ETV Bharat / state

ನಳಿನ್ ಕುಮಾರ್ ಇನ್ನೂ ರಾಜಕೀಯವಾಗಿ ಬೆಳೆದಿಲ್ಲ, ಪ್ರಬುದ್ಧತೆಯೂ ಇಲ್ಲ: ಸಿದ್ದರಾಮಯ್ಯ

author img

By

Published : Nov 28, 2020, 8:29 PM IST

ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್​ ಹಣದಿಂದ ನಡೆದಿದ್ದು, ನಮ್ಮ ಸರ್ಕಾರ ಅದಕ್ಕೆಲ್ಲ ಕಡಿವಾಣ ಹಾಕಿದೆ ಎಂಬ ನಳಿನ್​ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವರ ಹೇಳಿಕೆಗಳಿಗೆ ಉತ್ತರ ಕೊಡೊದನ್ನೇ ಬಿಟ್ಟಿದ್ದೇನೆ ಎಂದಿದ್ದಾರೆ.

Siddaramaiah
ಸಿದ್ದರಾಮಯ್ಯ

ದೊಡ್ಡಬಳ್ಳಾಪುರ: ಹಿಂದಿನ ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್​ ಹಣದಿಂದ ನಡೆದಿದ್ದು, ನಾವು ಇದಕ್ಕೆಲ್ಲ ಕಡಿವಾಣ ಹಾಕಿದ್ದೇವೆಂಬ ನಳಿನ್ ಕುಮಾರ್ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಸಿದ್ದರಾಮಯ್ಯ

ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರ ಚಿಂತನಾ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಸಿದ್ದರಾಮಯ್ಯ ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾದ ನೇಕಾರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಇದೇ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ಸರ್ಕಾರ ಡ್ರಗ್ಸ್​ ಹಣದಿಂದ ನಡೆದಿದ್ದು, ನಮ್ಮ ಸರ್ಕಾರ ಅದಕ್ಕೆಲ್ಲ ಕಡಿವಾಣ ಹಾಕಿದೆ ಎಂಬ ನಳಿನ್​ ಹೇಳಿಕೆಗೆ ತಿರುಗೇಟು ನೀಡಿದರು. ಕಟೀಲ್ ರಾಜಕೀಯವಾಗಿ ಇನ್ನೂ ಬೆಳೆದಿಲ್ಲ. ರಾಜಕೀಯ ಪ್ರಬುದ್ಧತೆಯೂ ಅವರಿಗಿಲ್ಲ. ಅವರ ಹೇಳಿಕೆಗಳಿಗೆ ಉತ್ತರ ಕೊಡೋದನ್ನೇ ಬಿಟ್ಟಿದ್ದೇನೆ. ಅವರೊಬ್ಬ ಯಕಶ್ಚಿತ್ ರಾಜಕಾರಣಿ. ಕೊರೊನಾ ಸಂಕಷ್ಟಕ್ಕೀಡಾದವರಿಗೆ ಪರಿಹಾರ ತಲುಪಿಲ್ಲ. ಅಧ್ಯಕ್ಷರಾಗಿ ಪರಿಹಾರ ಕೊಡಿಸುವ ಕೆಲಸ ಮಾಡಲಿ. ಸಚಿವ ಸಂಪುಟದ ಸರ್ಕಸ್​ ಮಾಡೋದ್ರಲ್ಲಿ ಸರ್ಕಾರ ಕಾಲ ಕಳೆಯುತ್ತಿದೆ. ನನ್ನ ಪ್ರಕಾರ ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದರು.

ಸಿಎಂ ಪಿಎ ಎನ್.ಸಂತೋಷ್ ಆತ್ಮಹತ್ಯೆ ಯತ್ನ ವಿಚಾರಕ್ಕೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ಅವರು, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದರೋ ನನಗೆ ಗೊತ್ತಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.