ETV Bharat / state

ಗಣೇಶ ಹಬ್ಬಕ್ಕೆ KSRTC ಬಂಪರ್​ ಆಫರ್​: 1000 ಬಸ್​​ ರಸ್ತೆಗಿಳಿಸಿದ ಇಲಾಖೆ

author img

By

Published : Sep 7, 2021, 1:36 PM IST

ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಸೆಪ್ಟೆಂಬರ್‌ 12 ರಂದು ವಿಶೇಷ ವಾಹನಗಳನ್ನ ರಸ್ತೆಗಿಳಿಸಲು ಕೆಎಸ್​ಆರ್​ಟಿಸಿ ಸನ್ನದ್ಧವಾಗಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಆಸನಗಳನ್ನ ಕಾಯ್ದಿರಿಸುವ ಸೌಲಭ್ಯವನ್ನು ಸಹ ಮಾಡಲಾಗಿದೆ.

KSRTC
KSRTC

ಬೆಂಗಳೂರು: ಗೌರಿ ಗಣೇಶ ಹಬ್ಬದ ನಿಮಿತ್ತ ಕೆಎಸ್​​ಆರ್​ಟಿಸಿ ಸೆಪ್ಟೆಂಬರ್ 8 ಹಾಗೂ 9 ರಂದು ನಗರದ ವಿವಿಧ ಸ್ಥಳಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ 1000ಕ್ಕೂ ಹೆಚ್ಚು ಬಸ್​ಗಳನ್ನು ರಸ್ತೆಗಿಳಿಸುವ ತೀರ್ಮಾನ ಕೈಗೊಂಡಿದೆ.

ರಾಜ್ಯ ಮತ್ತು ಅಂತಾರಾಜ್ಯದ ವಿವಿಧ ಸ್ಥಳಗಳಿಗೆ ಸೆಪ್ಟೆಂಬರ್‌ 12 ರಂದು ವಿಶೇಷ ವಾಹನಗಳನ್ನ ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಇನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಆಸನಗಳನ್ನ ಕಾಯ್ದಿರಿಸುವ ಸೌಲಭ್ಯವನ್ನೂ ಸಹ ಮಾಡಲಾಗಿದೆ.

4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಹಾಗೆಯೇ ಹೋಗಿ ಬರುವ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಮಾಡಿದರೆ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತೆ. ಕೋವಿಡ್ ಹಿನ್ನೆಲೆ ಪ್ರಯಾಣಿಕರು ಮಾರ್ಗಸೂಚಿ ಪಾಲಿಸುವಂತೆ ಇಲಾಖೆ ಇದೇ ವೇಳೆ ಸೂಚಿಸಿದೆ.‌

ಎಲ್ಲಿಲ್ಲಿ ವಿಶೇಷ ಕಾರ್ಯಾಚರಣೆ :

ಕೆಂಪೇಗೌಡ ಬಸ್ ನಿಲ್ದಾಣ : ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ,ಶಿವಮೊಗ್ಗ ,ಹಾಸನ ಮತ್ತು ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ ,ರಾಯಚೂರು, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್​​ಗಳ ವ್ಯವಸ್ಥೆ ಮಾಡಲಾಗಿದೆ.

ಮೈಸೂರ ರಸ್ತೆ ಬಸ್ ನಿಲ್ದಾಣ( ಸ್ಯಾಟಲೈಟ್) : ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ಸ್ಯಾಟಲೈಟ್​ ಬಸ್​ ನಿಲ್ದಾಣದಿಂದ ಬಸ್​ಗಳು ತೆರಳಲಿವೆ.

ಶಾಂತಿ ನಗರ: ತಮಿಳುನಾಡು ಮತ್ತು ಆಂಧ್ರಪ್ರದೇಶ ತೆಲಂಗಾಣ ಕಡೆಗೆ ಅಂದರೆ ಮದುರೈ ಕುಂಬಕೋಣಂ ತಿರುಪತಿ ವಿಜಯವಾಡ, ಹೈದರಾಬಾದ್ ಚೆನ್ನೈ ಕೊಯಂಬತ್ತೂರ್ ಹೋಗುವ ಸಾರಿಗೆ ಬಸ್​ಗಳು ಶಾಂತಿನಗರದಿಂದ ಕಾರ್ಯಾಚರಣೆ ಮಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.