ETV Bharat / state

ಗ್ರಾಹಕರಿಗೆ ಹೊರೆಯಾಗದಂತೆ ನಂದಿನಿ ಹಾಲಿನ ಬೆಲೆ ಏರಿಸಲಾಗುವುದು: ಕೆಎಂಎಫ್ ಅಧ್ಯಕ್ಷ

author img

By

Published : Jan 18, 2020, 11:49 PM IST

ಬೆಲೆ ಏರಿಕೆಗೂ ಮುನ್ನ ರೈತರ ಸಲಹೆ ಪಡೆಯಲಾಗುವುದು. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ಬೆಲೆ ಏರಿಕೆಯಾಗಿಲ್ಲ. ಈ ಬಾರಿ ಖಂಡಿತ ಬೆಲೆ ಏರಿಕೆಯಾಗಲಿದೆ. ಆದರೆ, ಎಷ್ಟು ಎಂದು ಈಗಲೇ ಹೇಳಲಾಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಚಾರಕಿಹೊಳಿ ಹೇಳಿದರು.

Nandini milk price to be increased without burdening consumers: KMF president
ಗ್ರಾಹಕರಿಗೆ ಹೊರೆಯಾಗದಂತೆ ನಂದಿನಿ ಹಾಲಿನ ಬೆಲೆ ಏರಿಸಲಾಗುವುದು: ಕೆಎಂಎಫ್ ಅಧ್ಯಕ್ಷ

ದೊಡ್ಡಬಳ್ಳಾಪುರ: ಅಧ್ಥಕ್ಷರಾದ ಮೇಲೆ ಎಲ್ಲಾ ಹಾಲಿನ ಒಕ್ಕೂಟಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದೆ. ಹಾಗೆಯೇ ದೊಡ್ಡಬಳ್ಳಾಪುರ ಹಾಲಿನ ಡೈರಿಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಚಾರಕಿಹೊಳಿ ಹೇಳಿದರು.

ಗ್ರಾಹಕರಿಗೆ ಹೊರೆಯಾಗದಂತೆ ನಂದಿನಿ ಹಾಲಿನ ಬೆಲೆ ಏರಿಸಲಾಗುವುದು: ಕೆಎಂಎಫ್ ಅಧ್ಯಕ್ಷ

ಇದೇ ವೇಳೆ ನಂದಿನಿ ಹಾಲಿನ ಬೆಲೆ ಏರಿಕೆ ಬಗ್ಗೆ ಮಾತನಾಡಿದ ಅವರು, ಬೋರ್ಡ್​ ಮೀಟಿಂಗ್‌ನಲ್ಲಿ ಹಾಲಿನ ಬೆಲೆ ಹೆಚ್ಚಿಸುವ ತೀರ್ಮಾನವನ್ನು ಡೈರೆಕ್ಟರ್ ಕೈಗೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಹ ಮಾತನಾಡಲಾಗಿದೆ. ಅವರು ಎರಡು ದಿನ ಕಾಲಾವಕಾಶ ಕೇಳಿದ್ದಾರೆ. ಅವರ ಅನುಮತಿ ನಂತರ ಬೆಲೆ ಏರಿಕೆ ಮಾಡಲಾಗುವುದು ಎಂದರು.

ಬೆಲೆ ಏರಿಕೆಗೂ ಮುನ್ನ ರೈತರ ಸಲಹೆ ಪಡೆಯಲಾಗುವುದು. ಕಳೆದ ಮೂರು ವರ್ಷಗಳಿಂದ ನಂದಿನಿ ಹಾಲಿನ ಬೆಲೆ ಏರಿಕೆಯಾಗಿಲ್ಲ. ಈ ಬಾರಿ ಖಂಡಿತ ಬೆಲೆ ಏರಿಕೆಯಾಗಲಿದೆ. ಆದರೆ, ಎಷ್ಟು ಎಂದು ಈಗಲೇ ಹೇಳಲಾಗುವುದಿಲ್ಲ ಎಂದರು.

Intro:ನಂದಿನಿ ಹಾಲು ಬೆಲೆ ಏರಿಕೆಯಾಗುತ್ತೆ, ಎಷ್ಟಾಗುತ್ತೆ ಗೊತ್ತಿಲ್ಲ ಕಾದು ನೋಡಿ - ಕೆಎಮ್ ಎಫ್  ಅಧ್ಯಕ್ಷBody:ದೊಡ್ಡಬಳ್ಳಾಪುರ : ಅಧ್ಥಕ್ಷರಾದ ಮೇಲೆ ಎಲ್ಲಾ ಹಾಲಿನ ಒಕ್ಕೂಟಗಳಿಗೆ ಭೇಟಿ ನೀಡುವ  ಅವಕಾಶ ಸಿಕ್ಕಿದೆ. ಹಾಗೆಯೇ ದೊಡ್ಡಬಳ್ಳಾಪುರ ಹಾಲಿನ ಡೈರಿಗೆ ಭೇಟಿ ನೀಡುತ್ತಿರುವುದು ಸಂತಸ ತಂದಿದೆ ಎಂದರು ಕೆಎಮ್ ಎಫ್  ಅಧ್ಯಕ್ಷ ಬಾಲಚಂದ್ರ ಚಾರಕಿಹೋಳಿ. 


ಇದೇ ವೇಳೆ  ನಂದಿನಿ ಬೆಲೆ ಏರಿಕೆ ಬಗ್ಗೆ ಮಾತನಾಡುತಾ ಬೋರ್ಡ್  ಮೀಟಿಂಗ್ ನಲ್ಲಿ ಡೈರೆಕ್ಟರ್ ಹಾಲಿನ ಬೆಲೆ ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ. ಬೆಲೆ ಎರಿಕೆಯ ಅಧಿಕಾರಿ ಸಹ ಕೊಟ್ಟಿದ್ದಾರೆ. ಈ ಬಗ್ಗೆ  ಮುಖ್ಯಮಂತ್ರಿಗಳ ಜೊತೆ ಮಾತನಾಡಲಾಗಿದೆ. ಅವರು ಎರಡು ದಿನ ಟೈಮ್ ಕೇಳಿದ್ದಾರೆ. ಅವರು ಅನುಮತಿ ಕೊಟ್ಟ ನಂತರ ಬೆಲೆ ಏರಿಕೆ ಮಾಡಲಾಗುವುದು. ಯಾವ ರೀತಿ ಬೆಲೆ ಹೆಚ್ಚಿಸ ಬೇಕು ರೈತರಿಗೆ ಯಾವ ರೀತಿ  ಅನುಕೂಲವಾಗುತ್ತೆ ಎಂಬುದನ್ನ ತೀರ್ಮಾನಿ ಬೆಲೆ ಏರಿಕೆ ಮಾಡಲಾಗುವುದೆಂದರು.ನಂದಿನಿ ಹಾಲು ಬೆಲೆ ಏರಿಕೆಯಾಗುತ್ತೆ, ಎಷ್ಟಾಗುತ್ತೆ ಗೊತ್ತಿಲ್ಲ ಕಾದು ನೋಡಿ ಎಂದರು. ಕಳೆದ ಮೂರು ವರ್ಷಗಳಿಂದ ನಂದಿನಿ ಬೆಲೆ ಏರಿಕೆಯಾಗಿಲ್ಲ ,   ಬೆಲೆ ಎರಿಸಲು ಒತ್ತಡ ಬಂದ ಹಿನ್ನೆಲೆ ಗ್ರಾಹಕರಿಗೆ ಹೊರೆಯಾಗದಂತೆ ರೈತರಿಗೆ ಅನುಕೂಲವಾಗುವ ದರದಲ್ಲಿ ಬೆಲೆ ಏರಿಕೆ ಮಾಡಲಾಗುವುದು. ಕರ್ನಾಟಕದಲ್ಲಿ ನಂದಿನಿ ಹಾಲು ನಂಬರ್ ಒನ್ ಇದೆ . ಇವತ್ತು ಬೆಸ್ಟ್ ಇದೆ ನಾಳೆಯು ಬೆಸ್ಟ್ ಇರಲಿದೆ ಮುಂದೆಯೂ ಬೆಸ್ಟ್ ಇರಲಿದೆ. ಪ್ರೈವೇಟ್ ಹಾಲು ಕಂಪನಿಗಳು ನಂದಿನಿ ಹಾಲನ್ನು ಕಂಪಿಟ್ ಮಾಡಲು ಸಾಧ್ಯವಿಲ್ಲವೆಂದರು


ಬೈಟ್: ಬಾಲಚಂದ್ರ ಚಾರಕಿಹೋಳಿ.  ಅಧ್ಥಕ್ಷರು, ಕೆಎಮ್ ಎಫ್ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.