ETV Bharat / state

ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಡಿಮ್ಯಾಂಡ್ ಮಾಡ್ತಿದ್ದ ಪ್ರೇಮಿಗಳ ಬಂಧನ

author img

By

Published : Jul 18, 2022, 8:33 PM IST

Updated : Jul 18, 2022, 9:18 PM IST

ಖಾಸಗಿ ವಿಡಿಯೋ ಸೆರೆಹಿಡಿದುಕೊಂಡು ಪ್ರೇಮಿಗಳನ್ನು ಬ್ಲಾಕ್​ ಮೇಲ್​ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ವಿಡಿಯೋ ಚಿತ್ರಿಸಿಕೊಂಡು ಹಣಕ್ಕೆ ಬೇಡಿಕೆ
ಖಾಸಗಿ ವಿಡಿಯೋ ಚಿತ್ರಿಸಿಕೊಂಡು ಹಣಕ್ಕೆ ಬೇಡಿಕೆ

ಬೆಂಗಳೂರು: ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಪ್ರೇಮಿಗಳನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಬಾಗಲೂರಿನ ನಿವಾಸಿಗಳಾದ ಉಷಾ ಮತ್ತು ಸುರೇಶ್ ಬಾಬು ಬಂಧಿತ ಅರೋಪಿಗಳು. ಬಂಧಿತ ಆರೋಪಿಗಳು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಇಬ್ಬರು ಪ್ರೇಮಿಗಳಾಗಿದ್ದು,‌ ಮುಂದಿನ‌ ತಿಂಗಳು‌ ಎಂಗೇಜ್ ಮೆಂಟ್ ಸಹ ನಿಗದಿಯಾಗಿತ್ತು‌. ಆರೋಪಿ ಸುರೇಶ್ ಏರಿಯಾದಲ್ಲಿರುವ ಲಾಡ್ಜ್​​​ಗೆ ಆಗಾಗ ಹೋಗಿಬರುತ್ತಿದ್ದ. ಈ ವೇಳೆ ಉಷಾಳ ಸಂಬಂಧಿಕ ಮಹಿಳೆಯು ತನ್ನ ಸ್ನೇಹಿತನ ಜೊತೆ ಲಾಡ್ಜ್ ಬಂದು ಹೋಗುತ್ತಿರುವ ಬಗ್ಗೆ ಇವರಿಬ್ಬರೂ ಗಮನಿಸಿದ್ದಾರೆ.

ನಂತರ ಇಬ್ಬರು ಸೇರಿ ಪ್ಲ್ಯಾನ್ ಮಾಡಿಕೊಂಡು ಅವರು ಬರುತ್ತಿದ್ದ ಕೋಣೆಗೆ ರಹಸ್ಯವಾಗಿ ಕ್ಯಾಮರಾ ಇಟ್ಟಿದ್ದಾರೆ. ಜುಲೈ 15 ರಂದು ದೂರುದಾರ ಮಹಿಳೆ ಹಾಗೂ‌‌ ಆಕೆಯ ಸ್ನೇಹಿತ ಲಾಡ್ಜ್ ಗೆ ಬಂದು ಖಾಸಗಿ ಕ್ಷಣ ಕಳೆದಿದ್ದಾರೆ.

ಆರೋಪಿ ಯುವತಿ
ಆರೋಪಿ ಯುವತಿ

ಈ ಖತರ್ನಾಕ್​ ಪ್ರೇಮಿಗಳು ಆ ವಿಡಿಯೋವನ್ನು ಸೆರೆಹಿಡಿದುಕೊಂಡು ಇವರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅದರಲ್ಲೂ 25 ಲಕ್ಷ ಹಣ ನೀಡಬೇಕು, ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡುತ್ತೇವೆ ಹಾಗೂ ಕುಟುಂಬಸ್ಥರಿಗೆ ವಿಡಿಯೊ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಈ ಸಂಬಂಧ ಬಾಗಲೂರು ಪೊಲೀಸರಿಗೆ ನೀಡಿದ ದೂರಿನ‌ ಮೇರೆಗೆ ಇಬ್ಬರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಇದನ್ನೂ ಓದಿ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ : ನಿವೃತ್ತ ಅಬಕಾರಿ ಡಿವೈಎಸ್​ಪಿ ಸೇರಿ ಇಬ್ಬರ ಸಾವು

Last Updated : Jul 18, 2022, 9:18 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.