ETV Bharat / state

ರಿಲೀಸ್​ಗೂ ಮೊದಲೇ ಶಿವಾಜಿ ಸುರತ್ಕಲ್​​ ಸಿನಿಮಾ ವೀಕ್ಷಿಸಿದ ರಾಹುಲ್​ ದ್ರಾವಿಡ್​​​​​!

author img

By

Published : Feb 18, 2020, 9:47 PM IST

ರಮೇಶ್ ಅರವಿಂದ್​ ಅವರ ಶಿವಾಜಿ ಸುರತ್ಕಲ್ ಸಿನಿಮಾವನ್ನು ಅವ್ರ ಆತ್ಮೀಯ ಗೆಳೆಯ ಹಾಗೂ ಭಾರತದ ಖ್ಯಾತ ಕ್ರಿಕೆಟ್ ಸ್ಟಾರ್ ರಾಹುಲ್ ದ್ರಾವಿಡ್ ಫಿಲ್ಮ್​ ರಿಲೀಸ್​ಗೂ ಮುನ್ನ ವೀಕ್ಷಿಸಿದ್ದಾರೆ.

a famous cricketer watched the Shivaji  Suratkal movie before its release!
ರಿಲೀಸ್​ಗೂ ಮೊದಲು ಶಿವಾಜಿ ಸುರತ್ಕಲ್ ಸಿನಿಮಾ ವೀಕ್ಷಿಸಿದ ಪ್ರಖ್ಯಾತ ಕ್ರಿಕೆಟ್ ಸ್ಟಾರ್!!

ಬೆಂಗಳೂರು: ಮಲ್ಲೇಶ್ವರಂ ಎಸ್​ಆರ್​ವಿ ಥಿಯೇಟರ್​ನಲ್ಲಿ ರಮೇಶ್ ಅರವಿಂದ್​ ಅವರ ಶಿವಾಜಿ ಸುರತ್ಕಲ್ ಸಿನಿಮಾವನ್ನು ಅವ್ರ ಆತ್ಮೀಯ ಗೆಳೆಯ ಹಾಗೂ ಭಾರತದ ಖ್ಯಾತ ಕ್ರಿಕೆಟ್ ಸ್ಟಾರ್ ರಾಹುಲ್ ದ್ರಾವಿಡ್ ಫಿಲ್ಮ್​ ರಿಲೀಸ್​ಗೂ ಮುನ್ನ ವೀಕ್ಷಿಸಿದ್ದಾರೆ.

ರಿಲೀಸ್​ಗೂ ಮೊದಲೇ ಶಿವಾಜಿ ಸುರತ್ಕಲ್ ಸಿನಿಮಾ ವೀಕ್ಷಿಸಿದ ರಾಹುಲ್​ ದ್ರಾವಿಡ್​​

ಎಸ್​ಆರ್​ವಿ ಥಿಯೇಟರ್​ನಲ್ಲಿ ರಮೇಶ್ ಅರವಿಂದ್, ಫ್ಯಾಮಿಲಿ, ಸ್ನೇಹಿತರ ಜೊತೆ ರಾಹುಲ್ ದ್ರಾವಿಡ್ ಸಿನಿಮಾ ವೀಕ್ಷಿಸಿದ್ದಾರೆ. ಇದು ರಮೇಶ್‌ ಅರವಿಂದ್‌ ಅಭಿನಯದ 101ನೇ ಚಿತ್ರ ಎಂಬುದು ವಿಶೇಷ. ಈ ಸಿನಿಮಾ ನೋಡಿ ಮಾತನಾಡಿದ ರಾಹುಲ್ ದ್ರಾವಿಡ್, ಈ ಚಿತ್ರದ ಕ್ಲೈಮಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕ ಆಕಾಶ್ ಶ್ರೀವಾತ್ಸವ್​, ನಿರ್ಮಾಪಕ ಅನೂಪ್ ಗೌಡ ಹಾಗೂ ರಮೇಶ್ ಅರವಿಂದ್ ರಾಹುಲ್ ದ್ರಾವಿಡ್​​​ಗೆ ಸಾಥ್ ನೀಡಿದ್ರು. ಇದೇ ಶಿವರಾತ್ರಿ ಹಬ್ಬಕ್ಕೆ ಶಿವಾಜಿ ಸುರತ್ಕಲ್ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದ್ದು, ಈ ಸಿನಿಮಾ ರಿಲೀಸ್​ಗೂ ಮುಂಚೆ ರಾಹುಲ್ ದ್ರಾವಿಡ್ ಸಿನಿಮಾ ನೋಡಿ ಮೆಚ್ಚಿಕೊಂಡಿರೋದು ಚಿತ್ರಕ್ಕೆ ಪ್ಲಸ್​ ಪಾಯಿಂಟ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.