ETV Bharat / state

ಹೈಕಮಾಂಡ್ ಆಜ್ಞೆ: ದೊಡ್ಡಬಳ್ಳಾಪುರ ತಾ.ಪಂ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ

author img

By

Published : Aug 4, 2020, 12:00 PM IST

2016ರಲ್ಲಿ ನಡೆದ ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 22 ಸ್ಥಾನಗಳ ಪೈಕಿ 15 ಸ್ಥಾನ ಪಡೆದ ಕಾಂಗ್ರೆಸ್ ಅಧಿಕಾರ ಪಡೆಯಿತು, ಮೊದಲ ಅಧ್ಯಕ್ಷರಾಗಿ ಶ್ರೀವತ್ಸಾ 3 ವರ್ಷ 1 ತಿಂಗಳು ಅಧ್ಯಕ್ಷರಾಗಿದ್ರು, ಅನಂತರ ಅಧ್ಯಕ್ಷರಾದ ಡಿ.ಸಿ. ಶಶಿಧರ್ 9 ತಿಂಗಳು ಅಧಿಕಾರದಲ್ಲಿದ್ದರು.

ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ
ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ

ದೊಡ್ಡಬಳ್ಳಾಪುರ : ಇದ್ದಕ್ಕಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ತಿರ್ಮಾನಕ್ಕೆ ತಲೆಬಾಗಿ ಶಶಿಧರ್ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಡಿ.ಸಿ ಶಶಿಧರ್ ರಾಜೀನಾಮೆಯಿಂದ ತೆರವಾಗಿದ್ದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷೆಯಾಗಿ ಪದ್ಮಾವತಿ ಅಣ್ಣಯ್ಯಪ್ಪ ಪ್ರಮಾಣ ವಚನ ಸ್ವೀಕರಿಸಿದರು.

ತಾಲೂಕು ಪಂಚಾಯತ್ ಅಧಿಕಾರವನ್ನ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಪಡೆದಿದ್ದು, ಈ ಅವಧಿಯಲ್ಲಿ ಮೂರನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಹೈಕಮಾಂಡ್ ಆದೇಶಕ್ಕೆ ತಲೆ ಬಾಗಿದ ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರಿಂದ, ಪ್ರಭಾರ ಅಧ್ಯಕ್ಷೆಯಾಗಿ ಪದ್ಮಾವತಿ ಅಣ್ಣಯ್ಯಪ್ಪ ಅಧಿಕಾರ ಸ್ವೀಕರಿಸಿದರು.

ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ

2016 ರಲ್ಲಿ ನಡೆದ ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಚುನಾವಣೆಯಲ್ಲಿ 22 ಸ್ಥಾನಗಳ ಪೈಕಿ 15 ಸ್ಥಾನ ಪಡೆದ ಕಾಂಗ್ರೆಸ್ ಅಧಿಕಾರ ಪಡೆಯಿತು, ಮೊದಲ ಅಧ್ಯಕ್ಷರಾಗಿ ಶ್ರೀವತ್ಸಾ 3 ವರ್ಷ 1 ತಿಂಗಳು ಅಧ್ಯಕ್ಷರಾಗಿದ್ದರು. ಅನಂತರ ಅಧ್ಯಕ್ಷರಾದ ಡಿ.ಸಿ. ಶಶಿಧರ್ 9 ತಿಂಗಳು ಅಧಿಕಾರದಲ್ಲಿದ್ದರು.

ತಾಲೂಕು ಪಂಚಾಯಿತಿಯ ಅಧಿಕಾರಾವಧಿ ಇನ್ನೂ ಒಂದು ವರ್ಷ ಇದ್ದು, ಶಶಿಧರ್ ದಿಢೀರ್ ರಾಜಿನಾಮೆ ನೀಡಿದ್ದು ತಾಲೂಕು ರಾಜಕೀಯ‌ದಲ್ಲಿ ಕುತೂಹಲ ಮೂಡಿಸಿದೆ. ನಿರ್ಗಮಿತ ಅಧ್ಯಕ್ಷ ಡಿ.ಸಿ ಶಶಿಧರ್ ಮಾತನಾಡಿ, ಅಧಿಕಾರ ಶಾಶ್ವತ ಅಲ್ಲ, ಶಾಶ್ವತವಾಗಿ ಉಳಿಯುವುದು ಅಭಿವೃದ್ಧಿ ಕೆಲಸಗಳು ಮಾತ್ರ. ನಿಮ್ಮ ಅಧಿಕಾರವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯ ಕೆಲಸ ಮಾಡಿ ಎಂದು ಪ್ರಭಾರ ಅಧ್ಯಕ್ಷರಿಗೆ ಶುಭಾಶಯ ಹೇಳಿದರು.

ಆದರೆ, ಉಳಿದ ಇನ್ನೊಂದು ವರ್ಷ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ ಇತ್ತು. ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕಾಗಿ ಮೊದಲಿನಿಂದ ಪೈಪೋಟಿ ಇದ್ದು ತೆರೆಮರೆಯಲ್ಲಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ಹೈಕಮಾಂಡ್ ಹಂತದಲ್ಲಿ ಲಾಭಿ ನಡೆಸಿದ್ದಾರೆ. ಇದರ ಪರಿಣಾಮ ಶಶಿಧರ್ ರಾಜೀನಾಮೆ ಕೊಟ್ಟು, ತಮ್ಮ ಅಸಮಾಧಾನ ಹೊರ ಹಾಕದ ಪರಿಸ್ಥಿತಿ‌ಯಲ್ಲಿದ್ದಾರೆ. ಹೀಗಾಗಿ ಹೈಕಮಾಂಡ್ ಆದೇಶಕ್ಕೆ ತಲೆಬಾಗಿ ಅಧಿಕಾರ ಬಿಟ್ಟುಕೊಟ್ಟಿದ್ದಾಗಿ ಅವರು ಹೇಳಿದ್ದಾರೆ.

ಪದಗ್ರಹಣ ಮಾಡಿ ಮಾತನಾಡಿದ ಪ್ರಭಾರ ಅಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ ಕಾಂಗ್ರೆಸ್ ನಾಯಕರ ಬೆಂಬಲ, ಸಹಕಾರದಿಂದ ಅಧ್ಯಕ್ಷೆ ಸ್ಥಾನ ಸಿಕ್ಕಿದೆ. ತಾಲೂಕಿನ ಹಿರಿಯರು ಹಾಗೂ ಪಂಚಾಯಿತಿ ಸದಸ್ಯರು, ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.