ETV Bharat / state

ಒಬ್ಬಳಿರುವಾಗ ಇನ್ನೊಬ್ಬ ಹೆಂಡತಿ.. ಆಸ್ತಿಗಾಗಿ 2ನೇ ಮಡದಿಯೇ ಪತಿಯನ್ನ ಮುಗಿಸಿದಳಾ?

author img

By

Published : Nov 15, 2019, 4:32 PM IST

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

A man murder , ವ್ಯಕ್ತಿ ಕೊಲೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಸಂತೋಷ್ ಎಂಬಾತ ಕೊಲೆಯಾದ ವ್ಯಕ್ತಿ. ಈತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ರಾಜಾಗೋಪಾಲನಗರ ‌ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬ್ರಿಡ್ಜ್ ಬಳಿಯಿರುವ ಮೌಂಟ್ ಸೆನೇರಿಯಾ ಸ್ಕೂಲ್ ಬಳಿ ಬೀಸಾಡಲಾಗಿತ್ತು.

ಶಶಿಕುಮಾರ್, ಡಿಸಿಪಿ ಉತ್ತರ ವಿಭಾಗ

ಕೊಲೆಗೆ ಕಾರಣ:
ಸಂತೋಷ್​ ತನ್ನ ಮೊದಲ ಹೆಂಡತಿ ಗಂಗಾ ಎಂಬುವರನ್ನು ಬಿಟ್ಟು ಕಳೆದ ಒಂದು ವರ್ಷದ ಹಿಂದೆ ಯಮುನಾ ಎಂಬುವರನ್ನು ಮದುವೆಯಾಗಿದ್ದನಂತೆ. ಆದರೆ, ಆಸ್ತಿಗಾಗಿ ಕುಟುಂಬದಲ್ಲಿ ಕಲಹ ಹೆಚ್ಚಾಗಿತ್ತು. ವಿಪರೀತ ಕುಡಿಯುತ್ತಿದ್ದ ಸಂತೋಷ್ ಸುಖಾಸುಮ್ಮನೆ ಕಿರಿಕ್ ಮಾಡ್ಕೊಂಡು ಏರಿಯಾದಲ್ಲಿರುವ ಜನರ ದ್ವೇಷವನ್ನೂ ಕಟ್ಟಿಕೊಂಡಿದ್ದ.

ಇದರ ನಡುವೆ ಸಂತೋಷ್​ಗೆ ರಾಜಾಗೋಪಾಲನಗರ ಬಳಿಯಿರುವ ಮನೆಯನ್ನ ತನ್ನ ಮಗಳ ಹೆಸರಿಗೆ ಬರೆದುಕೊಡುವಂತೆ 2ನೇ ಪತ್ನಿ ಯಮುನಾಳ ಪೋಷಕರು ಜಗಳ ತೆಗೆದಿದ್ದರು. ಇದೇ ವಿಚಾರ ಇಟ್ಟುಕೊಂಡು ಹೆಂಡತಿ ಮೇಲೆಯೂ ಕಿರಿಕ್ ತೆಗೆದು ಹಲ್ಲೆ ನಡೆಸಿದ್ದನಂತೆ. ಆದರೆ, ನಿನ್ನೆ ರಾತ್ರಿ ಯಮುನಾ ಸಂತೋಷ್ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಬೆಳಗಾಗುವಷ್ಟರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದಾನೆ.

ಸಂತೋಷ್ ಪತ್ನಿ ಯಮುನಾಳೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದೆ. ಯಮುನಾ ವಿರುದ್ಧ ಬಲವಾದ ಸಾಕ್ಷ್ಯಗಳು ಲಭಿಸಿರುವ ಹಿನ್ನೆಲೆಯಲ್ಲಿ ರಾಜಗೋಪಾಲನಗರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Intro:ಪತ್ನಿಯ ದ್ವೇಷಕ್ಕೆ ಬಲಿಯಾದ ಪತಿ?
ಆಸ್ತಿ ವಿಚಾರಕ್ಕೆ ಬಿತ್ತು ಹೆಣ.

- ಶಶಿಕುಮಾರ್ ಡಿಸಿಪಿ ಉತ್ತರ ವಿಭಾಗ

ಬೆಂಗಳೂರಿನಲ್ಲಿ ವ್ಯಕ್ತಿಯ ಬರ್ಬರ ಹತ್ಯೆಯಾಗಿದ್ದು ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ರಾಜಾಗೋಪಾಲನಗರ ‌ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬಿಡ್ಜ್ ಬಳಿ ಇರೋ ಮೌಂಟ್ ಸೆನೇರಿಯಾ ಸ್ಕೂಲ್ ಬಳಿ ಜೆಡಿಎಸ್ ನ ಕಟ್ಟಾ ಅಭಿಮಾನಿ ಸಂತೋಷ್ ಎಂಬಾತನನ್ನು ಮಾರಾಕಾಸ್ತ್ರಗಳಿಂದ ಭೀಕರವಾಗಿ ಕೊಂದು ಶವ ಬಿಸಾಡಿದ್ದಾರೆ. ಇನ್ನು ಈತ ಜೆಡಿಎಸ್ ದೇವೇಗೌಡರ ಕುಟುಂಬದ ಪಕ್ಕಾ ಆಭಿಮಾನಿಯಾಗಿದ್ದ ಸಂತೋಷ್ ತನ್ನ ಮೈಮೇಲೆ ಕೂಡ ಕುಮಾರಸ್ವಾಮಿ ಹಾಗೂ ದೇವೆ ಗೌಡರ ಪೋಟೊವನ್ನ ಹಚ್ಚೆ ಹಾಕೊಂಡಿದ್ದಾನೆ.

ಕೊಲೆಗೆ ಕಾರಣ.

ಇನ್ನು ಈತನಿಗೆ ಮೊದಲೇ ಮದುವೆಯಾಗಿದ್ದು. ಮೊದಲ ಪತ್ನಿ ಗಂಗಾಳನ್ನ ಬಿಟ್ಟು ಸಂತೋಷ್ ಕಳೆದ ಒಂದು ವರ್ಷದ ಹಿಂದೆ ಅದೇ ಏರಿಯಾದ ಯಮುನಾ ಎಂಬ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿ‌ ಪೊಲಿಸ್ ಠಾಣೆ ಮೆಟ್ಟಿಲೇರಿದ್ದ.ಆಕೆ ದೊಡ್ಡವಳಾಗ್ತಿದ್ದಂತೆ ಅವಳನ್ನೆ ಮದ್ವೆಯಾಗಿ ಸಂತೋಷ್ ಕೇಸ್ ಕ್ಲೋಸ್ ಮಾಡಿಕೊಂಡು ಆರಾಮಾಗಿದ್ದ. ಆದ್ರೆ ಕುಟುಂಬದಲ್ಲಿ ನಂತರ ಆಸ್ತಿ ಕಲಹ ಮತ್ತು ಕೌಟುಂಬಿಕ ಕಲಹ ಹೆಚ್ಚಾಗಿತ್ತು..ವಿಪರೀತ ಕುಡಿಯುತ್ತಿದ್ದ ಸಂತೋಷ್ ಕುಡಿದರೆ ಹುಚ್ಚನಂತಾಗುತಿದ್ದ. ಏರಿಯಾದಲ್ಲಿ ಸುಖಾಸುಮ್ಮನೆ ಕಿರಿಕ್ ಮಾಡ್ಕೊಂಡು ಏರಿಯಾದವರ ದ್ವೇಷ ಕಟ್ಟಿಕೊಂಡಿದ್ದ..

ಇದರ ನಡುವೆ ಸಂತೋಷ್ಗೆ ರಾಜಾಗೋಪಲನಗರ ಬಳಿ ಇರುವ ಮನೆಯನ್ನ ತನ್ನ ಮಗಳ ಹೆಸರಿಗೆ ಬರೆದುಕೊಡುವಂತೆ ಯಮುನಾಳ ಪೋಷಕರು ಜಗಳ ತೆಗೆದಿದ್ದರು ಇದೇ ವಿಚಾರವನ್ನಿಟ್ಟುಕೊಂಡು ಹೆಂಡತಿ ಮೇಲೆಯೂ ಕಿರಿಕ್ ತೆಗೆದು ಹಲ್ಲೆ ನಡೆಸಿದ್ದ. ಆದ್ರೆ
ನಿನ್ನೆ ರಾತ್ರಿ 11ರ ಸಮಯದಲ್ಲಿ ಯಮುನಾ ಸಂತೋಷ್ ಕಾಣೆಯಾಗಿದ್ದಾನೆ ಎಂದು ಗೋಗರೆದು ಕಣ್ಣೀರಿಟ್ಟು ಮಿಸ್ಸಿಂಗ್ ಕಂಪ್ಲೆಂಟ್ ದಾಖಲಿಸಿದ್ದಳೆ. ಆದ್ರೆ ಬೆಳಗಾಗುವಷ್ಟರಲ್ಲಿ ಸಂತೋಷ್ ಶವವಾಗಿ ಪತ್ತೆಯಾಗಿದ್ದಾನೆ. ಇತ್ತ ಸಂತೋಷ್ ಪತ್ನಿ ಯಮುನಾಳೆ ಸುಪಾರಿ ನೀಡಿ ಕೊಲೆ ಮಾಡಿಸಿರುವ ಶಂಕೆ ಇದ್ದು ಯಮುನಾ ವಿರುದ್ಧವೇ ಹಲವು ಸಾಕ್ಷಿಗಳು ಲಭಿಸಿರುವ ಹಿನ್ನಲೆ ರಾಜಗೋಪಾಲನಗರ ಪೊಲೀಸರು ಯಮುನಾಳನ್ನ ವಶಕ್ಕೆ ಪಡೆದು ತನೀಕೆ ಮುಂದುವರೆಸಿದ್ದಾರೆ Body:KN_BNG_05_MURDER_7204498Conclusion:KN_BNG_05_MURDER_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.