ETV Bharat / state

ಉಂಡ ಮನೆಗೆ ಕನ್ನ ಹಾಕಿದ ಮಹಿಳೆ: ಸಾಥ್ ನೀಡಿದವನನ್ನೂ ಬಂಧಿಸಿದ ಪೊಲೀಸರು

author img

By

Published : Mar 24, 2021, 5:55 PM IST

ಉಂಡ ಮನೆಯ ಜಂತಿ ಎಣಿಸಿ ಕಳ್ಳತನ ಮಾಡಿದ್ದ ಮಹಿಳೆ ಸೇರಿ ಕೃತ್ಯಕ್ಕೆ ಸಹಾಯ ಮಾಡಿದ್ದ ಓರ್ವನನ್ನು ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

arrest-of-two-robbers-in-bangalore
ಬೆಂಗಳೂರಿನಲ್ಲಿ ಇಬ್ಬರು ಕಳ್ಳರ ಬಂಧನ

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ವ್ಯಕ್ತಿಯನ್ನು ಕೆಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಅನು ಹಾಗೂ ರೇಣುಕಾನಂದ ಬಂಧಿತ ಆರೋಪಿಗಳು. ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಅನು ಹೋಟೆಲ್​ ಜೊತೆಗೆ ಮನೆಗೆಲಸ ಮಾಡಿಕೊಂಡಿದ್ದಳು. ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನದ ಸರ ಮತ್ತು ಉಂಗುರ ಕದ್ದು ಆರೋಪಿ ರೇಣುಕಾನಂದನಿಗೆ ನೀಡಿದ್ದಳು.

ಮನೆಯ ಮಾಲೀಕರು ದೂರು ನೀಡಿದ ಹಿನ್ನೆಲೆ ವಿಚಾರಣೆ ನಡೆಸಿದಾಗ ಅನು ತಾನೇ ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.