ETV Bharat / state

ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ: ಯಥಾಸ್ಥಿತಿಗೆ ಸಿಲಿಕಾನ್ ಸಿಟಿ

author img

By

Published : Sep 10, 2022, 4:08 PM IST

ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ: ಬೆಂಗಳೂರಿಗೆ ಮಳೆ ಬಿಡುವು ಕೊಟ್ಟಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಇಂದು ಸಹ ನಗರದಲ್ಲಿ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ
ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅವಾಂತರ ಸೃಷ್ಟಿಸಿದ್ದ ಮಳೆ ಸದ್ಯಕ್ಕೆ ಬಿಡುವು ಕೊಟ್ಟಿದೆ. ಮಳೆಗೆ ತತ್ತರಿಸಿದ್ದ ಮಹಾದೇವಪುರ, ರೈನ್‌ಬೋ ಬಡಾವಣೆ, ಸರ್ಜಾಪುರ, ಬೆಳ್ಳಂದೂರು ರಸ್ತೆಗಳು ಸೇರಿದಂತೆ ಇತರ ಪ್ರದೇಶಗಳ ಅಪಾರ್ಟ್‌ಮೆಂಟ್​​ಗಳ ಸ್ಥಿತಿ ಸುಧಾರಿಸುತ್ತಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ.

ಬೆಂಗಳೂರಿಗೆ ಬಿಡುವು ಕೊಟ್ಟ ಮಳೆ: ಮುಖ್ಯವಾಗಿ ಕಳೆದ ಒಂದು ವಾರ ಸುರಿದ ಭಾರಿ ಮಳೆಗೆ ಬೆಳ್ಳಂದೂರು, ಸರ್ಜಾಪುರ, ಮಹದೇವಪುರ ವ್ಯಾಪ್ತಿಯಲ್ಲಿ ಜಲಪ್ರಳಯ ಉಂಟಾಗಿತ್ತು. ಮನೆಗಳಿಗೆ ನುಗ್ಗಿದ ನೀರು ಜನ ಮನೆ ಬಿಟ್ಟು ಬೇರೆಡೆ ಹೋಗುವಂತಾಗಿತ್ತು. ಮನೆಯಲ್ಲಿರುವ ಪೀಠೋಪಕಾರಣಗಳು ಹಾಳಾಗಿವೆ. ಕಾಂಪೌಂಡ್ ಒಳಗೆ ನಿಲ್ಲಿಸಿದ ವಾಹನಗಳು ನೀರಲ್ಲೇ ನಿಂತು, ಹಾಳಾಗಿವೆ. ರಸ್ತೆಗಳು ಕೆರೆಗಳಂತಾಗಿದ್ದವು. ಆದ್ರೆ ಸದ್ಯ ಮಳೆ ಕಡಿಮೆ ಆಗಿ, ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ.

ಯಥಾಸ್ಥಿತಿಯತ್ತ  ಸಿಲಿಕಾನ್ ಸಿಟಿ
ಯಥಾಸ್ಥಿತಿಯತ್ತ ಸಿಲಿಕಾನ್ ಸಿಟಿ

ಜನರು ಓಡಾಟ ಯಥಾಸ್ಥಿತಿಗೆ ಬಂದಿದೆ. ಜನರು ಮನೆಗಳತ್ತ ತೆರಳಿ ಸ್ವಚ್ಛತಾ ಕಾರ್ಯ ಆರಂಭಿಸಿದ್ದಾರೆ. ಕೆಟ್ಟು ನಿಂತ ವಾಹನಗಳನ್ನು ಗ್ಯಾರೇಜ್​ನತ್ತ ಸಾಗಿತ್ತಿದ್ದಾರೆ. ಸರ್ಕಾರ ಮತ್ತು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಾ ಸಾರ್ವಜನಿಕರು ತಮ್ಮ ಮನೆ ಹಾಗೂ ಲೇಔಟ್​ಗಳನ್ನು ಕ್ಲೀನ್ ಮಾಡಿಕೊಳ್ಳುತ್ತಿದ್ದಾರೆ.

ಯಮಲೂರು ಸಹಜ ಸ್ಥಿತಿಗೆ: ಯಮಲೂರು ಸಹಜ ಸ್ಥಿತಿಗೆ ಮರಳಿದ್ದು, ರಸ್ತೆಯಲ್ಲಿ ನಿಂತಿದ್ದ ನೀರು ತೆಗೆಯುವಲ್ಲಿ ಬಿಬಿಎಂಪಿ ಹಾಗೂ ಎನ್​ಡಿಆರ್​ಎಫ್ ತಂಡಗಳು ಯಶಸ್ವಿಯಾಗಿವೆ. ಸದ್ಯ ಮಳೆ ಕಡಿಮೆಯಾದ ಕಾರಣ ಯಮಲೂರು ರಸ್ತೆಗಳು ಸಹಜ ಸ್ಥಿತಿಗೆ ಮರಳಿವೆ.

ಯಥಾಸ್ಥಿತಿಯತ್ತ  ಸಿಲಿಕಾನ್ ಸಿಟಿ
ಯಥಾಸ್ಥಿತಿಯತ್ತ ಸಿಲಿಕಾನ್ ಸಿಟಿ

ಎಕೋಸ್ಪೇಸ್ ಬಳಿ ಪೈಪ್ ಲೈನ್ ಅಳವಡಿಕೆ: ಎಕೋಸ್ಪೇಸ್ ಬಳಿ ಜಲಮಂಡಳಿ ಅಧಿಕಾರಿಗಳು ರಾಜಾಕಾಲುವೆಗಳಿಗೆ ಪೈಪ್​​ಲೈನ್ ಅಳವಡಿಸಲು ಮುಂದಾಗಿದ್ದಾರೆ. ಸದ್ಯ ಔಟರ್ ರಿಂಗ್ ರೋಡ್​​ನ ರಾಜಾಕಾಲುವೆಗೆ 120 ಪೈಪ್ ಲೈನ್ ಅಳವಡಿಕೆ ಮಾಡಿ ದೊಡ್ಡ ದೊಡ್ಡ ಮೋರಿಗಳಿಗೆ ಕನೆಕ್ಷನ್ ಕೊಡಲಾಗಿದೆ. ಇತ್ತ ಎಕೋಸ್ಪೇಸ್ ಬಳಿ ಕಳೆದ ಎರಡು ದಿನಗಳ ಹಿಂದೆ ನಿಂತಿದ್ದ ಕೆರೆ, ಮೋರಿ ಹಾಗೂ ಮಳೆ ನೀರು ಖಾಲಿಯಾಗಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಇಂದೂ ಮಳೆ: ಬೆಂಗಳೂರಲ್ಲಿ ಇಂದು ಸಹ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.

(ಇದನ್ನೂ ಓದಿ: ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.