ETV Bharat / state

ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಅಬ್ರಹಾರ್ ಗ್ಯಾಂಗ್​ ಮತ್ತೆ ಆ್ಯಕ್ವಿವ್

author img

By

Published : Dec 24, 2022, 11:12 AM IST

ಶಿವಾಜಿನಗರದಲ್ಲಿ ಉದ್ಯಮಿಯೊಬ್ಬರನ್ನ ಹಾಡಹಗಲೇ ಸುಲಿಗೆ ಮಾಡಿ ಸುದ್ದಿಯಾಗಿದ್ದ ಅಬ್ರಹಾರ್ ಗ್ಯಾಂಗ್​ ಮತ್ತೆ ಆ್ಯಕ್ವಿವ್​ ಆಗಿದೆ.

abrahar gang active again
ಅಬ್ರಹಾರ್ ಗ್ಯಾಂಗ್​ ಮತ್ತೆ ಆ್ಯಕ್ವಿವ್

ಬೆಂಗಳೂರು: ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಸುದ್ದಿಯಾಗಿದ್ದ ಕುಖ್ಯಾತ ರೌಡಿಶೀಟರ್ ತಂಡ ಮತ್ತೆ ನಗರದಲ್ಲಿ ಸಕ್ರಿಯವಾಗಿದೆ. ಕೆ.ಜಿ ಮೋಸ್ಟ್ ವಾಂಟೆಡ್ ರೌಡಿಶೀಟರ್ ಹಾಗೂ ಕಳ್ಳ ಅಬ್ರಹಾರ್ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಮಾರಕಾಸ್ತ್ರ ಹಿಡಿದು ಅಡ್ಡಾಡುತ್ತಿರುವ ದೃಶ್ಯಗಳು ಸದ್ಯ ವೈರಲ್ ಆಗಿವೆ.

ಯಾರು ಈ ಅಬ್ರಹಾರ್?: ಕೆ.ಜಿ.ಹಳ್ಳಿಯ ಜನರ ನಿದ್ದೆಗೆಡಿಸಿದ್ದ ಅಬ್ರಹಾರ್ ಹಾಗೂ ಮಿರಾಜ್ ಅಬ್ರಹಾರ್ ತಂಡ ಈ ಹಿಂದೆ ಶಿವಾಜಿನಗರದಲ್ಲಿ ಉದ್ಯಮಿಯೊಬ್ಬರನ್ನ ಹಾಡಹಗಲೇ ಸುಲಿಗೆ ಮಾಡಿ ಸುದ್ದಿಯಾಗಿತ್ತು. ಬಂಧನಕ್ಕೆ ತೆರಳಿದ್ದಾಗ ತುಮಕೂರು ಹಾಗೂ ಕೋಲಾರದಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ ಎಸ್ಕೇಪ್ ಆಗಿತ್ತು. ಸಲೀಂ ಎಂಬಾತನ ಮರ್ಡರ್ ಕೇಸಲ್ಲಿ ಕೆ.ಜಿ ಹಳ್ಳಿ ಪೊಲೀಸರು ಈ ಇಬ್ಬರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದರು. ಪುಟ್ಟೇನಹಳ್ಳಿ ಬಳಿ ಆರೋಪಿಗಳನ್ನ ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ದಾಳಿ ಮಾಡಿತ್ತು. ಸದ್ಯ ಮಿರಾಜ್ ಅಬ್ರಹಾರ್ ಜೈಲಿನಲ್ಲಿದ್ದು, ಅಬ್ರಹಾರ್ ಹೊರಗಡೆ ಸಕ್ರಿಯನಾಗಿದ್ದಾನೆ.

ಸದ್ಯ ರಾಜಗೋಪಾಲನಗರ, ಬ್ಯಾಡರಹಳ್ಳಿ ಭಾಗದಲ್ಲಿ ಅಬ್ರಹಾರ್ ಟೀಂ ಮಾರಕಾಸ್ತ್ರ ಹಿಡಿದು ಸುಲಿಗೆ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ತಂಡ ಮತ್ತೆ ಆ್ಯಕ್ಟಿವ್ ಆಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್​ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: ಆನೇಕಲ್: ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆಸಿದ ರೌಡಿಶೀಟರ್ ಗ್ಯಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.