ETV Bharat / state

ದಾಖಲಾತಿ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 50 ಲಕ್ಷ ಹಣ ಜಪ್ತಿ.. ಮೂವರು ಆರೋಪಿಗಳು ವಶಕ್ಕೆ

author img

By

Published : Mar 16, 2023, 3:29 PM IST

ಸೂಕ್ತ ದಾಖಲಾತಿ ಇಲ್ಲದೆ ಕಾರ್​ನಲ್ಲಿ ಸಾಗಿಸುತ್ತಿದ್ದ ಸುಮಾರು 50 ಲಕ್ಷ ಹಣವನ್ನು ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಾದಕ ವಸ್ತು ವಶ
ಮಾದಕ ವಸ್ತು ವಶ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಸೂಕ್ತ ದಾಖಲಾತಿ ಇಲ್ಲದೆ ಕಾರ್​ನಲ್ಲಿ ಸಾಗಿಸುತ್ತಿದ್ದ ಆಧಾರರಹಿತ ಲಕ್ಷಾಂತರ ರೂಪಾಯಿ ಹಣವನ್ನ ಕಲಾಸಿಪಾಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಊರ್ವಶಿ ಥಿಯೇಟರ್ ಬಳಿ ಕಾರ್​ನಲ್ಲಿದ್ದ ಆಧಾರರಹಿತ 49.79 ಲಕ್ಷ ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹಣ ತೆಗೆದುಕೊಂಡು ಹೋಗುತ್ತಿದ್ದ ಪವನ್, ಗೋಪಿ ಹಾಗೂ ಮಲ್ಲಿಕಾರ್ಜುನ್ ಎಂಬ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಪೊಲೀಸರು ಈಗಾಗಲೇ ತಪಾಸಣೆ ಚುರುಕುಗೊಳಿಸಿದ್ದಾರೆ.

ಈ ಹಿನ್ನೆಲೆ ಹೆಚ್ಚಿನ ಮೊತ್ತದ ಹಣ ತೆಗೆದುಕೊಂಡು ಹೋಗುವಾಗ ಸೂಕ್ತ ದಾಖಲೆ ಇಟ್ಟುಕೊಳ್ಳುವುದು ಅನಿವಾರ್ಯವಾಗಿದೆ. ದಾಖಲಾತಿ ಇಲ್ಲದಿದ್ದರೆ ಹಣ ಸೀಜ್ ಮಾಡುವುದರ ಜೊತೆಗೆ ಕೇಸ್ ಕೂಡ ದಾಖಲಾಗುತ್ತೆ‌. ಸದ್ಯ ದಾಖಲೆಗಳು ಇಲ್ಲದೇ ಹಣ ಸಾಗಣೆ ಮಾಡುತ್ತಿದ್ದ ಮೂವರ ವಿರುದ್ಧ ಕೆಪಿ ಆಕ್ಟ್ ಅಡಿ ಪ್ರಕರಣ ದಾಖಲು ಮಾಡಿ ಕಲಾಸಿಪಾಳ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ನಗರ‌ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಕಾರಿನ ಸೀಟಿನಲ್ಲಿ ಡ್ರಗ್ಸ್ ಇಟ್ಟು ದಂಧೆ: ಇನ್ನೊಂದೆಡೆ ಚಾಮರಾಜನಗರ ಮಲೆಮಹದೇಶ್ವರ ಸಮೀಪದ ಊರಿನಿಂದ ಡ್ರಗ್ಸ್​ ತರಿಸಿಕೊಂಡು ಕಾರಿನ ಸೀಟಿನಲ್ಲಿ ಬಚ್ಚಿಟ್ಟುಕೊಂಡು ವ್ಯವಸ್ಥಿತವಾಗಿ ಮಾರಾಟದಲ್ಲಿ ತೊಡಗಿದ್ದ ಆರೋಪಿಯನ್ನ ಬಂಧಿಸಲಾಗಿದೆ.

ಲೋಕೇಶ್ ಬಂಧಿತ ಆರೋಪಿ.‌ ಅಲ್ಲದೆ ಪ್ರತ್ಯೇಕ 9 ಪ್ರಕರಣಗಳನ್ನ ಬೇಧಿಸಿರುವ ಸಿಸಿಬಿ ಪೊಲೀಸರು ನಾಲ್ವರು ಆಫ್ರಿಕನ್ ಸೇರಿ ಒಟ್ಟು 13 ಮಂದಿ‌ ದಂಧೆಕೋರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 9 ಡ್ರಗ್ಸ್ ಪ್ರಕರಣಗಳಲ್ಲಿ 13 ಮಂದಿ ಆರೋಪಿಗಳನ್ನು‌ ಒಟ್ಟು ಬಂಧಿಸಿ ಒಂದೂವರೆ ಕೆ.ಜಿ ಮಾದಕ ವಸ್ತು, 41 ಮಾತ್ರೆಗಳು, 25 ಕೆ.ಜಿ ಗಾಂಜಾ, 2 ಕಾರು,‌ ಒಂದು ಬೈಕ್ ಹಾಗೂ 9 ಮೊಬೈಲ್ ಫೋನ್ ಸೇರಿ 2.48 ಮೌಲ್ಯದ ತರಹೇವಾರಿ ಡ್ರಗ್ಸ್ ಜಪ್ತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರಿಂದ 11 ಆರೋಪಿಗಳ ಬಂಧನ: ನಾಲ್ಕು ಕೋಟಿಗೂ ಅಧಿಕ ಮೌಲ್ಯದ ಆಭರಣ ಜಪ್ತಿ

ಹೆಣ್ಣೂರು, ಕೋರಮಂಗಲ, ಎಚ್​ಎಸ್​ಆರ್​ ಲೇಔಟ್, ಪುಟ್ಟೇ‌ಹಳ್ಳಿ, ತಲಘಟ್ಟಪುರ, ಕೊಡಿಗೆಹಳ್ಳಿ ಸೇರಿ 9 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ವ್ಯವಸ್ಥಿತವಾಗಿ ಮಾದಕ ವಸ್ತು ತರಿಸಿಕೊಂಡು ಕಾಲೇಜು ಯುವಕರಿಗೆ, ಟೆಕ್ಕಿಗಳಿಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು‌. ದಂಧೆಯಲ್ಲಿ ಸ್ಥಳೀಯ ಆರೋಪಿಗಳು ಸೇರಿದಂತೆ ಸೂಡಾನ್, ನೈಜೀರಿಯಾ ಪ್ರಜೆಗಳು ಭಾಗಿಯಾಗಿದ್ದರು.

ಇದನ್ನೂ ಓದಿ : ರೌಡಿಶೀಟರ್​ಗಳ ಗ್ಯಾಂಗ್ ವಾರ್: ಸ್ಥಳದಲ್ಲೇ ಒಬ್ಬ ರೌಡಿಶೀಟರ್​ ಸಾವು, ಇನ್ನೊಬ್ಬನಿಗೆ ತೀವ್ರ ಗಾಯ

ಎಚ್​ಎಸ್​ಆರ್​ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಸ್ಥಳೀಯ ಆರೋಪಿಯೋರ್ವ ಕಾರಿನ ಸೀಟನ್ನು ಮಾರ್ಪಾಡಿಸಿಕೊಂಡು ಅದರೊಳಗೆ ಡ್ರಗ್ಸ್ ಇಟ್ಟು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ. ಅಲ್ಲದೆ ತಾನಿರುವ ಸ್ಥಳದ ಬಗ್ಗೆ ತಿಳಿಯಲು ಲೊಕೇಷನ್​​ ಫೋಟೊ ಶೇರ್ ಮಾಡುತ್ತಿದ್ದ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತ ವರ್ತನೆ: ರೈಲ್ವೇ ಟಿಕೆಟ್ ಇನ್​ಸ್ಪೆಕ್ಟರ್ ಸಸ್ಪೆಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.