ETV Bharat / state

ಬಸವಣ್ಣನ ಆದರ್ಶಗಳ‌ ಪಾಲನೆ ಅಗತ್ಯ: ಅಬಕಾರಿ ಸಚಿವ

author img

By

Published : May 3, 2022, 3:40 PM IST

ಮುಂದೆ ಬಸವ ಜಯಂತಿಯನ್ನು ಯಾರೇ ಆಚರಿಸಿದರೂ ಆ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಪುಸ್ತಕಗಳನ್ನು ಜನರಿಗೆ ವಿತರಿಸುವ ಮೂಲಕ ಅವರ ವಚನಗಳಲ್ಲಿ ಇರುವ ಆದರ್ಶ ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಸಚಿವರು ಕರೆ ನೀಡಿದರು.

ಬಸವಣ್ಣನವರ ಆದರ್ಶಗಳ‌ ಪಾಲನೆ ಅಗತ್ಯ ಎಂದ ಅಬಕಾರಿ ಸಚಿವ
ಬಸವಣ್ಣನವರ ಆದರ್ಶಗಳ‌ ಪಾಲನೆ ಅಗತ್ಯ ಎಂದ ಅಬಕಾರಿ ಸಚಿವ

ಬೆಂಗಳೂರು: ಜಗತ್ತಿಗೆ ಬೆಳಕು ನೀಡಿದ ಶ್ರೀ ಬಸವೇಶ್ವರರ ಆದರ್ಶ, ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ. ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಗಪುರದಲ್ಲಿರುವ ಶಾಸಕರ ಕಚೇರಿಯಲ್ಲಿಂದು ಆಯೋಜಿಸಲಾಗಿದ್ದ ವಿಶ್ವಗುರು ಬಸವಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಬಸವ ಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಬಸವ ಕಲ್ಯಾಣ ಅಭಿವೃದ್ಧಿಗೆ ಮುಂದಾಗಿದ್ದರು. ಇಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಅಭಿವೃದ್ಧಿಯನ್ನು ಮುಂದುವರಿಸಿದ್ದು, ಇದು ಪೂರ್ಣಗೊಂಡರೆ ಇಡೀ ದೇಶವೇ ಮೆಚ್ಚುವಂತಹ ಸ್ಮಾರಕ ಅಲ್ಲಿ ನಿರ್ಮಾಣವಾಗಲಿದೆ ಎಂದರು.

ಇದನ್ನೂ ಓದಿ: ಸಿಎಂ ಬೊಮ್ಮಾಯಿ ಭೋಜನ ಕೂಟದಲ್ಲಿ ಹೋಳಿಗೆ ಊಟ ಸವಿದ ಅಮಿತ್ ಶಾ!

ಮುಂದೆ ಬಸವ ಜಯಂತಿಯನ್ನು ಯಾರೇ ಆಚರಿಸಿದರೂ ಆ ಕಾರ್ಯಕ್ರಮದಲ್ಲಿ ಬಸವಣ್ಣನವರ ವಚನಗಳ ಪುಸ್ತಕಗಳನ್ನು ಜನರಿಗೆ ವಿತರಿಸುವ ಮೂಲಕ ಅವರ ವಚನಗಳಲ್ಲಿ ಇರುವ ಆದರ್ಶಯುತ ಜೀವನ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಯಡಿಯೂರಿನ ರಂಭಾಪುರಿ ಖಾಸಾ ಶಾಖಾ ಮಠಾಧ್ಯಕ್ಷರಾದ ಶ್ರೀ ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ, ವೀರಶೈವ ವಿದ್ಯಾಭಿವೃದ್ಧಿ ಮಂಡಳಿ ಅಧ್ಯಕ್ಷ ಪರಿಮಶಿವಯ್ಯ, ಶರಣ ಸೇವಾ ಸಮಾಜದ ಅಧ್ಯಕ್ಷ ನಟರಾಜ್, ಬಿಬಿಎಂಪಿ ಮಾಜಿ ಸದಸ್ಯರಾದ ಎಂ,ಮಹದೇವ್, ರಾಜೇಂದ್ರಕುಮಾರ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.