ETV Bharat / state

ಯೋಜನೆಯಿಲ್ಲದೇ ಬೆಂಗಳೂರು ಅಭಿವೃದ್ಧಿ ಮಾಡಿದ್ದಾರೆ: ಸರ್ಕಾರದ ವಿರುದ್ಧ ಹರಿಪ್ರಸಾದ್ ಕಿಡಿ

author img

By

Published : Feb 4, 2023, 7:18 PM IST

Updated : Feb 4, 2023, 7:59 PM IST

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬಿಜೆಪಿ ವಿಫಲ - ಮಹಾನಗರಿಗೆ ಸೇರಿರುವ ಗ್ರಾಮಗಳು ಅಭಿವೃದ್ಧಿ ಆಗಿಲ್ಲ - ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಗರಂ.

B K Hariprasad
Etv Bharatವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್

ಯೋಜನೆಯಿಲ್ಲದೇ ಬೆಂಗಳೂರು ಅಭಿವೃದ್ಧಿ ಮಾಡಿದ್ದಾರೆ- ಸರ್ಕಾರದ ವಿರುದ್ಧ ಹರಿಪ್ರಸಾದ್ ಕಿಡಿ

ಬೆಂಗಳೂರು: ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಬಿಜೆಪಿ ವಿಫಲ ಆಗಿದೆ. ಮಹಾನಗರಿಗೆ ಸೇರಿರುವ 110 ಹಳ್ಳಿಗಳ ಅಭಿವೃದ್ಧಿ ಆಗಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಬಿಜೆಪಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇಲ್ಲ. ಬೆಂಗಳೂರನ್ನು ಪ್ಲಾನ್ ಇಲ್ಲದೆ ಅಭಿವೃದ್ಧಿ ಮಾಡಿದ್ದಾರೆ. ಸ್ಯಾಂಕಿ ಕರೆ ರಸ್ತೆ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಬೇರೆ ಕರೆಗಳ ಸ್ಥಿತಿ ಈ ಕರೆಗೆ ಬರಬಾರದು, ಕೆರೆ ಉಳಿಸಬೇಕಿದೆ. ರಸ್ತೆ ಅಭಿವೃದ್ಧಿ, ಪ್ಲೈಓವರ್ ಮಾಡೋಕೆ ಮುಂದಾಗಿದೆ'' ಎಂದು ಹೇಳಿದರು.

ಸ್ಯಾಂಕಿ ಕರೆ ಉಳಿಯಬೇಕು ಹರಿಪ್ರಸಾದ್​ ಒತ್ತಾಯ: ''ಇಲ್ಲಿ ಇರುವ 150 ವರ್ಷಗಳ ಮರಗಳಿವೆ. ಅದನ್ನ ತೆಗೆದು ಅಭಿವೃದ್ಧಿ ಮಾಡಬೇಕಿಲ್ಲ. ಅಲ್ಲಿ ಇರುವ ಜನರ ಜೊತೆ ಚರ್ಚೆ ಮಾಡಬೇಕು. ಚುನಾವಣೆ ಬರುತ್ತಿದೆ ಅಂತ ಏಕಾಏಕಿ ಕೆಲಸ ಮಾಡುವುದು ಸರಿಯಿಲ್ಲ. ತರಾತುರಿಯಲ್ಲಿ ಮಾಡೋದು ಸರಿಯಿಲ್ಲ. ಪರ್ಯಾಯ ರಸ್ತೆಗಳು ಇವೆ. ಅಲ್ಲಿ ರಸ್ತೆ ಅಭಿವೃದ್ಧಿ, ಪ್ಲೇಓವರ್ ಮಾಡಿದರೆ ಕಾವೇರಿ ಥಿಯೇಟರ್ ಜಂಕ್ಷನ್ ಬಳಿ ಬಾಟಲ್ ನೆಕ್ ಇದೆ. ಅಲ್ಲಿ ಹೆಚ್ಚು ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ. ಬಳ್ಳಾರಿ ರಸ್ತೆ ಅಭಿವೃದ್ಧಿ ಆಗ್ತಾ ಇದೆ. ನಾವು ಸರ್ಕಾರವನ್ನು,ಬಿಬಿಎಂಪಿಯನ್ನು ನಾನು ಒತ್ತಾಯಿಸುತ್ತೇನೆ. ಈ ಪ್ಲೇಓವರ್, ರಸ್ತೆ ಯೋಜನೆ ಬಿಡಿ. ಸ್ಯಾಂಕಿ ಕರೆ ಉಳಿಯಬೇಕು, ಜೊತೆಗೆ ಅಭಿವೃದ್ಧಿ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ'' ಎಂದು ಬಿ ಕೆ ಹರಿಪ್ರಸಾದ್​ ಹೇಳಿದರು.

ಅಮಿತ್ ಶಾ ಸಿಡಿ ಎಕ್ಸ್​ಪರ್ಟ್: ''ಪ್ರತಿನಿತ್ಯ ಸಿಡಿ ವಿಚಾರ ಚರ್ಚೆಯಾಗ್ತಿದೆ. ಮಾಡಿದವರನ್ನ, ಮಾಡಿಸಿಕೊಂಡವರನ್ನ ಈ ವಿಚಾರ ಕೇಳಬೇಕು. ಇವರು ಅಮಿತ್ ಶಾ ಬಳಿ ಯಾಕೆ ಹೋಗಬೇಕು. ಅಮಿತ್ ಶಾ ಸಿಡಿ ಎಕ್ಸ್ ಪರ್ಟ್. ಸಂಜಯ್ ಜೋಶಿಯವರ ಸಿಡಿ ಮಾಡಿಸಿದವ್ರು ಅಮಿತ್​ ಶಾ. ಅದಕ್ಕೆ ಅವರು ಅಲ್ಲಿಗೆ ಹೋಗಿರಬೇಕು. ರಮೇಶ್ ಜಾರಕಿಹೊಳಿ, ಅಮಿತ್ ಶಾ ಭೇಟಿ ಬಗ್ಗೆ ಹರಿಪ್ರಸಾದ್ ವ್ಯಂಗ್ಯವಾಡಿದರು.

ಪ್ಲೈ ಓವರ್ ಮಾಡುವುದು ಬೇಡ: ''ಟ್ರಾಫಿಕ್ ನಿರ್ವಹಣೆ ಮಾಡಿ ಸಮಸ್ಯೆಯಿಲ್ಲದಂತೆ ಕ್ರಮವಹಿಸಬೇಕು. ಆದರೆ ಅಲ್ಲಿ ಪ್ಲೈ ಓವರ್ ಮಾಡುವುದು ಬೇಡ. ಮರಗಳ ಮಾರಣಹೋಮ ಬೇಡ. ಹಿಂದೆ ಇವರೇ ಪ್ಲೈ ಓವರ್ ಗೆ ವಿರೋಧ ಮಾಡಿದರು. ಈಗ ಇವರೇ ಯಾಕೆ ಪ್ಲೈಓವರ್ ಗೆ ಕೈಹಾಕಿದ್ದಾರೆ'' ಎಂದು ಮಾಜಿ ಶಾಸಕ ಪ್ರಿಯಾಂಕ್ ಖರ್ಗೆ ಅಸಮಾಧಾನ ಹೊರಹಾಕಿದರು.

''ಈ ಕಾಮಗಾರಿಯ ಡಿಪಿಆರ್ ಯಾಕೆ ಪಬ್ಲಿಕ್ ಮಾಡಲಾಗ್ತಿಲ್ಲ. ಡಿಪಿಆರ್ ಕೇಳಿದರೆ ಕೊಡೋಕೆ ಬರಲ್ಲ ಅಂತಾರೆ. ಸಾರ್ವಜನಿಕ ಸ್ವತ್ತು ಯಾಕೆ ಕೊಡಲಾಗಲ್ಲ. ಪರಿಸರದ ಮೇಲೆ ಇದರ ಪರಿಣಾಮವಾಗಲಿದೆ. ಚರ್ಚೆಯಾಗದೆ ಯೋಜನೆ ಮಾಡುವುದು ಸರಿಯಲ್ಲ. ಗ್ರೀನ್ ಟ್ರಿಬ್ಯೂನಲ್ ನಿಯಮ ಎಲ್ಲಿ ಪಾಲಿಸ್ತಿದ್ದೀರಾ?''.

ಹಣ ಹೊಡೆಯುವ ತಂತ್ರಕ್ಕೆ ಮುಂದಾಗಬೇಡಿ: ಬಿಎಂಆರ್​ಟಿ ಬಳಿ ಇದರ ಪ್ಲಾನ್ ಆಗಬೇಕು. ಅಲ್ಲಿಗೆ ಹೋಗಿಯೇ ಇಲ್ವಲ್ಲಾ. ಎಲ್ಲ ಮುಚ್ಚಿಟ್ಟು ಯೋಜನೆ ಮಾಡೋದು ಸರಿಯಲ್ಲ. ದುಡ್ಡು ಹೊಡೆಯೋಕೆ ಈ ರೀತಿ ಮಾಡ್ತಿದ್ದೀರಾ? ಕೂಡಲೇ ಈ ಯೋಜನೆ ಕೈಬಿಡಬೇಕು. ಪ್ಲೈ ಓವರ್ ಯಾಕೆ ಅಂತ ಜ‌ನ ಕೇಳ್ತಿದ್ದಾರೆ. ಜನರ ಪ್ರಶ್ನೆಗಳಗೆ ಮೊದಲು ನೀವು ಉತ್ತರ ಕೊಡಿ. ಚುನಾವಣೆ ಹತ್ತಿರ ಬಂದಿದ್ದು, ಹಣ ಹೊಡೆಯವ ತಂತ್ರಕ್ಕೆ ಮುಂದಾಗಬೇಡಿ. ಚುನಾವಣೆಗೆ ದುಡ್ಡು ಸಂಗ್ರಹಣೆ ಮಾಡ್ತಿದ್ದೀರಾ'' ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ಇದನ್ನೂ ಓದಿ: ಎಸ್ ಎಂ ಕೃಷ್ಣ ಭೇಟಿಯಾಗಿ ಅಭಿನಂದಿಸಿದ ಬಿ.ಎಲ್ ಸಂತೋಷ್, ನಳಿನ್ ಕುಮಾರ್ ಕಟೀಲ್..

Last Updated : Feb 4, 2023, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.