ETV Bharat / state

ಹೈಕೋರ್ಟ್​ನಿಂದ ಹಿಜಾಬ್​ ಅಂತಿಮ ತೀರ್ಪು.. ಬೆಂಗಳೂರಲ್ಲಿ ಒಂದು ವಾರ 144 ಸೆಕ್ಷನ್ ಜಾರಿ

author img

By

Published : Mar 14, 2022, 8:24 PM IST

Updated : Mar 14, 2022, 10:45 PM IST

Karnataka hijab row verdict.. ಹಿಜಾಬ್ ಗೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನ ತೆಗೆದುಗೊಳ್ಳಲಾಗಿದೆ. ನಗರದಲ್ಲಿ ಮಂಗಳವಾರದಿಂದ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುವುದು. ಯಾವುದೇ ಪ್ರತಿಭಟನೆ, ಱಲಿಗೆ ಅವಕಾಶವಿರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

kamal panth
ಕಮಲ್​ ಪಂತ್​

ಬೆಂಗಳೂರು: ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಿ ಬರದಂತೆ ಮುಸ್ಲಿಂ ವಿದ್ಯಾರ್ಥಿನಿಯರನ್ನು ನಿರ್ಬಂಧಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಹೈಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಲಿದೆ. ಹೀಗಾಗಿ, ನಗರದಲ್ಲಿ ಒಂದು ವಾರ ಕಾಲ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದರು

ಈ ಕುರಿತು ಮಾಹಿತಿ ನೀಡಿದ ಅವರು, ಹಿಜಾಬ್​ಗೆ ಸಂಬಂಧಿಸಿದಂತೆ ಮುಂಜಾಗ್ರತ ಕ್ರಮಗಳನ್ನ ತೆಗೆದುಗೊಳ್ಳಲಾಗಿದೆ. ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗುವುದು. ಯಾವುದೇ ಪ್ರತಿಭಟನೆ, ಱಲಿಗೆ ಅವಕಾಶವಿರುವುದಿಲ್ಲ ಎಂದಿದ್ದಾರೆ.

ಹೆಚ್ಚುವರಿಯಾಗಿ ಕೆಎಸ್​ಆರ್​ಪಿ ತುಕಡಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿ ಬೆಂಗಳೂರು ಜನತೆ ಇಲ್ಲಿವರೆಗೂ ನಮಗೆ ಸಹಕಾರ ನೀಡಿದ್ದೀರಿ, ಮುಂದಿನ ದಿನಗಳಲ್ಲೂ ನೀಡಿ ಎಂದು ಮನವಿ ಮಾಡಿದ್ದಾರೆ.

ಎಲ್ಲರ ಚಿತ್ತ ಹೈಕೋರ್ಟ್ ತೀರ್ಪಿನತ್ತ.. ನಾಳೆ ಹೈಕೋರ್ಟ್ ತೀರ್ಪು ಪ್ರಕಟಿಸಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ. ಪ್ರಕರಣ ಕೇವಲ ಧಾರ್ಮಿಕ ಸೂಕ್ಷ್ಮ ಸಂಗತಿಯನ್ನಷ್ಟೇ ಒಳಗೊಂಡಿದೆಯಲ್ಲದೇ, ರಾಜಕೀಯವಾಗಿಯೂ ತಳುಕು ಹಾಕಿಕೊಂಡಿರುವುದರಿಂದ ಹೈಕೋರ್ಟ್ ಯಾವುದೇ ತೀರ್ಪು ನೀಡಿದರೂ ಅರ್ಜಿದಾರ ವಿದ್ಯಾರ್ಥಿನಿಯರು ಅಥವಾ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸುವ ಎಲ್ಲ ಸಾಧ್ಯತೆಯೂ ಇದೆ.

ಓದಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ: ನಾಳೆ ಹೈಕೋರ್ಟ್​ನಿಂದ ಅಂತಿಮ ತೀರ್ಪು

Last Updated : Mar 14, 2022, 10:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.