ETV Bharat / state

ರಾಜ್ಯದಲ್ಲಿಂದು 9523 ಜನರಿಗೆ ಕೊರೊನಾ ದೃಢ: 75 ಮಂದಿ ಕೋವಿಡ್​​ಗೆ ಬಲಿ

author img

By

Published : Oct 11, 2020, 9:33 PM IST

ಇಂದು ರಾಜ್ಯ ಮತ್ತು ರಾಜಧಾನಿಯಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಗಳ ಮಾಹಿತಿ ಇಂತಿದೆ.

corona report
ಕೊರೊನಾ ವರದಿ

ಬೆಂಗಳೂರು: ರಾಜ್ಯದಲ್ಲಿಂದು 9,523 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, 75 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಕ್ರಿಯ ಪ್ರಕರಣಗಳು 120270 ಕ್ಕೆ ಏರಿಕೆಯಾಗಿವೆ.

ಇಂದಿನ ಕೊರೊನಾ ಪ್ರಕರಣಗಳ ಮಾಹಿತಿ :

ಇಂದು ಪತ್ತೆಯಾಗಿರುವ ಕೊರೊನಾ ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7,10,309 ಕ್ಕೆ ಏರಿಕೆಯಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 9966 ಕ್ಕೆ ಏರಿಕೆಯಾಗಿದೆ

ಗುಣಮುಖ: ಕೊರೊನಾ ಸೋಂಕಿನಿಂದ 10,107 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ‌ಈ ಮೂಲಕ 5,80,054 ಮಂದಿ ಗುಣಮುಖರಾಗಿದ್ದಾರೆ.

ಇಂದು ಬೆಂಗಳೂರಿನ 4623 ಮಂದಿಯಲ್ಲಿ ಇಂದು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 24 ಮಂದಿ ಮೃತಪಟ್ಟಿದ್ದಾರೆ. ಇಂದು 2656 ಮಂದಿ ಗುಣಮುಖರಾಗಿ, ಡಿಸ್ಚಾರ್ಜ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.