ETV Bharat / state

ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಣಿಕೆ: ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಾಕಿ

author img

By

Published : Aug 31, 2022, 7:29 PM IST

ಬ್ಯಾಂಕಾಕ್​ನಿಂದ ಬಂದ ವ್ಯಕ್ತಿಯೊಬ್ಬ ತನ್ನ ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಣಿಕೆಗೆ ಯತ್ನಿಸಿದ್ದು, ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

kn_bng_04_coustms_av_KA10057
ಅಕ್ರಮ ಚಿನ್ನ ಸಾಗಾಟ ಪ್ರಕರಣ

ದೇವನಹಳ್ಳಿ: ಚಿನ್ನದ ಗಟ್ಟಿಯನ್ನು ಗುದನಾಳದಲ್ಲಿ ಬಚ್ಚಿಟ್ಟು ಕಳ್ಳ ಸಾಗಣೆಗೆ ಯತ್ನಿಸಿದ ಚಾಲಾಕಿ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಬಂಧಿತ ಆರೋಪಿಯಿಂದ 22ಲಕ್ಷ ಮೌಲ್ಯದ 442 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಆಗಸ್ಟ್ 30ರಂದು ಬ್ಯಾಂಕಾಕ್ ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕನನ್ನು ವೈಮಾನಿಕ ಗುಪ್ತಚರ ದಳ(AIU) ಅಧಿಕಾರಿಗಳು ತಪಾಸಣೆ ನಡೆಸಿದಾಗ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿರುವುದು ತಿಳಿದುಬಂದಿದೆ.

ಬಂಧಿತ ವ್ಯಕ್ತಿ ತನ್ನ ಗುದನಾಳದಲ್ಲಿ ಕ್ಯಾಪ್ಸುಲ್ ಮಾದರಿಯಲ್ಲಿ ಚಿನ್ನವನ್ನು ಬಚ್ಟಿಟ್ಟುಕೊಂಡು ಸಾಗಣೆಗೆ ಯತ್ನಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಕಂತೆ ಕಂತೆ ನಕಲಿ ನೋಟು ಚಲಾವಣೆಗೆ ಯತ್ನ: ಮೂವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.