ETV Bharat / state

ಶಾಪಿಂಗ್​ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು: ರಕ್ಷಿಸಲು ಬಂದ ಯುವಕನೂ ಕೆಳಗೆ ಬಿದ್ದ!

author img

By

Published : May 21, 2022, 5:39 PM IST

Updated : May 21, 2022, 6:35 PM IST

ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆಯೇ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ.

two students fallen from shopping complex in Bengaluru
ಶಾಫಿಂಗ್ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು

ಬೆಂಗಳೂರು: ಶಾಪಿಂಗ್​​ಗೆ ಬಂದಿದ್ದ ಯುವಕ - ಯುವತಿ ಕಾಂಪ್ಲೆಕ್ಸ್​​ನಿಂದ ಬಿದ್ದಿರುವ ಘಟನೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಬ್ರಿಗೇಡ್ ರಸ್ತೆಯಲ್ಲಿ ನಡೆದಿದೆ. ಲಿಯಾ (18) ಎಂಬ ಯುವತಿ ಸಾವನ್ನಪ್ಪಿದ್ದು, ಯುವಕ ಕ್ರಿಸ್ ಪೀಟರ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಶಾಫಿಂಗ್ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು
ಶಾಪಿಂಗ್ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು

ಲಿಯಾ ಕಾಕ್ಸ್ ಟೌನ್​ನ ನಿವಾಸಿಯಾಗಿದ್ದು, ಕ್ರಿಸ್ ಪೀಟರ್​ ಎಚ್‌ಎಎಲ್ ನಿವಾಸಿ. ಸೆಂಟ್ ಜೋಸೆಫ್ ಕಾಲೇಜ್​ನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿರುವ ಇಬ್ಬರೂ ಇವತ್ತು ಶಾಪಿಂಗ್​ಗೆ ಬಂದಿದ್ದರು.

ಶಾಪಿಂಗ್​​ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು

ಈ ವೇಳೆ ಕಾಲು ಜಾರಿ ಕಟ್ಟಡದ ಎರಡನೇ ಮಹಡಿಯಿಂದ ಯುವತಿ ಬಿದ್ದಿದ್ದಾಳೆ. ಯುವತಿ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆಯೇ ಯುವಕ ಬಿದ್ದಿದ್ದರಿಂದ ಬದುಕಿದ್ದಾನೆ. ಯುವಕನ ಕಾಲು ಮುರಿದಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ. ಆದರೆ, ಯುವತಿ ಲಿಯಾ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.

ಶಾಫಿಂಗ್ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು
ಶಾಪಿಂಗ್​ ಕಾಂಪ್ಲೆಕ್ಸ್​ನಿಂದ ಬಿದ್ದು ಯುವತಿ ಸಾವು

ಪ್ರಾಥಮಿಕ ಮಾಹಿತಿಯಂತೆ ಸ್ಟೇರ್ ಕೇಸ್‌ನಿಂದ ಆಯತಪ್ಪಿ ಬಿದ್ದಿದ್ದಾರೆ. ಘಟನೆಗೆ ನಿಖರ ಕಾರಣ ಏನು ಎಂಬುದರ ಬಗ್ಗೆ ತನಿಖೆ ನಡೆಸುದ್ದೇವೆ. ಯುವಕ ಕ್ರಿಸ್ ಅಪಾಯದಿಂದ ಪಾರಾಗಿದ್ದು, ಆದರೆ, ಈತ ಶಾಕಿಂಗ್​​​ಗೊಳಗಾಗಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಧಾರವಾಡ ಭೀಕರ ಅಪಘಾತದಲ್ಲಿ ಬೆಳಗಾವಿಯ ಬಾಲಕಿ ಸಾವು.. ಹುಟ್ಟೂರಲ್ಲಿ ಅಂತ್ಯಕ್ರಿಯೆ!

Last Updated : May 21, 2022, 6:35 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.