ETV Bharat / state

ರೇಷನ್ ತರಲು ಹಣವಿಲ್ಲದೆ ನೇಣಿಗೆ ಶರಣಾದ ನೇಕಾರ..

author img

By

Published : Jun 23, 2020, 7:11 PM IST

ರೇಷನ್ ತರಲು ಹಣವಿಲ್ಲದೆ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದ ನೇಕಾರನೋರ್ವ ನೇಣಿಗೆ ಶರಣಾಗಿದ್ದಾನೆ. ನಾರಯಣಪ್ಪ (40) ನೇಣಿಗೆ ಶರಣಾದವರು.

weaver  committed suicide
ರೇಷನ್ ತರಲು ಹಣವಿಲ್ಲದೆ ನೇಣಿಗೆ ಶರಣಾದ ನೇಕಾರ

ದೊಡ್ಡಬಳ್ಳಾಪುರ: ರೇಷನ್ ತರಲು ಹಣವಿಲ್ಲದೆ ಮನನೊಂದ ನೇಕಾರನೋರ್ವ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರದ ಭುವನೇಶ್ವರಿ ನಗರದಲ್ಲಿ ನಡೆದಿದೆ.

ನಾರಯಣಪ್ಪ (40) ನೇಣಿಗೆ ಶರಣಾದ ನೇಕಾರ. ಲಾಕ್ ಡೌನ್​ನಿಂದ ನೇಕಾರಿಕೆ ಕೆಲಸ ನಡೆಯದೆ ಈತ ಸಂಸಾರ ನಡೆಸಲು 70 ಸಾವಿರ ಸಾಲ ಮಾಡಿದ. ಅಲ್ಲದೇ ಮನೆಗೆ ರೇಷನ್ ತರುವಂತೆ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು. ಮಕ್ಕಳು ಉಪವಾಸದಿಂದ ಇರುತ್ತಿದ್ದರು. ಇದರಿಂದ ನೊಂದ ನಾರಾಯಣಪ್ಪ ನೀಲಗಿರಿ ತೋಪಿನ ಮರಕ್ಕೆ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.