ETV Bharat / state

ಬೆಂಗಳೂರು: 4 ಚೀಲಗಳಲ್ಲಿದ್ದ 77 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು

author img

By

Published : May 30, 2021, 10:12 AM IST

ದಂಡು ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೋರ್ವ ನಾಲ್ಕು ಚೀಲಗಳಲ್ಲಿ ಇಟ್ಟುಕೊಂಡಿದ್ದ 77 ಮದ್ಯದ ಬಾಟಲಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

bangalore Railway Police seized 77 illegal liquor bottle
4 ಚೀಲದಲ್ಲಿದ್ದ 77 ಮದ್ಯದ ಬಾಟಲಿ, ಆರೋಪಿ ಪೊಲೀಸರ ವಶ

ಬೆಂಗಳೂರು: ನಾಲ್ಕು ಚೀಲಗಳಲ್ಲಿದ್ದ 77 ಮದ್ಯದ ಬಾಟಲಿಗಳನ್ನು ದಂಡು ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಸೀಜ್ ಮಾಡಿ ಮದ್ಯವನ್ನು ಅಬಕಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಿನ್ನೆ ಮುಂಜಾನೆ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮತ್ತು ಕಾನ್ಸ್​ಟೇಬಲ್​​ ರಾಕೇಶ್ ಮೌರ್ಯ ಬೆಂಗಳೂರು ಕಂಟೋನ್ಮೆಂಟ್‌ನ ಪ್ಲಾಟ್‌ಫಾರ್ಮ್ ಸಂಖ್ಯೆ 02ರಲ್ಲಿ 4 ಚೀಲಗಳನ್ನು ನೋಡಿ ಅನುಮಾನಗೊಂಡು ತಮ್ಮ ವಶಕ್ಕೆ ಪಡೆದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಪ್ರಯಾಣಿಕ ಸುಕಂತ ದಾಸ್ (36) ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ತಿರುವನಂತಪುರ ಸೆಂಟ್ರಲ್‌ಗೆ ಹೋಗುವ ಐಲ್ಯಾಂಡ್ ಎಕ್ಸ್‌ಪ್ರೆಸ್ ಹತ್ತಲು ಚೀಲಗಳನ್ನು ಹಿಡಿದು ಹೊರಟಿದ್ದ.

ಯಾವುದೇ ಸರಿಯಾದ ಬಿಲ್ ಇಲ್ಲದ ಚೀಲಗಳನ್ನು ದಂಡು ನಿಲ್ದಾಣದ ರೈಲ್ವೆ ಪೊಲೀಸರು ಪರಿಶೀಲಿಸಲು ಮುಂದಾದಾಗ ಬೇರೆ ಬೇರೆ ಬ್ರ್ಯಾಂಡ್‌ನ ಮದ್ಯ ಪತ್ತೆಯಾಗಿದೆ. ಕೇರಳ ರಾಜ್ಯದಲ್ಲಿ ಇದನ್ನು ಅಕ್ರಮವಾಗಿ ಹೆಚ್ಚಿನ ದರದಲ್ಲಿ ಮಾರಲು, ಜಕ್ಕೂರಿನಲ್ಲಿರುವ ಮದ್ಯದಂಗಡಿಯಲ್ಲಿ ಖರೀದಿಸಿದ್ದಾಗಿ ಸುಕಂತ ದಾಸ್ ಒಪ್ಪಿಕೊಂಡಿದ್ದಾನೆ.

ಸುಮಾರು 26,433 ರೂ. ಮೌಲ್ಯದ ಒಟ್ಟು 77 ಬಾಟಲ್​​ಗಳನ್ನು ಸೀಜ್ ಮಾಡಿ ಮುಂದಿನ ಕ್ರಮ ಕೈಗೊಳ್ಳಲು ರಾಜ್ಯ ಅಬಕಾರಿ ಇಲಾಖೆಗೆ ರೈಲ್ವೆ ಪೊಲೀಸರು ಹಸ್ತಾಂತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.