲಿ‌‌ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರ್ಯಾಕ್ಟರ್ ಟ್ರ್ಯಾಲಿ ತಗುಲಿ ಸವಾರ ಸಾವು

ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು‌, ಪ್ರಕರಣ ದಾಖಲಿಸಿಕೊಂಡಿರುವ ಮಲ್ಲೇಶ್ವರ ಸಂಚಾರಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.