ETV Bharat / state

ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: 45,11,606 ರೂ. ಸಂಗ್ರಹ

author img

By

Published : Sep 22, 2020, 12:45 AM IST

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 45 ಲಕ್ಷದ 11 ಸಾವಿರದ 606 ರೂ. ಹಣ ಸಂಗ್ರಹವಾಗಿದೆ.

Hundi count of Ghati Subramanya Temple
ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: 45,11,606 ರೂ. ಸಂಗ್ರಹ

ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, 45 ಲಕ್ಷದ 11 ಸಾವಿರದ 606 ರೂ. ಹಣ ಸಂಗ್ರಹವಾಗಿದೆ.

ಘಾಟಿ ಸುಬ್ರಹ್ಮಣ್ಯ ದೇವಾಲಯದ ಹುಂಡಿ ಎಣಿಕೆ: 45,11,606 ರೂ. ಸಂಗ್ರಹ

ಕೊರೊನಾ ಲಾಕ್​ಡೌನ್ ಸಮಯದಲ್ಲಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದಾಗಿ ದೇವಾಲಯದ ಆದಾಯ ಸಹ ಕುಸಿದಿತ್ತು. ಆದರೆ, ಈ ತಿಂಗಳಿನಿಂದ ಹುಂಡಿ ಹಣ ಸಂಗ್ರಹ ಏರಿಕೆಯಾಗಿದ್ದು, 45,11,606 ರೂ. ಹಣ ಸಂಗ್ರಹವಾಗಿದೆ. ಇದರೊಂದಿಗೆ 1 ಕೆ.ಜಿ 100 ಗ್ರಾಂ ಬೆಳ್ಳಿ, 7 ಗ್ರಾಂ ಚಿನ್ನ ಹುಂಡಿಯಲ್ಲಿ ಸಿಕ್ಕಿದೆ.

ಇನ್ನು, ಹುಂಡಿಯಲ್ಲಿ ಆಸ್ಟ್ರೇಲಿಯಾ, ಮಲೇಶಿಯಾ, ಚೈನಾ, ಸಿಂಗಾಪುರ್ ದೇಶಗಳ ನೋಟುಗಳು ಸಿಕ್ಕಿದ್ದು, ಇದರೊಂದಿಗೆ ನಿಷೇಧಿತ 500 ಹಾಗೂ 1,000 ರೂ. ಮುಖಬೆಲೆಯ 2 ನೋಟುಗಳು ಸಿಕ್ಕಿವೆ.

ಎಣಿಕೆ ಕಾರ್ಯದಲ್ಲಿ ಮುಜರಾಯಿ ತಹಶೀಲ್ದಾರ್ ಜಿ.ಜೆ.ಹೇಮಾವತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಗುರುರಾಜಶರ್ಮ, ಭಕ್ತಾದಿಗಳು, ಪೊಲೀಸ್ ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದ ಸಮ್ಮುಖದಲ್ಲಿ ಹುಂಡಿ ಹಣ ಎಣಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.