ETV Bharat / state

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಪ್ರಶಸ್ತಿ ಪಡೆದ 2 ವರ್ಷದ ಬಾಲಕಿ

author img

By

Published : Oct 10, 2021, 8:23 PM IST

ಚಿಕ್ಕ ವಯಸ್ಸಿನಲ್ಲಿಯೇ ಅಂಕಿ-ಸಂಖ್ಯೆ, ಬಣ್ಣಗಳನ್ನ ಗುರುತಿಸಿ ಹೆಸರನ್ನು ಹೇಳುವ ಮೂಲಕ ನೆರೆಯವರ ಮನ ಗೆದ್ದಿದ್ದ ಪುಟ್ಟ ಮಗು, ಇದೀಗ ಗೂಗಲ್​​​ನಲ್ಲಿ ಇಶಿತಾ ಸತೀಶ್ ಎಂದು ಹುಡುಕಿದರೆ ಈಕೆಯ ಸಾಧನೆಯೊಂದು ತೆರೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ..

Ishita got India book of records award from google
ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದ 2 ವರ್ಷದ ಬಾಲಕಿ

ಆನೇಕಲ್ : ಎರಡು ವರ್ಷದ ಬಾಲಕಿ ತನ್ನ ಅಗಾಧ ಜ್ಞಾಪಕ ಶಕ್ತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಪ್ರಶಸ್ತಿ ಪಡೆದ 2 ವರ್ಷದ ಬಾಲಕಿ..

ತಾಲೂಕಿನ ಚಂದಾಪುರದ ನಿವಾಸಿ ಸತೀಶ್ ಮತ್ತು ಅಮೃತವರ್ಷಿಣಿ ದಂಪತಿಯ ಪುತ್ರಿ ಇಶಿತಾ ಈ ಸಾಧನೆ ಮಾಡಿದ ಬಾಲಕಿ. ದಂಪತಿ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದು, ಬಿಡುವಿನ ವೇಳೆ ಇಶಿತಾ ತಾಯಿಯೊಂದಿಗೆ ತೊದಲು ನುಡಿಯಲ್ಲಿ ಹೇಳಿದ ಅಂಕಿ-ಸಂಖ್ಯೆಗಳು, ಪದಗಳನ್ನು ಉಚ್ಚರಿಸಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದಳು. ಯಾವಾಗಲಾದರೂ ಕೇಳಿದಾಗ ಕರಾರುವಕ್ಕಾಗಿ ಎಲ್ಲವನ್ನು ಒಪ್ಪಿಸುವ ಮಟ್ಟಕ್ಕೆ ನೆನಪಿನ ಶಕ್ತಿ ಬೆಳೆಸಿಕೊಂಡಿದ್ದಳು.

2 Years Ishita got India book of records award from google
ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದ 2 ವರ್ಷದ ಬಾಲಕಿ

ಮಗಳಿನ ಪ್ರತಿಭೆಯನ್ನು ಗುರುತಿಸಿದ ತಾಯಿ ಅಮೃತ, ಗೂಗಲ್​​​ನಲ್ಲಿ ಈ ದಾಖಲೆಗಳನ್ನು ಗುರುತಿಸುವ ತಂಡವನ್ನು ಸಂಪರ್ಕಿಸಿ ಮಗಳ ಸಾಧನೆಯನ್ನು ಕಳುಹಿಸಿದ್ದರು. ಆಗ ಬಾಲಕಿಯ ಜ್ಞಾಪಕ ಶಕ್ತಿಯನ್ನು ದಾಖಲೆ ಮಾಡಿ ಗುರುತಿಸಿ ಇಂಡಿಯಾ ಬುಕ್ ಆಫ್ ರಿಕಾರ್ಡ್ಸ್‌ ಸರ್ಟಿಫಿಕೇಟ್ ನೀಡಿ ಗೂಗಲ್​​ ಗೌರವಿಸಿದೆ.

ಚಿಕ್ಕ ವಯಸ್ಸಿನಲ್ಲಿಯೇ ಅಂಕಿ-ಸಂಖ್ಯೆ, ಬಣ್ಣಗಳನ್ನ ಗುರುತಿಸಿ ಹೆಸರನ್ನು ಹೇಳುವ ಮೂಲಕ ನೆರೆಯವರ ಮನ ಗೆದ್ದಿದ್ದ ಪುಟ್ಟ ಮಗು, ಇದೀಗ ಗೂಗಲ್​​​ನಲ್ಲಿ ಇಶಿತಾ ಸತೀಶ್ ಎಂದು ಹುಡುಕಿದರೆ ಈಕೆಯ ಸಾಧನೆಯೊಂದು ತೆರೆದುಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದ್ದಾಳೆ.

ಇದನ್ನೂ ಓದಿ: ರಾಜ್ಯದಲ್ಲಿಂದು 406 ಮಂದಿಗೆ COVID ದೃಢ: 10 ಸೋಂಕಿತರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.