ETV Bharat / state

ಬೆಂಗಳೂರು: ಹೆತ್ತವರನ್ನ‌ ಕೊಲೆ ಮಾಡಿ ಪರಾರಿಯಾಗಿದ್ದ ಮಗ ಅರೆಸ್ಟ್

author img

By

Published : Jul 21, 2023, 10:09 PM IST

ತಂದೆ ತಾಯಿಯನ್ನು ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಭಾಸ್ಕರ್(61) ಶಾಂತಾ (60)
ಭಾಸ್ಕರ್(61) ಶಾಂತಾ (60)

ಬೆಂಗಳೂರು: ತಂದೆ ಮತ್ತು ತಾಯಿಯನ್ನೇ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಮಗನನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶರತ್(25) ಬಂಧಿತ ಆರೋಪಿ. ಕೊಲೆ ಮಾಡಿ ಮಡಿಕೇರಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ರಸ್ತೆಯ ಬ್ಯಾಟರಾಯನಪುರ ನಿವಾಸಿಗಳಾದ ಭಾಸ್ಕರ್(61) ಹಾಗೂ ಶಾಂತಾ (60) ದಂಪತಿಯನ್ನು ಸೋಮವಾರ ರಾತ್ರಿ ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ನಾಲ್ಕು ದಿನದ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ವಿಚಾರಣೆ ನಂತರ ಕೊಲೆಗೆ ನಿಖರ ಕಾರಣವೇನು? ಎಂಬುದು ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ಮೂಲದ ಭಾಸ್ಕರ್ ದಂಪತಿ, 13 ವರ್ಷಗಳಿಂದ ಬ್ಯಾಟರಾಯನಪುರದಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಕೊಡಿಗೆಹಳ್ಳಿ ಸಮೀಪ ತಮ್ಮ ಸ್ನೇಹಿತರ ಕ್ಯಾಂಟೀನ್‌ನಲ್ಲಿ ಕ್ಯಾಶಿಯರ್ ಆಗಿದ್ದರು. ಕೇಂದ್ರ ಸರ್ಕಾರ ಸ್ವಾಮ್ಯದ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಶಾಂತಾ, ನಿವೃತ್ತರಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಮನೆಯ ಮಹಡಿ ಮೇಲಿನ ಕೊಠಡಿಯಲ್ಲಿ 2ನೇ ಮಗ ಶರತ್ ನೆಲೆಸಿದ್ದ. ಮೊದಲನೇ ಮಗ ಸಜಿತ್ ವಿವಾಹವಾಗಿ ಪ್ರತ್ಯೇಕವಾಗಿ ಕೊಡಿಗೆಹಳ್ಳಿಯಲ್ಲಿ ನೆಲೆಸಿದ್ದ.

ಮದ್ಯ ವ್ಯಸನಿಯಾಗಿದ್ದ ಶರತ್, ಕೆಲಸಕ್ಕೆ ಹೋಗದೇ ಅಲೆಯುತ್ತಿದ್ದ. ಎಂದಿನಂತೆ ಮನೆಯಲ್ಲಿ ಸೋಮವಾರ ರಾತ್ರಿ ಸಹ ಹೆತ್ತವರ ಜತೆ ಗಲಾಟೆ ಮಾಡಿದ್ದಾನೆ. ತಂದೆ ಮತ್ತು ತಾಯಿ ಮೇಲೆ ಕಬ್ಬಿಣ ರಾಡ್‌ನಿಂದ ಹಲ್ಲೆ ನಡೆಸಿ ಭೀಕರವಾಗಿ ಶರತ್ ಹತ್ಯೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು: ಪೋಷಕರಿಂದ ಕೊಲೆ ಆರೋಪ

ಪಕ್ಕದ ಮನೆಯವರಿಗೆ ಕರೆ ಮಾಡಿದ ಹಿರಿಯ ಮಗ : ಕೆಲಸದ ನಿಮಿತ್ತ ಭಾಸ್ಕರ್‌ಗೆ ಕ್ಯಾಂಟೀನ್ ಸಿಬ್ಬಂದಿ ಮಂಗಳವಾರ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೆ ಇದ್ದಾಗ ಕ್ಯಾಂಟೀನ್ ಸಿಬ್ಬಂದಿ, ಮೃತರ ಹಿರಿಯ ಪುತ್ರನಿಗೆ ಕಾಲ್ ಮಾಡಿ ತಂದೆ ಬಗ್ಗೆ ವಿಚಾರಿಸಿದ್ದಾರೆ. ಆತಂಕಗೊಂಡ ಸಜಿತ್, ತಾಯಿ ಮೊಬೈಲ್‌ಗೆ ಕರೆ ಮಾಡಿದಾಗಲೂ ತಾಯಿ ಸಹ ಪ್ರತಿಕ್ರಿಯಿಸಿಲ್ಲ. ಮತ್ತಷ್ಟು ಗಾಬರಿಗೊಂಡ ಸಜಿತ್, ತಕ್ಷಣ ಪಕ್ಕದ ಮನೆಯವರಿಗೆ ಕರೆ ಮಾಡಿ ತಮ್ಮ ಮನೆಗೆ ಹೋಗಿ ತಂದೆ -ತಾಯಿಗೆ ಏನಾಗಿದೆ ನೋಡುವಂತೆ ಕೋರಿದ್ದಾರೆ.

ತಮ್ಮನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಅಣ್ಣ: ಭಾಸ್ಕರ್ ಅವರ ಮನೆಗೆ ನೆರೆಹೊರೆಯವರು ತೆರಳಿದಾಗ ಅವಳಿ ಕೊಲೆ ಕೃತ್ಯ ಬೆಳಕಿಗೆ ಬಂದಿತ್ತು. ಹೆತ್ತವರನ್ನು ತಮ್ಮನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಕೊಡಿಗೆಹಳ್ಳಿ ಠಾಣೆಗೆ ಅಣ್ಣ ಸಜಿತ್ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ತಂದೆ ಕೊಲೆಗೈದು ಹೆದ್ದಾರಿ ಪಕ್ಕ ಶವ ಹೂತಿಟ್ಟ ಮಗ; ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಂದ ತನಿಖೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.