ಹಣದಾಸೆಗೆ ಬೆಂಗಾಲಿ ಮಾಡೆಲ್​ ಕೊಂದ ಓಲಾ ಡ್ರೈವರ್​ಗೆ ಸಿಕ್ಕಿದ್ದು ಕೇವಲ 500 ರೂ.

author img

By

Published : Aug 23, 2019, 9:05 PM IST

Updated : Aug 23, 2019, 10:52 PM IST

ಓಲಾ ಕ್ಯಾಬ್ ಚಾಲಕನಿಂದ ಮಾಡೆಲ್​ ಬರ್ಬರ ಹತ್ಯೆ..! ()

ಹಣದ ಆಸೆಗಾಗಿ ಮಾಡೆಲ್‌‌ನನ್ನು ಕೊಂದಿರುವ ಆರೋಪದ ಮೇಲೆ ಓಲಾ ಕ್ಯಾಬ್​ ಚಾಲಕನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಕಳೆದ ಜುಲೈ 31 ರಂದು ಕೆಂಪೇಗೌಡ ಏರ್​ಪೋರ್ಟ್​ ಬಳಿ ಶವವಾಗಿ ಪೊಲೀಸರಿಗೆ ಪತ್ತೆಯಾಗಿದ್ದ ಕೋಲ್ಕತ್ತಾ ಮೂಲದ ಮಾಡೆಲ್ ಪೂಜಾ ಸಿಂಗ್ ಹತ್ಯೆಯ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೆಚ್‌.ಎಂ. ನಾಗೇಶ್(22) ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಮಾಡೆಲ್ ಬಳಿ ಹಣ ಇರಬಹುದು ಎನ್ನುವ ಆಸೆಗೆ ಬಿದ್ದು, ಆಕೆಯನ್ನ ಕೊಲೆ ಮಾಡಿದ್ದಾಗಿ ಓಲಾ ಕ್ಯಾಬ್​ ಡ್ರೈವರ್​ ಆಗಿರುವ ಆರೋಪಿ ನಾಗೇಶ್​ ಒಪ್ಪಿಕೊಂಡಿದ್ದಾನೆ. ಕೇವಲ ಐದುನೂರು ಚಿಲ್ಲರೆ ರೂಪಾಯಿ ಮಾತ್ರ ಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾನೆ ಹಂತಕ. ಸದ್ಯ ಹೆಚ್ಚಿನ ತನಿಖೆಗಾಗಿ ಬಾಗಲೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ಮಾಡೆಲ್​ ಬರ್ಬರ ಹತ್ಯೆ ಪ್ರಕರಣ... ಓಲಾ ಕ್ಯಾಬ್​ ಚಾಲಕ ಅರೆಸ್ಟ್​

ಇನ್ನು ಕೊಲೆಯಾದ ಮಾಡೆಲ್ ಪೂಜಾ ಸಿಂಗ್ ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್​ಮೆಂಟ್ ಮಾಡಿಕೊಂಡಿದ್ದರು. ಜುಲೈ 30 ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದಳು. ಕೆಲಸ ಮುಗಿಸಿ ಜುಲೈ 31 ರಂದು ವಾಪಸ್​ ತೆರಳಲು ಏರ್​ಪೋರ್ಟ್​​ಗೆ ಓಲಾ ಬುಕ್​ ಮಾಡಿದ್ದಾಗ ಆರೋಪಿ ಕ್ಯಾಬ್​ ಚಾಲಕ ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:ಹಣದ ಆಸೆಗೆ ಬೆಂಗಾಲಿ ಮಾಡೆಲ್ ಬೆಂಗಳೂರಲ್ಲಿ ಕೊಲೆ.
ಓಲಾ ಕ್ಯಾಬ್ ಚಾಲಕನಿಂದ ನಡೆದಿತ್ತು ಬರ್ಬರ ಹತ್ಯೆ..!

ಮಾಡೆಲ್‌‌ನನ್ನು ಕೊಂದ ಹಂತಕನನ್ನು ಬಾಗಲೂರು ಪೊಲೀಸರು ಕಾರ್ಯಾಚರಣೆ ಮಾಡಿ ಅಂದರ್ ಮಾಡಿದ್ದಾರೆ.ಎಚ್‌ಎಂ ನಾಗೇಶ್(೨೨) ಬಂಧಿತ ಆರೋಪಿ

ಕಲ್ಕತ್ತಾ ಮೂಲದ ಮಾಡೆಲ್ ಪೂಜಾ ಸಿಂಗ್ ಕಳೆದ ಜುಲೈ 31 ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶವವಾಗಿ ಪೊಲೀಸರಿಗೆ ಪತ್ತೆಯಾಗಿದ್ದಲು..ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಮಾಡೆಲ್ ಶವದಲ್ಲಿದ್ದ ಟೈಟನ್ ವಾಚ್, ಮಾಡೆಲ್ ಧರಿಸಿದ್ದ ಜೆಲಸ್21 ಜೀನ್ಸ್‌‌ ಪ್ಯಾಂಟ್ ಮೇಲಿದ್ದ ಬಾರ್ ಕೋಡ್ ಹಾಗೂ ಮೃತಳ‌ ಕೈನಲ್ಲಿದ್ದ ಉಂಗುರ ಹಾಗೂ ಆಕೆಯ ಚಹರೆ ಮೇಲ್ನೋಟಕ್ಕೆ ಉತ್ತರ‌ಭಾರತ‌ ಹಾಗು ಪಶ್ಚಿಮ ಬಂಗಾಳದ ಮಹಿಳೆಯರಂತೆ ಕಾಣ್ತಿತ್ತು .

ಹೀಗಾಗಿ ಈ ಗುರುತು ಹಿಂದೆ ಪೊಲೀಸರ ಎರಡು ತಂಡ ಶಾಪಿಂಗ್ ಮಾಲ್, ಆನ್‌ಲೈನ್ ಮಾರಾಟ ಸಂಸ್ಥೆಗಳ ಗ್ರಾಹಕರ ವಿವರ ಪಡೆದು ಮೃತಳ ಗುರುತು ಪತ್ತೆ ಮಾಡಿ ಪಶ್ಚಿಮ ಬಂಗಾಳ ಹಾಗು ದೆಹಲಿಗೆ ತೆರಳಿ‌ದಾಗ ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದ ನ್ಯೂ ಟೌನ್‌ ಪೊಲೀಸ್ ಠಾಣೆಯಲ್ಲಿ ಮಾಡೆಲ್ ಮಿಸ್ಸಿಂಗ್ ಕೇಸ್‌ ದಾಖಲಾಗಿತ್ತು ಮಿಸ್ಸಿಂಗ್ ಕೇಸ್‌ ದಾಖಲಿಸಿದ್ದ ವ್ಯಕ್ತಿಗಳು ಹಾಗೂ ಸಂಬಂಧಿಕರನ್ನು ಬಾಗಲೂರು ಪೊಲೀಸರು‌ ಸಂಪರ್ಕಿಸಿದಾಗ ಮಾಡೆಲ್ ಪತಿ ಸೌದೀಪ್ ಮೃತದೇಹ ಪತ್ತೆಹಚ್ಚಿ ತನ್ನ ಪತ್ನಿ ದೆಂದು ಖಾತ್ರಿ ಪಡಿಸಿದ್ರು..

ತನಿಖೆಯಲ್ಲಿ ಬಯಲು

ಕೋಲ್ಕತ್ತಾದಲ್ಲಿ ಮಾಡೆಲಿಂಗ್ ಜೊತೆಗೆ ಈವೆಂಟ್ ಮ್ಯಾನೇಜ್ ಮೆಂಟ್ ಮಾಡಿಕೊಂಡಿದ್ದ ಪೂಜಾ ಸಿಂಗ್ ಜುಲೈ 30 ನೇ ತಾರೀಖು ಕೆಲಸದ ನಿಮ್ಮಿತ್ತ ಸಿಲಿಕಾನ್ ಸಿಟಿಗೆ ಬಂದಿದ್ದಳು. ಹೀಗೆ ಬಂದವಳು ಇಮೇಲ್ ಮುಖಾಂತರ ಕೆಲಸ ಮುಗಿಸಿ ಓಲಾ ಕ್ಯಾಬ್ ಮಾಡಿಕೊಂಡು ತಾನು ಉಳಿದುಕೊಂಡಿದ್ದ ಪರಪ್ಪನ ಆಗ್ರಹಾರ ಹೋಟೇಲ್ ಗೆ ಹೋದಳು. ಮಾರನೇ ದಿನ ಮುಂಜಾನೆ ನಾಲ್ಕು ಗಂಟೆಗೆ ಏರ್ ಪೋರ್ಟ್ ಹೋಗಬೇಕಾಗಿದ್ದ ಕಾರಣ ಅದೆ ಕ್ಯಾಬ್ ಚಾಲಕನನ್ನ ಬೆಳಗ್ಗೆ ಡ್ರಾಪ್ ಮಾಡುವಂತೆ ಕೇಳೀದ್ಳು. ಒಕೆ ಎಂದಾ ಓಲಾ ಕ್ಯಾಬ್ ಹಂತಕ ನಾಗೇಶ್ ಬೆಳಗ್ಗೆ ವಿಮಾನ ನಿಲ್ದಾಣದ ಕಡೆ ಕರೆದುಕೊಂಡು ಬಂದಿದ್ದಾನೆ.

ಆದ್ರೆ ಮಾಡೆಲ್ ಬಳಿ ಹಣ ಇರುಬಹುದು ಎನ್ನುವ ಆಸೆಗೆ ಬಿದ್ದು ಆಕೆಯನ್ನ ಕೊಲೆ ಮಾಡಿದ್ದಾನೆ. ಪ್ರಕರಣದ ಬೆನ್ನು ಬಿದ್ದ ಪೊಲೀಸ್ರಿಗೆ ಆಕೆ ಯಾರೆಂದೆ ಗೋತ್ತಾಗಿರಲಿಲ್ಲ. ಆದ್ರೆ ಆಕೆ ತೊಟ್ಟಿದ್ದ ಜಿನ್ಸ್ ಪ್ಯಾಂಟ್ ಹಾಗೂ ಟೈಟಾನ್ದ ವಾಚ್ ಆಕೆ ಕೋಲ್ಕತ್ತಾದವಳು ಎನ್ನುವ ಮಾಹಿತಿ ನೀಡಿತ್ತು. ಇದನ್ನೆ ಆಧರಿಸಿ ಪೂಜಾ ಸಿಂಗ್ ವಿಳಾಸ ಪತ್ತೆ ಹಚ್ಚಿದ ಪೊಲೀಸ್ರು ಈಗ ಆರೋಫಿಯನ್ನು ಬಂಧಿಸಿದ್ದಾರೆ…

ಹಣದ ಆಸೆಗೆ ಬಿದ್ದು ಕೊಲೆ ಮಾಡಿದ ನಾಗೇಶ

ಇನ್ನು ಪೊಲೀಸರಿಗೆ ಈ‌ ಪ್ರಕರಣ ತಲೆ ನೋವಾಗಿದ್ದರು ಕೂಡ ಮಾಡೇಲ್ ಇ ಮೇಲ್ ಐಡಿ ಚೆಕ್ ಮಾಡಿದಾಗ ಓಲಾ ಕ್ಯಾಬ್ ಬುಕ್ಕು ಮಾಡಿರುವ ಮಾಹಿತಿ ಆಧಾರದ ಮೇರೆಗೆ ನಾಗೇಶ್ ಬಂಧಿಸಿದಾಗ ವಿಚಾರ ಬಾಯಿಬಿಟ್ಟಿದ್ದಾನೆ.ವಿಪರ್ಯಾಸ ವೆಂದ್ರೆ ಮಾಡೆಲ್ ಬಳಿ
ಕೇವಲ ಐದುನೂರು ಚಿಲ್ಲರೆ ರೂಪಾಯಿ ಮಾತ್ರ ಸಿಕ್ಕಿರುವ ಮಾಹಿತಿತಿಳಿಸಿದ್ದನೆ. ಸದ್ಯ ಹೆಚ್ಚಿನ ತನಿಖೆ ಗಾಗಿ ಬಾಗಲೂರು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ

Body:KN_BNG_12_MURDER_7204498Conclusion:KN_BNG_12_MURDER_7204498
Last Updated :Aug 23, 2019, 10:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.