ETV Bharat / state

ಮಾರುಕಟ್ಟೆಯಲ್ಲಿ ಜನಜಂಗುಳಿ: 20ಕ್ಕೂ ಹೆಚ್ಚು ಮಾರ್ಷಲ್​ಗಳ ನೇಮಕ

author img

By

Published : Apr 29, 2021, 12:34 PM IST

ಕರ್ಫ್ಯೂ​ ಜಾರಿ ಹಿನ್ನೆಲೆ ರಾಜ್ಯ ಸರ್ಕಾರ 10 ಗಂಟೆಯವರೆಗೆ ವ್ಯಾಪಾರ ವಾಹಿವಾಟಿಗೆ ಅನುಮತಿ ಕೊಟ್ಟಿದೆ. ಹಾಗಾಗಿ ತರಕಾರಿ, ಹಣ್ಣು, ದಿನಸಿ ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಜನರು ಮುಗಿಬೀಳುತ್ತಿದ್ದಾರೆ. ಇತ್ತ ಹೆಚ್ಚು ಜನ ಸೇರುತ್ತಿದ್ದ ಹಿನ್ನೆಲೆ 20ಕ್ಕೂ ಹೆಚ್ಚು ಮಾರ್ಷಲ್​​ಗಳನ್ನು ನಗರದ ಒಂದೊಂದು ಮಾರುಕಟ್ಟೆಗೆ ನಿಯೋಜಿಸಲಾಗಿದೆ.

Bangalore
ಮಾರುಕಟ್ಟೆಯಲ್ಲಿ ಜನಜಂಗುಳಿ: 20ಕ್ಕೂ ಹೆಚ್ಚು ಮಾರ್ಷಲ್​ಗಳ ನೇಮಕ

ಬೆಂಗಳೂರು: ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ 15 ದಿನಗಳ ಕಾಲ ಕರ್ಫ್ಯೂ ಜಾರಿಯಲ್ಲಿದ್ದು, ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.

ಮಾರುಕಟ್ಟೆಯಲ್ಲಿ ಜನಜಂಗುಳಿ: 20ಕ್ಕೂ ಹೆಚ್ಚು ಮಾರ್ಷಲ್​ಗಳ ನೇಮಕ

ಕರ್ಫ್ಯೂ​ ಜಾರಿ ಹಿನ್ನೆಲೆ ರಾಜ್ಯ ಸರ್ಕಾರ 10 ಗಂಟೆಯವರೆಗೆ ವ್ಯಾಪಾರ ವಾಹಿವಾಟಿಗೆ ಅನುಮತಿ ಕೊಟ್ಟಿದೆ. ಹಾಗಾಗಿ ತರಕಾರಿ, ಹಣ್ಣು, ದಿನಸಿ ಖರೀದಿ ಮಾಡಲು ಮಾರುಕಟ್ಟೆಯಲ್ಲಿ ಜನರು ಮುಗಿಬೀಳುತ್ತಿದ್ದಾರೆ. ನಗರದ ಸಿಟಿ ಮಾರ್ಕೆಟ್​ನಲ್ಲಿ ವ್ಯಾಪಾರ ವಾಹಿವಾಟು ಜೋರಾಗಿದ್ದು, ಮಾಸ್ಕ್​ ಧರಿಸಿ ಜನಸಾಮಾನ್ಯರು ಖರೀದಿಗೆ ಮುಂದಾಗಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿರುವುದು ಸಹ ಕಂಡು ಬರುತ್ತಿದೆ.

ಮಾರ್ಷಲ್​ಗಳ ನೇಮಕ:

ಹೆಚ್ಚು ಜನ ಸೇರುತ್ತಿದ್ದ ಹಿನ್ನೆಲೆ 20ಕ್ಕೂ ಹೆಚ್ಚು ಮಾರ್ಷಲ್​​ಗಳನ್ನು ನಗರದ ಒಂದೊಂದು ಮಾರುಕಟ್ಟೆಗೆ ನಿಯೋಜಿಸಲಾಗಿದೆ. ಹಾಗೆಯೇ ಸ್ಥಳದಲ್ಲಿ ಬಿಬಿಎಂಪಿ ಅಧಿಕಾರಿಗಳು ಕೂಡ ರೌಂಡ್ಸ್ ಹಾಕುತ್ತಿದ್ದು, ಮಾಸ್ಕ್ ಕಡ್ಡಾಯವಾಗಿ ಹಾಕಬೇಕು, 10 ಗಂಟೆಗೆ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸುತ್ತಿದ್ದಾರೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ಜನಜಂಗುಳಿ:

2ನೇ ದಿನವೂ ಸಿಲಿಕಾನ್ ಸಿಟಿ ಮಂದಿ ನಗರವನ್ನು ತೊರೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳತ್ತ ತೆರಳಲು ಪ್ರಯಾಣಿಕರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿಯೇ ಬೀಡು ಬಿಟ್ಟಿದ್ದಾರೆ. ನಿನ್ನೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕೆಲ ಪ್ರಯಾಣಿಕರು ಇಂದು ತಮ್ಮ ಊರುಗಳತ್ತ ತೆರಳಲು ರೈಲಿಗಾಗಿ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.