ETV Bharat / state

ಕೆಐಎಎಲ್ ಇಮಿಗ್ರೇಷನ್​ಗೆ ಉದ್ದನೆಯ ಕ್ಯೂ: ಬೇಸರ ವ್ಯಕ್ತಪಡಿಸಿದ ಪ್ರಯಾಣಿಕರು

author img

By

Published : Dec 13, 2022, 1:39 PM IST

ಏರ್​ಪೋರ್ಟ್​ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಸಿಬ್ಬಂದಿ ಇದ್ದರೂ, ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗಿಲ್ಲ. ಬುಕ್ ಮಾಡಿದ್ದ ಕ್ಯಾಬ್ ಸ್ಥಳಕ್ಕೆ ತಲುಪಲು 40 ನಿಮಿಷಗಳು ಬೇಕಾಯ್ತು ಎಂದು ಪ್ರಯಾಣಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Long Queue at KIAL Immigration
ಕೆಐಎಎಲ್ ಇಮಿಗ್ರೇಷನ್​ಗೆ ಉದ್ದನೆಯ ಕ್ಯೂ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಇಮಿಗ್ರೇಷನ್​ನಲ್ಲಿ ಪ್ರಯಾಣಿಕರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ವಿಮಾನ ನಿಲ್ದಾಣ ನಿರ್ವಹಣೆ ಬಗ್ಗೆ ಪ್ರಯಾಣಿಕರು ಬೇಸರು ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕ ಪ್ರಶಾಂತ್ ದಯಾಳ್ ಟ್ವೀಟ್​ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಪಕ್ರಿಯೆ ಭಯಾನಕವಾಗಿದೆ. ಕ್ಷಮಿಸಲಾರದ ನಿರ್ವಹಣೆ ಇದಾಗಿದ್ದು, ನಿಜವಾಗಿಯೂ ನಾವು ಮುಂದೆ ಸಾಗುತ್ತಿದ್ದೇವೆಯಾ, ಪ್ರಯಾಣಿಕರನ್ನು ನಿರ್ವಹಿಸಲು ಸಾಮಾರ್ಥ್ಯ ಇಲ್ಲದಿರುವಾಗ ಇಷ್ಟೊಂದು ವಿಮಾನಗಳ ಹಾರಾಟ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಲೇಖಕಿ ನಂದಿತಾ ಅಯ್ಯರ್ ಟ್ವೀಟ್ ಮಾಡಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಏರ್​ಪೋರ್ಟ್​ನಲ್ಲಿ ಟ್ರಾಫಿಕ್ ನಿರ್ವಹಣೆಗೆ ಸಿಬ್ಬಂದಿ ಇದ್ದರೂ, ಟ್ರಾಫಿಕ್ ಸಮಸ್ಯೆ ಬಗೆ ಹರಿಸಲು ಸಾಧ್ಯವಾಗಿಲ್ಲ. ಬುಕ್ ಮಾಡಿದ್ದ ಕ್ಯಾಬ್ ಸ್ಥಳಕ್ಕೆ ತಲುಪಲು 40 ನಿಮಿಷಗಳು ಬೇಕಾಯ್ತು ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿಐಎಎಲ್, ಹಬ್ಬದ ಸೀಸನ್ ಆಗಿರುವುದರಿಂದ ಜನದಟ್ಟಣೆ ಉಂಟಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣ ಅತ್ಯುತ್ತಮ ನಿರ್ವಹಣೆಯಲ್ಲಿ ದೇಶದ ಮೊದಲ ಸ್ಥಾನದಲ್ಲಿದೆ. ರಜಾ ದಿನಗಳಲ್ಲಿ ಜನದಟ್ಟಣೆ ನಿಯಂತ್ರಿಸಲು ವಿಮಾನ ನಿಲ್ದಾಣದ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಎಂದಿದೆ.

ಇದನ್ನೂ ಓದಿ: ಭಾರತೀಯ ಪಾಸ್​ಪೋರ್ಟ್​ನಲ್ಲಿ ಯಮನ್ ದೇಶಕ್ಕೆ ಪ್ರಯಾಣ: ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.