ETV Bharat / state

ಆಕ್ಸ್​​ಫರ್ಡ್​​​ ಆಸ್ಪತ್ರೆ ನಿರ್ಲಕ್ಷ್ಯ.. ನೆಲದ ಮೇಲೆ ಶವ ಬಿದ್ದರೂ ಕೇಳೋರೇ ಇಲ್ಲ!

author img

By

Published : Apr 24, 2021, 3:42 PM IST

Updated : Apr 24, 2021, 4:38 PM IST

ಇಂದು ಬೆಳಗ್ಗೆ ಕೋವಿಡ್​​​​ನಿಂದ ಮೃತಪಟ್ಟಿದ್ದಾನೆ. ಆದರೆ, ಇದಕ್ಕೂ ಮೊದಲು ಆತ ಹಾಸಿಗೆಯಿಂದ ಕೆಳಗೆ ನೆಲದ ಮೇಲೆ ಬಿದ್ದಿದ್ದಾನೆ. ಆ ವೇಳೆಯಲ್ಲೂ ಯಾರೊಬ್ಬರೂ ಆತನ ಸಹಾಯಕ್ಕೆ ಬಂದಿಲ್ಲ. ಬಳಿಕ ಆತ ಮೃತಪಟ್ಟಿದ್ದಾನೆ. ಆದರೂ ಸುಮಾರು 4 - 5ಗಂಟೆ ಶವ ನೆಲದ ಮೇಲೆ ಇಟ್ಟಿದ್ದಾರೆ.

dead-body-laying-ground-from-hours-in-oxford-hospital-bangalore
ನೆಲದ ಮೇಲೆ ಶವ ಬಿದ್ದರೂ ಕೇಳೋರೆ ಇಲ್ಲ

ಆನೇಕಲ್ (ಬೆಂಗಳೂರು): ಕೋವಿಡ್​​​​​​ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಆಸ್ಪತ್ರೆಯ ನೆಲದ ಮೇಲೆ ಹಾಗೆಯೆ ಬಿಟ್ಟು ನಿರ್ಲಕ್ಷ್ಯ ತೋರಿರುವ ಘಟನೆ ನಡೆದಿದೆ. ಅತ್ತಿಬೆಲೆ-ಯಡವನಹಳ್ಳಿ ಗೇಟ್​​ ಬಳಿ ಇರುವ ಆಕ್ಸ್​​​​​ಫರ್ಡ್​​​​ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇನ್ನೊಂದು ಬೆಡ್​​​ನಲ್ಲಿದ್ದ ರೋಗಿಯೊಬ್ಬರು ವಿಡಿಯೋ ಮಾಡಿದ್ದಾರೆ.

ಆಕ್ಸ್​​ಫರ್ಡ್​​​ ಆಸ್ಪತ್ರೆ ನಿರ್ಲಕ್ಷ್ಯ.. ನೆಲದ ಮೇಲೆ ಶವ ಬಿದ್ದರೂ ಕೇಳೋರೇ ಇಲ್ಲ!

ಇಂದು ಬೆಳಗ್ಗೆ ಕೋವಿಡ್​​​​ನಿಂದ ಮೃತಪಟ್ಟಿದ್ದಾನೆ. ಆದರೆ ಇದಕ್ಕೂ ಮೊದಲು ಆತ ಹಾಸಿಗೆಯಿಂದ ಕೆಳಗೆ ನೆಲದ ಮೇಲೆ ಬಿದ್ದಿದ್ದಾನೆ. ಆ ವೇಳೆಯಲ್ಲೂ ಯಾರೊಬ್ಬರೂ ಆತನ ಸಹಾಯಕ್ಕೆ ಬಂದಿಲ್ಲ. ಬಳಿಕ ಆತ ಮೃತಪಟ್ಟಿದ್ದಾನೆ. ಆದರೂ ಸುಮಾರು 4-5ಗಂಟೆ ಶವ ನೆಲದ ಮೇಲೆ ಇಟ್ಟಿದ್ದಾರೆ.

ಬಳಿಕ ಸಿಬ್ಬಂದಿ ಆಗಮಿಸಿ ಉಳಿದ ರೋಗಿಗಳಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯಕ್ಕೆ ಉಳಿದ ರೋಗಿಗಳು ನರಕಯಾತನೆ ಪಡುವ ಸ್ಥಿತಿ ಎದುರಾಗಿದೆ.

Last Updated :Apr 24, 2021, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.