ETV Bharat / state

ಇಂಗ್ಲೆಂಡ್​​ನಿಂದ ಬಂದ ಇಬ್ಬರು ಮಕ್ಕಳು ಸೇರಿ ಐವರಿಗೆ ಕೊರೊನಾ

author img

By

Published : Dec 13, 2021, 3:09 PM IST

ಇಂದು ಮುಂಜಾನೆ ಇಂಗ್ಲೆಂಡ್​​ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ : ವಿದೇಶದಿಂದ ಬರುತ್ತಿರುವ ಪ್ರಯಾಣಿಕರಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಮುಂಜಾನೆ ಇಂಗ್ಲೆಂಡ್​​ನಿಂದ ಬಂದ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಇಂದು ಮುಂಜಾನೆ ಯುಕೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಆಗಮಿಸಿದ್ದು, ಪ್ರಯಾಣಿಕರನ್ನ ಆರ್ ಟಿ ಪಿಸಿಆರ್ ಟೆಸ್ಟ್​​​ಗೆ ಒಳಪಡಿಸಿದ್ದಾಗ 5 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 18 ವರ್ಷದ ಇಬ್ಬರಿಗೆ, 6 ವರ್ಷದ ಇಬ್ಬರು ಮಕ್ಕಳಿಗೆ ಮತ್ತು 30 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ವರದಿಯಲ್ಲಿ ದೃಢಪಟ್ಟಿದೆ. ಸೋಂಕಿತರನ್ನು ಕೆಐಎಎಲ್ ನಿಂದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ : ಒಮಿಕ್ರಾನ್‌ ಲಸಿಕೆಯ ಪರಿಣಾಕಾರಿಯನ್ನು ಕುಗ್ಗಿಸುತ್ತೆ; ವೇಗವಾಗಿ ಹರಡುವ ಆತಂಕ ವ್ಯಕ್ತಪಡಿಸಿದ WHO

ETV Bharat Logo

Copyright © 2024 Ushodaya Enterprises Pvt. Ltd., All Rights Reserved.