ETV Bharat / state

ಎರಡನೇ ಪತ್ನಿಯನ್ನು ಹತ್ಯೆ ಮಾಡುತ್ತೇನೆಂದು ಕೊಲೆ ಬೆದರಿಕೆ: ಮಗನನ್ನೇ ಕೊಂದ ತಂದೆ

author img

By

Published : Jun 6, 2022, 8:58 PM IST

ತಂದೆ-ಮಗನ ನಡುವೆ ನಡೆದ ಜಗಳ ತಾರಕಕ್ಕೇರಿತ್ತು. ಆಕ್ರೋಶಗೊಂಡ ಸಂಶೀರ್ ರಾಡ್‌ನಿಂದ ಮಗ ಸುಲೇಮಾನ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ಸುಲೇಮಾನ್ ಕುಸಿದು ಬಿದ್ದಿದ್ದ. ನಂತರ ಕೇಬಲ್ ವೈಯರ್‌ನಿಂದ ಸುಲೇಮಾನ್‌ನ ಕತ್ತು ಬಿಗಿದು ಕೊಲೆ ಮಾಡಿ ತಂದೆ ಪರಾರಿಯಾಗಿದ್ದಾನೆ.

ಎರಡನೇ ಪತ್ನಿಯನ್ನು ಹತ್ಯೆ ಮಾಡುತ್ತೇನೆಂದು ಮಗನಿಂದ ತಂದೆಗೆ  ಕೊಲೆ ಬೆದರಿಕೆ
ಎರಡನೇ ಪತ್ನಿಯನ್ನು ಹತ್ಯೆ ಮಾಡುತ್ತೇನೆಂದು ಮಗನಿಂದ ತಂದೆಗೆ ಕೊಲೆ ಬೆದರಿಕೆ

ಬೆಂಗಳೂರು : ಹಣ ಕೊಡದಿದ್ದರೆ 2ನೇ ಪತ್ನಿಯನ್ನು ಕೊಲೆ ಮಾಡುವುದಾಗಿ ಪೀಡಿಸುತ್ತಿದ್ದ ಪುತ್ರನ ತಲೆಗೆ ತಂದೆಯೇ ರಾಡ್‌ನಿಂದ ಹೊಡೆದು, ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಆರ್‌ ಟಿ ನಗರದ ಚಾಮುಂಡಿನಗರದ ನಿವಾಸಿ ಮೊಹಮದ್ ಸುಲೇಮಾನ್ ಕೊಲೆಯಾದವ. ಆತನ ತಂದೆ ಮೊಹಮ್ಮದ್ ಸಂಶೀರ್ ತಲೆಮರೆಸಿಕೊಂಡಿರುವ ಆರೋಪಿ.

ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿರುವ ಆರೋಪಿ ಸಂಶೀರ್‌ನ ಮೊದಲ ಪತ್ನಿಯ ಮಗ ಸುಲೇಮಾನ್ ಹೆಬ್ಬಾಳದ ಭುವನೇಶ್ವರಿನಗರದ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಕೆಲಸ ನಿರ್ವಹಿಸುತ್ತಿದ್ದ. 7 ವರ್ಷದ ಹಿಂದೆ ಸಂಶೀರ್ ಮೊದಲ ಪತ್ನಿಯನ್ನು ಬಿಟ್ಟು 2ನೇ ಪತ್ನಿಯ ಜತೆಗೆ ವಾಸಿಸುತ್ತಿದ್ದ. ಸುಲೇಮಾನ್ ಸಬೂಬು ಹೇಳಿ ಆಗಾಗ ತಂದೆಯಿಂದ ಹಣ ಪಡೆಯುತ್ತಿದ್ದ. ಇತ್ತೀಚೆಗೆ ತಂದೆ ಸಂಶೀರ್ ಮಗನಿಗೆ ಹಣ ಕೊಡಲು ನಿರಾಕರಿಸಿದ್ದ. ಇದರಿಂದ ಆಕ್ರೋಶಗೊಂಡ ಸುಲೇಮಾನ್, ಹಣ ಕೊಡದಿದ್ದರೆ 2ನೇ ಪತ್ನಿಯನ್ನು ಕೊಲೆ ಮಾಡುತ್ತೇನೆ ಎಂದು ತಂದೆಗೆ ಬೆದರಿಸಿದ್ದ.

ಇದರಿಂದ ಆತಂಕಗೊಂಡ ಸಂಶೀರ್ 2ನೇ ಪತ್ನಿಯನ್ನು ಟ್ಯಾನರಿ ರಸ್ತೆಯಲ್ಲಿರುವ ತವರು ಮನೆಗೆ ಕಳುಹಿಸಿದ್ದ. ಭಾನುವಾರ ರಾತ್ರಿ ಸಂಶೀರ್‌ನ ಮನೆಗೆ ಬಂದ ಸುಲೇಮಾನ್ ಹಣ ಕೊಡುವಂತೆ ಮತ್ತೆ ಬೆದರಿಸಿದ್ದ. ಹಣ ಕೊಡಲು ನಿರಾಕರಿಸಿದಾಗ 2ನೇ ಪತ್ನಿಯ ತವರು ಮನೆಗೆ ಹೋಗಿ ಆಕೆಯನ್ನು ಕೊಲೆ ಮಾಡುವುದಾಗಿ ಸುಲೇಮಾನ್ ಹೇಳಿದ್ದ.

ಈ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ಜಗಳ ತಾರಕಕ್ಕೇರಿತ್ತು. ಆಕ್ರೋಶಗೊಂಡ ಸಂಶೀರ್ ರಾಡ್‌ನಿಂದ ಮಗ ಸುಲೇಮಾನ್ ತಲೆಗೆ ಹೊಡೆದಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ಸುಲೇಮಾನ್ ಕುಸಿದು ಬಿದ್ದಿದ್ದ. ನಂತರ ಕೇಬಲ್ ವೈಯರ್‌ನಿಂದ ಸುಲೇಮಾನ್‌ನ ಕತ್ತು ಬಿಗಿದು ಕೊಲೆ ಮಾಡಿ ಮೊಹಮ್ಮದ್​ ಪರಾರಿಯಾಗಿದ್ದಾನೆ.

ಸೆಕ್ಯೂರಿಟಿಗಾರ್ಡ್ ಕೆಲಸ ಮಾಡುತ್ತಿರುವ ಕೊಲೆ ಆರೋಪಿ ಸಂಶೀರನ ತಂದೆ ಇಂದು ಮುಂಜಾನೆ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಆರ್‌ಟಿ ನಗರ ಠಾಣೆ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗೆ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪತನಗೊಂಡ ತರಬೇತಿ ವಿಮಾನ: ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.