ETV Bharat / state

ಬಿಬಿಎಂಪಿ ಕಸದ ಕಾಂಪ್ಯಾಕ್ಟರ್ ಹಗರಣ ತನಿಖೆಗೆ ಆದೇಶ - ಅಧಿಕಾರಿಗೆ ಶೋಕಾಸ್ ನೋಟಿಸ್

author img

By

Published : Dec 3, 2019, 9:15 AM IST

ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಸಮಸ್ಯೆ ನಡುವೆ ಬಿಬಿಎಂಪಿ ತ್ಯಾಜ್ಯ ಸಾಗಣೆ ಮಾಡುವ ಕಾಂಪ್ಯಾಕ್ಟರ್​ಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.

BBMP trash compactor scam
ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ಸಾಗಣೆ ಮಾಡುವ ಕಾಂಪ್ಯಾಕ್ಟರ್ ವಾಹನ ಖರೀದಿ ಹಾಗೂ ನಿರ್ವಹಣೆಯಲ್ಲಾಗಿರುವ ಹಗರಣದ ಬಗ್ಗೆ ಈಗಾಗಲೇ ಸಾಕಷ್ಟು ಸದ್ದಾಗಿತ್ತು. ತಾತ್ಕಾಲಿಕವಾಗಿ ಈ ಸುದ್ದಿ ತಣ್ಣಗಾಗಿತ್ತಾದರೂ, ಮತ್ತೆ ಈ ಹಗರಣ ಮುನ್ನಲೆಗೆ ಬಂದಿದೆ.

BBMP trash compactor scam
ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಕೆ

ಕಾಂಪ್ಯಾಕ್ಟರ್​ಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ. 125 ಕಾಂಪ್ಯಾಕ್ಟರ್ ಲಾರಿಗಳ ನಿರ್ವಹಣೆಯೂ ಕಳಪೆಯಾಗಿರುವುದರ ಬಗ್ಗೆ ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಸಿದ್ದರು. ಇದಕ್ಕೆ ಪಾಲಿಕೆಯಿಂದ ಎಷ್ಟೇ ವಿವರ ಕೇಳಿದರೂ, ಲೋಕಾಯುಕ್ತಕ್ಕೆ ಸಮರ್ಪಕ ದಾಖಲೆ ಸಲ್ಲಿಸದ ಹಿನ್ನಲೆ ಇದೀಗ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ವಿರುದ್ಧ ಶೋಕಾಸ್ ನೋಟಿಸ್ ಜಾರಿಯಾಗಿದೆ.

ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಕೆ

ಲೋಕಾಯುಕ್ತರಾದ ವಿಶ್ವನಾಥ್ ಶೆಟ್ಟಿ ಈ ಬಗ್ಗೆ ನೋಟಿಸ್ ಕಳಿಸಿದ್ದು, ಜಂಟಿ ಆಯುಕ್ತ ಸರ್ಫರಾಜ್ ಖಾನ್​ಗೆ ಡಿಸೆಂಬರ್ 12 ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರ ಎಸ್​ಪಿಗೆ, ಈ ಅವ್ಯವಹಾರದ ತನಿಖೆಗೆ ನಿರ್ದೇಶನ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ತಿಳಿಸಿದರು.

Intro:ಬಿಬಿಎಂಪಿ ಕಸದ ಕಾಂಪ್ಯಾಕ್ಟರ್ ಹಗರಣ ತನಿಖೆಗೆ ಆದೇಶ- ಅಧಿಕಾರಿಗೆ ಶೋಕಾಸ್ ನೋಟೀಸ್


ಬೆಂಗಳೂರು- ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ಸಾಗಾಟ ಮಾಡುವ ಕಾಂಪ್ಯಾಕ್ಟರ್ ವಾಹನ ಖರೀದಿ ಹಾಗೂ ನಿರ್ವಹಣೆಯಲ್ಲಾಗಿರುವ ಹಗರಣದ ಬಗ್ಗೆ ಈಗಾಗಲೇ ಸಾಕಷ್ಟು ಸದ್ದಾಗಿತ್ತು. ತಾತ್ಕಾಲಿಕವಾಗಿ ಈ ಸುದ್ದಿ ತಣ್ಣಗಾಗಿತ್ತಾದರೂ, ಮತ್ತೆ ಈ ಹಗರಣ ಮುನ್ನಲೆಗೆ ಬಂದಿದೆ.
ಕಾಂಪ್ಯಾಕ್ಟರ್ ಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ. 125 ಕಾಂಪ್ಯಾಕ್ಟರ್ ಲಾರಿಗಳ ನಿರ್ವಹಣೆಯೂ ಕಳಪೆಯಾಗಿರುವುದರ ಬಗ್ಗೆ ಲೋಕಾಯುಕ್ತದಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ದೂರು ಸಲ್ಲಿಸಿದ್ದರು. ಇದಕ್ಕೆ ಪಾಲಿಕೆಯಿಂದ ಎಷ್ಟೇ ವಿವರ ಕೇಳಿದರೂ, ಲೋಕಾಯುಕ್ತಕ್ಕೆ ಸಮರ್ಪಕ ದಾಖಲೆ ಸಲ್ಲಿಸದ ಹಿನ್ನಲೆ ಇದೀಗ ಘನತ್ಯಾಜ್ಯ ನಿರ್ವಹಣೆ ಯ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ವಿರುದ್ಧ ಶೋಕಾಸ್ ನೋಟೀಸ್ ಜಾರಿಯಾಗಿದೆ.
ಲೋಕಾಯುಕ್ತರಾದ ವಿಶ್ವನಾಥ್ ಶೆಟ್ಟಿ ಈ ಬಗ್ಗೆ ನೋಟೀಸು ಕಳಿಸಿದ್ದು, ಜಂಟಿ ಆಯುಕ್ತ ಸರ್ಫರಾಜ್ ಖಾನ್ ಗೆ ಡಿಸೆಂಬರ್ 12 ಕ್ಕೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಅಲ್ಲದೆ ಬೆಂಗಳೂರು ನಗರ ಎಸ್ ಪಿಗೆ, ಈ ಅವ್ಯವಹಾರದ ತನಿಖೆಗೆ ನಿರ್ದೇಶನ ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ತಿಳಿಸಿದರು.




ಸೌಮ್ಯಶ್ರೀ
Kn_bng_06_bbmp_compactor_Jagarana_7202707Body:.Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.