ETV Bharat / state

ರಾಜಧಾನಿಯಲ್ಲಿಂದು 916 ಜನರಿಗೆ ಕೊರೊನಾ: 602 ಮಂದಿ ಗುಣಮುಖ

author img

By

Published : Nov 25, 2020, 7:50 PM IST

ಇಂದು ರಾಜಧಾನಿಯಲ್ಲಿ 916 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 602 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಿಬಿಎಂಪಿ
BBMP

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು 916 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಹೊಸ ಸೋಂಕಿತರ ವಿವಿರ:

ಇಂದು ನಗರದಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರನ್ನು ಸೇರಿದಂತೆ ಒಟ್ಟು ಸೋಂಕಿತರ ಸಂಖ್ಯೆ 3,66,233 ಕ್ಕೆ ಏರಿಕೆಯಾಗಿದೆ.

ಗುಣಮುಖ :

ಈ ದಿನ ಸೋಂಕಿನಿಂದ 602 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 3,43,771 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಮೃತರ ಮಾಹಿತಿ :

ಕೊರೊನಾ ಸೋಂಕಿನಿಂದ 11 ಮಂದಿ ಮೃತಪಟ್ಟಿದ್ದು, ಇದುವರೆಗೆ ಒಟ್ಟು 4101 ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ಇನ್ನು ರಾಜಧಾನಿಯಲ್ಲಿ 1,83,60 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.