ಸೋಮವಾರ ಬಂದ್: ಒಮ್ಮತ ಮೂಡಿಸುವಲ್ಲಿ ರೈತ ಸಂಘಟನೆಗಳ ಹೆಣಗಾಟ

author img

By

Published : Sep 25, 2021, 1:56 PM IST

ಸೋಮವಾರದ ಭಾರತ್ ಬಂದ್​ಗೆ ಒಮ್ಮತ ಮೂಡಿಸುವಲ್ಲಿ ರೈತ ಸಂಘಟನೆಗಳು ಹೆಣಗಾಟ

ಕೇವಲ ರೈತರ ಬಂದ್​​ಗೆ ನೈತಿಕ ಬೆಂಬಲ ಘೋಷಿಸಿ ಕೈತೊಳೆದುಕೊಂಡಿರುವ ಸಂಘಟನೆಗಳು ಒಂದೆಡೆಯಾದರೆ, ಇನ್ನೂ ಬಹುತೇಕ ಸಂಘಟನೆಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ಸದ್ಯ ಬಂದ್ ಗೆ 25 ಕ್ಕೂ ಹೆಚ್ಚು ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರು: ಸೋಮವಾರದ ಭಾರತ್ ಬಂದ್​ಗೆ ಇನ್ನೂ ಒಮ್ಮತ ಮೂಡಿಸುವಲ್ಲಿ ರೈತ ಸಂಘಟನೆಗಳು ಹೆಣಗಾಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆ ಬಂದ್ ಮಾಡಲು ಹಲವು ಸಂಘಟನೆಗಳು ಆಸಕ್ತಿ ತೋರುತ್ತಿಲ್ಲ.

ಕೇವಲ ರೈತರ ಬಂದ್​​​ಗೆ ನೈತಿಕ ಬೆಂಬಲ ಘೋಷಿಸಿ ಕೈತೊಳೆದುಕೊಂಡಿರುವ ಸಂಘಟನೆಗಳು ಒಂದೆಡೆಯಾದರೆ, ಇನ್ನೂ ಬಹುತೇಕ ಸಂಘಟನೆಗಳು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಲಭ್ಯವಿರುವ ಮಾಹಿತಿಯ ಪ್ರಕಾರ ಸದ್ಯ ಬಂದ್​​​ಗೆ 25 ಕ್ಕೂ ಹೆಚ್ಚು ಸಂಘಟನೆಗಳಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಸೋಮವಾರದ ಭಾರತ್ ಬಂದ್​ಗೆ ಒಮ್ಮತ ಮೂಡಿಸುವಲ್ಲಿ ರೈತ ಸಂಘಟನೆಗಳು ಹೆಣಗಾಟ

ಬಹುತೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ಘೋಷಣೆ ಮಾಡಿವೆ. ಕೋವಿಡ್​​​ನಿಂದ ಆರ್ಥಿಕ ಸ್ಥಿತಿ ಪಾತಾಳಕ್ಕಿಳಿದಿದೆ. ವ್ಯಾಪಾರ ವ್ಯವಹಾರ ಇಲ್ಲದೇ ಸಂಕಷ್ಟದ ಸ್ಥಿತಿ ಇರುವುದರಿಂದ ಮತ್ತೆ ಬಂದ್ ಮಾಡಿ ಹೋರಾಟ ಮಾಡಲು ಹಲವು ಸಂಘಟನೆಗಳ ಹಿಂದೇಟು ಹಾಕಿವೆ. ಹೀಗಾಗಿ ಸೋಮವಾರದ ಭಾರತ್ ಬಂದ್ ರಾಜ್ಯದಲ್ಲಿ ನಿರೀಕ್ಷಿತ ಯಶಸ್ಸು ಸಿಗುವುದು ಕಷ್ಟ ಎನ್ನಲಾಗುತ್ತಿದೆ.

ಬಂದ್​​ಗೆ ಯಾವುದೇ ಬೆಂಬಲ ನೀಡುವುದಿಲ್ಲ:

ಸೋಮವಾರದಂದು ಕರೆದಿರುವ ಭಾರತ್ ಬಂದ್‌ಗೆ ನಮ್ಮ ಬೆಂಗಳೂರು ಹೋಟೆಲ್ ಸಂಘವು ಯಾವುದೇ ಬೆಂಬಲ ನೀಡುವುದಿಲ್ಲ. ಎಲ್ಲ ಹೋಟೆಲ್‌ಗಳು ತೆರೆದಿರುತ್ತವೆ ಎಂದು ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ ಸಿ ರಾವ್ ತಿಳಿಸಿದ್ದಾರೆ.

ವಿಶೇಷವಾಗಿ ಹೋಟೆಲ್ ಉದ್ಯಮ ರೈತರು ಬೆಳೆಯುವ ತರಕಾರಿ, ಹಾಲು, ಹಣ್ಣು - ಹಂಪಲುಗಳು ಮುಂತಾದವುಗಳನ್ನು ಹೆಚ್ಚಿಗೆ ಖರೀದಿ ಮಾಡಿ ಪ್ರೋತ್ಸಾಹಿಸುತ್ತದೆ. ಹೀಗಿರುವಾಗ ಹೋಟೆಲ್​​​ಗಳನ್ನು ಬಂದ್ ಮಾಡಿದರೆ ರೈತರಿಗೆ ನಷ್ಟವಾಗಲಿದೆ. ಕೋವಿಡ್ ಲಾಕ್‌ಡೌನ್‌ನಿಂದ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ತೊಂದರೆಗಳಾಗಿದೆ. ಈ ಕಾರಣದಿಂದ ನಮ್ಮ ಹೋಟೆಲ್ ಉದ್ಯಮ ಯಾವುದೇ ಬಂದ್‌ಗಳಿಗೆ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಂದ್​ನಲ್ಲಿ ಭಾಗಿಯಾಗಲಿರುವ ಸಂಘಟನೆಗಳು:

ಕರ್ನಾಟಕ ರಾಜ್ಯ ರೈತ ಸಂಘ

ಹಸಿರು ಸೇನೆ

ರಾಜ್ಯ ಕಬ್ಬುಬೆಳೆಗಾರರ ಸಂಘ

ದಲಿತ ಸಂಘಟನೆಗಳು

ಕಾರ್ಮಿಕ ಸಂಘಟನೆಗಳ ಯೂನಿಯನ್

ಗ್ರಾಮೀಣ ಬ್ಯಾಂಕ್ ನೌಕರರ ಸಂಘ

ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ)ಕನ್ನಡ ಒಕ್ಕೂಟ

ನೈತಿಕ ಬೆಂಬಲ ಘೋಷಿಸಿದ ಸಂಘಟನೆಗಳು:

ಓಲಾ ಊಬರ್ ಮಾಲೀಕರ ಸಂಘ

ಲಾರಿ ಮಾಲೀಕರ ಸಂಘ

ಆಟೋ ಡ್ರೈವರ್ಸ್ ಯೂನಿಯನ್

ರಾಜ್ಯ ಟ್ರಾವೆಲ್ಸ್ ಟ್ಯಾಕ್ಸಿ ಮಾಲೀಕರ ಸಂಘ

ಖಾಸಗಿ ಶಾಲಾ ಶಿಕ್ಷಕರ ಸಂಘ

ವಕೀಲರ ಸಂಘ

ಸಾರಿಗೆ ನೌಕರರ ಸಂಘಟನೆಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.