ETV Bharat / state

ಬೆಂಗಳೂರಲ್ಲಿಂದು 4,574 ಕೊರೊನಾ ಸೋಂಕಿತರು ಪತ್ತೆ, 27 ಮಂದಿ ಬಲಿ

author img

By

Published : Oct 14, 2020, 9:05 PM IST

ಬೆಂಗಳೂರಿನಲ್ಲಿ 4,574 ಕೊರೊನಾ ಸೋಂಕಿತರು ಪತ್ತೆಯಾಗಿದ್ದು 27 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,93,405 ಮತ್ತು ಮೃತರ ಸಂಖ್ಯೆ 3,417ಕ್ಕೆ ಏರಿಕೆಯಾಗಿದೆ.

4,575 corona cases found in bangalore
ರಾಜಧಾನಿಯಲ್ಲಿಂದು 4,574 ಕೊರೊನಾ ಸೋಂಕಿತರು ಪತ್ತೆ....27 ಮಂದಿ ಬಲಿ

ಬೆಂಗಳೂರು: ನಗರದಲ್ಲಿ ಇಂದು 4,574 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿಗೆ ತುತ್ತಾದ 27 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,93,405ಕ್ಕೇರಿದ್ದು ಮೃತರ ಸಂಖ್ಯೆ 3417 ತಲುಪಿದೆ.

ಇಂದು 3,291 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಈವರೆಗೆ ಒಟ್ಟು 2,24,942 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಸದ್ಯ 65,045 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, 351 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.