ETV Bharat / state

ಚಾಕೋಲೇಟ್ ಕೊಡಲು ಮಕ್ಕಳ ಕೈಹಿಡಿದು ಎಳೆದ ಅಪರಿಚಿತ ಮಹಿಳೆ : ಮಕ್ಕಳ ಕಳ್ಳಿ ಎಂದು ಪೊಲೀಸರ ವಶಕ್ಕೆ ನೀಡಿದ ಗ್ರಾಮಸ್ಥರು

author img

By

Published : Sep 24, 2022, 11:02 PM IST

ಚಾಕೋಲೇಟ್ ಕೊಡಲು ಮಕ್ಕಳ ಕೈಹಿಡಿದು ಎಳೆದ ಅಪರಿಚಿತ ಮಹಿಳೆಯನ್ನು ದೊಡ್ಡಬಳ್ಳಾಪುರ ತಾಲೂಕಿನ ನೆರಳೇಘಟ್ಟ ಗ್ರಾಮದ ಜಬನರು ಪೊಲೀಸರ ವಶಕ್ಕೆ ನೀಡಿದ್ದಾರೆ.

crumors-of-child-thieves-
ಚಾಕಲೇಟ್ ಕೊಡಲು ಮಕ್ಕಳ ಕೈಹಿಡಿದು ಎಳೆದ ಅಪರಿಚಿತ ಮಹಿಳೆ

ದೊಡ್ಡಬಳ್ಳಾಪುರ : ಅಪರಿಚಿತ ಮಹಿಳೆಯೊಬ್ಬಳು ಚಾಕೋಲೇಟ್ ನೀಡಲು ಮಕ್ಕಳು ಕೈಹಿಡಿದು ಎಳೆದಿದ್ದಾಳೆ, ಮಕ್ಕಳ ಕಳ್ಳಿ ಎಂದು ಆತಂಕಗೊಂಡ ಗ್ರಾಮಸ್ಥರು ಮಹಿಳೆಯನ್ನ ಪೊಲೀಸರ ವಶಕ್ಕೆ ನೀಡಿದ್ದಾರೆ.

ಮಕ್ಕಳು ಕಳ್ಳರು ಬಂದಿದ್ದಾರೆಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರ ಪರಿಣಾಮ ಗ್ರಾಮಗಳಿಗೆ ಅಪರಿಚಿತ ವ್ಯಕ್ತಿ ಅನುಮಾನಸ್ಪದವಾಗಿ ಕಂಡರೆ ಮಕ್ಕಳು ಕಳ್ಳರೆಂದು ಹಲ್ಲೆ ನಡೆಸಿರುವ ಪ್ರಕರಣಗಳು ರಾಜ್ಯದಲ್ಲಿ ಕಂಡುಬಂದಿದೆ. ಇಂತಹದ್ದೇ ಘಟನೆ ಇಂದು ದೊಡ್ಡಬಳ್ಳಾಪುರ ತಾಲೂಕಿನ ನೆರಳೇಘಟ್ಟ ಗ್ರಾಮದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಮಧ್ಯ ವಯಸ್ಸಿನ ಅಪರಿಚಿತ ಮಹಿಳೆ ನೆರಳೇಘಟ್ಟ ಗ್ರಾಮದಲ್ಲಿ ಓಡಾಡುತ್ತಿದ್ದರು. ಇದೇ ವೇಳೆ ಗ್ರಾಮದ ಮೂವರು ಹೆಣ್ಣು ಮಕ್ಕಳಿಗೆ ಚಾಕೊಲೇಟ್ ಕೊಡಲು ಅಪರಿಚಿತ ಮಹಿಳೆ ಕೈಹಿಡಿದು ಎಳೆದಿದ್ದಾಳೆ. ಅಪರಿಚಿತ ಮಹಿಳೆ ಕಂಡು ಗಾಬರಿಗೊಂಡ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಕ್ಕೆ ಮಕ್ಕಳ ಕಳ್ಳಿ ಬಂದಿದ್ದಾಳೆಂದು ಆತಂಕಗೊಂಡ ಗ್ರಾಮಸ್ಥರು ಮಹಿಳೆಯನ್ನ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಪರಿಚಿತ ಮಹಿಳೆಯನ್ನ ವಿಚಾರಣೆ ಮಾಡಿದ್ದಾಗ ಆಕೆ ಮಂಜುಳಾ ಎಂದು ತಿಳಿದು ಬಂದಿದೆ. ತನ್ನ ಸಂಬಂಧಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆಂದು ತಿಳಿದು ಬಂದಿದ್ದಾಗಿ ಹೇಳುತ್ತಾಳೆ. ಒಮ್ಮೆ ಮಡಕುಶಿರಾ ಎಂದೇಳುವ ಆಕೆ ಮತ್ತೊಮ್ಮೆ ಸಿಂಗನಾಯಕನಹಳ್ಳಿ ಎಂದು ಹೇಳುತ್ತಿದ್ದಾಳೆ. ಆಕೆಯ ಗೊಂದಲ ಹೇಳಿಕೆ ಸಹ ಅನುಮಾನ ಮೂಡಿಸಿದ್ದು. ಸದ್ಯ ಆಕೆಯನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಇದನ್ನೂ ಓದಿ : ಮಕ್ಕಳ ಕಳ್ಳರ ವದಂತಿ.. ಪೊಲೀಸರಿಗೆ ನಾಲ್ವರನ್ನು ಹಿಡಿದುಕೊಟ್ಟ ವಿಜಯಪುರ ಜನತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.