ETV Bharat / state

ಭಿಕ್ಷುಕರಿಗೆ ಹಣ ನೀಡುವುದನ್ನು ನಿಲ್ಲಿಸಿ.. ರಾಜಧಾನಿಯ ಸಿಗ್ನಲ್​ಗಳಲ್ಲಿ "ಬೆಂಗಳೂರು ಹುಡುಗರು" ತಂಡದ ಅಭಿಯಾನ..

author img

By

Published : Oct 17, 2021, 10:58 PM IST

ಬಿಕ್ಷುಕರು ಎಂದ ತಕ್ಷಣವೇ ಜೇಬಿನಲ್ಲಿದ್ದ ಬಿಡಿಗಾಸು ತೆಗೆದು ತಟ್ಟೆಗೆ ಹಾಕುವ ಕೆಲಸ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ, ಆ ಭಿಕ್ಷಾಟನೆ ಹಿಂದೆ ಭಯಾನಕ ಜಾಲ ಇದೆ. ಇದರಲ್ಲಿ ಮುಗ್ಧ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿ ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ..

begging-free-awareness-work-in-bengalore
ರಾಜಧಾನಿಯ ಸಿಗ್ನಲ್​ಗಳಲ್ಲಿ "ಬೆಂಗಳೂರು ಹುಡುಗರು" ತಂಡದ ವಿನೂತನ ಅಭಿಯಾನ

ಬೆಂಗಳೂರು : ಭಿಕ್ಷಾಟನೆ ಹಾಗೂ ಮಾನವ ಕಳ್ಳ ಸಾಗಣೆ ಇವೆರಡು ಪ್ರಸ್ತುತ ನಾಗರಿಕ ಪಿಡುಗಾಗಿವೆ. ಇವುಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ "ನಮ್ಮ ಬೆಂಗಳೂರು ಹುಡುಗರು” ತಂಡದ ಸದಸ್ಯರು ವಿನೂತನ ಹೋರಾಟ ಹಮ್ಮಿಕೊಂಡಿದ್ದಾರೆ.

ಬಿಕ್ಷುಕರು ಎಂದ ತಕ್ಷಣವೇ ಜೇಬಿನಲ್ಲಿದ್ದ ಬಿಡಿಗಾಸು ತೆಗೆದು ತಟ್ಟೆಗೆ ಹಾಕುವ ಕೆಲಸ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ. ಆದರೆ, ಆ ಭಿಕ್ಷಾಟನೆ ಹಿಂದೆ ಭಯಾನಕ ಜಾಲ ಇದೆ.

ಇದರಲ್ಲಿ ಮುಗ್ಧ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಮಾನಸಿಕ ಹಿಂಸೆ ನೀಡಿ ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಮಾನವ ಕಳ್ಳ ಸಾಗಣೆಯಿಂದ ಯಾವೆಲ್ಲ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬುದರ ಸ್ಪಷ್ಟ ಅರಿವು ಹೊಂದಿರುವ ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರಿಂದ ವಿನೂತನ ಅಭಿಯಾನ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿದೆ.

ಡಿಆರ್‌ಡಿಒ ಸಂಸ್ಥೆಯ ವಿನೋದ್ ಮಾತನಾಡಿದ್ದಾರೆ

ಭಿತ್ತಿ ಪತ್ರ ಹಿಡಿದು ಸಿಗ್ನಲ್​​ಗಳಲ್ಲಿ ಜಾಗೃತಿ : ಸಾಮಾನ್ಯವಾಗಿ ಭಿಕ್ಷಾಟನೆ ಮಾಡುವ ಮಹಿಳೆಯರು ಹಾಗೂ ಮಕ್ಕಳ ಹಿಂದೆ ಒಂದು ವ್ಯವಸ್ಥಿತ ಷಡ್ಯಂತ್ರ ಅಡಗಿದೆ.

ಮಕ್ಕಳ‌ ಕೈಯಲ್ಲಿ ಪೆನ್ನು, ಪುಸ್ತಕ ಕೊಟ್ಟು ಮಾರಾಟ ಮಾಡುವ ಉದ್ದೇಶದ ಹಿಂದೆ ಬೇರೆಯೊಂದು ದೃಷ್ಟಿಕೋನ ಅಡಗಿದೆ ಎನ್ನುತ್ತಾರೆ ಈ ಅಭಿಯಾನದ ರೂವಾರಿ ಡಿಆರ್‌ಡಿಒ ಸಂಸ್ಥೆಯ ವಿನೋದ್.

ಭಿಕ್ಷಾಟನೆ ನಿಷೇಧ ಕಾಯ್ದೆ 1975ರ ಪ್ರಕಾರ ನಿರ್ಗತಿಕರಿಗೆ ಜೀವನ ನಡೆಸಲು ಸರ್ಕಾರದಿಂದ ಉದ್ಯೋಗ ತರಬೇತಿ ನೀಡಲಾಗುತ್ತದೆ. ಈ ಕುರಿತು ಅವರಿಗೆ ಸರಿಯಾದ ಮಾಹಿತಿ ನೀಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಣ ನೀಡದಿದ್ದರೆ ಗ್ಯಾಂಗ್ ಒಡೆಯುತ್ತವೆ : ಭಿಕ್ಷಾಟನೆ ಮಾಡುವವರಿಗೆ ಅವಶ್ಯಕತೆ ಇದೆ ಎಂದಾದರೆ ಊಟ ನೀಡಿ. ಸಂಪೂರ್ಣವಾಗಿ ಎಲ್ಲೆಡೆ ಹಣ ಕೊಡುವುದನ್ನು ನಿಲ್ಲಿಸಿದಾಗ ಈ ಭಿಕ್ಷುಕರ ಹಿಂದಿರುವ ಗ್ಯಾಂಗ್ ಒಡೆದು ಹೋಗುತ್ತದೆ. ಮಾನವ ಕಳ್ಳ ಸಾಗಣೆ ಹಾಗೂ ಮಕ್ಕಳು ಮತ್ತು ಮಹಿಳೆಯರಿಗೆ ಕೊಡುವ ಹಿಂಸೆಯನ್ನು ತಪ್ಪಿಸಬಹುದು ಎಂದು ಹೇಳುತ್ತಾರೆ.

ಹತ್ತು ವಾರಗಳಿಂದ ನಮ್ಮ ಬೆಂಗಳೂರು ಹುಡುಗರು ತಂಡದ ಸದಸ್ಯರು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮತ್ತು ಮುಖ್ಯಮಂತ್ರಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಅಧಿಕೃತ ಒಪ್ಪಿಗೆಯನ್ನು ಪಡೆದಿದ್ದೇವೆ. ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಮತ್ತಿತರರು ಕೂಡ ಈ ವಿಚಾರಕ್ಕೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ ಎಂದು ವಿನೋದ್ ಮಾಹಿತಿ ನೀಡಿದ್ದಾರೆ.

ಓದಿ: ಇಂಧನ ದರ ಇಳಿಕೆ ಚಿಂತನೆ ಎಂಬ CM ಹೇಳಿಕೆ ಎಲೆಕ್ಷನ್ ಸ್ಟಂಟ್ ಅಷ್ಟೇ.. ಬೊಮ್ಮಾಯಿಗೆ ಸಿದ್ದರಾಮಯ್ಯ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.