ETV Bharat / state

ಸಿಡಿ ಪ್ರಕರಣ: ಯುವತಿ ಹಾಜರುಪಡಿಸಲು ಡೆಪ್ಯೂಟಿ ರಿಜಿಸ್ಟ್ರಾರ್ ಅನುಮತಿ ಕೇಳಿದ ವಕೀಲ ಜಗದೀಶ್

author img

By

Published : Mar 29, 2021, 1:31 PM IST

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಿಡಿ ಲೇಡಿ ಹಾಜರಾಗುವ ಸಾಧ್ಯತೆ ಇದೆ. ಆಕೆಯ ಪರ ವಕೀಲ ಜಗದೀಶ್, ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್​​​ನ ಡೆಪ್ಯೂಟಿ ರಿಜಿಸ್ಟ್ರಾರ್​ಗೆ ಭೇಟಿಯಾಗಿ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಲು ಅನುಮತಿಗೆ ಮನವಿ ಮಾಡಿದ್ದಾರೆ.

ramesh jarkiholi case
ಸಿಡಿ ಪ್ರಕರಣ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಇಂದು ಸಿಡಿ ಯುವತಿ ಹಾಜರಾಗುವ ಸಾಧ್ಯತೆ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್ ನೇತೃತ್ವದಲ್ಲಿ ಇಬ್ಬರು ಎಸಿಪಿ, 5 ಜನ ಇನ್ ಸ್ಪೆಕ್ಟರ್, 10 ಜನ ಸಬ್ ಇನ್ ಸೆಕ್ಟರ್ ಹಾಗೂ 100 ಜನ ಪೊಲೀಸ್ ಸಿಬ್ಬಂದಿ ಸೇರಿದಂತೆ 3 ಕೆಎಸ್ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ‌.

ನ್ಯಾಯಾಧೀಶರ ಮುಂದೆಯೇ ಹೇಳಿಕೆ ನೀಡುವುದಾಗಿ ಸಿಡಿ ಯುವತಿ ಹೇಳಿರುವ ಹಿನ್ನೆಲೆಯಲ್ಲಿ ಆಕೆಯ ಪರ ವಕೀಲ ಜಗದೀಶ್, ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್​​​​ನ ಡೆಪ್ಯೂಟಿ ರಿಜಿಸ್ಟ್ರಾರ್​ ಅವರನ್ನು ಭೇಟಿಯಾಗಿ ಸಿಆರ್ ಪಿಸಿ 164 ಅಡಿ ಹೇಳಿಕೆ ದಾಖಲಿಸಲು ಅನುಮತಿಗೆ ಮನವಿ ಮಾಡಿದ್ದಾರೆ.

ಸಾಮಾನ್ಯವಾಗಿ ತನಿಖಾಧಿಕಾರಿಯೇ ಯುವತಿಯನ್ನು ಹಾಜರುಪಡಿಸಬೇಕು. ಆದರೆ ಯುವತಿಯನ್ನೇ ಖುದ್ದು ವಕೀಲರ ಮೂಲಕ ಹಾಜರುಪಡಿಸಲು ಮುಂದಾಗಿದ್ದಾರೆ. ಮಾಹಿತಿ ಪ್ರಕಾರ ಕೇವಲ ಕಾನೂನು ಪ್ರಕ್ರಿಯೆಗಳ ತಿಳಿದುಕೊಳ್ಳಲು ಬಂದಿರುವ ವಕೀಲರು ನೇರವಾಗಿ ಯುವತಿಯನ್ನು ಹಾಜರುಪಡಿಸಬಹುದೇ? ಯುವತಿಗೆ ಸಿಗುವ ಭದ್ರತೆ ಬಗ್ಗೆ ವಕೀಲರು ವಿಚಾರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.