ETV Bharat / state

ಚಳಿಗಾಲದಲ್ಲಿ ಕೊರೊನಾ ಬಗ್ಗೆ ಜಾಗೃತರಾಗಿರಿ: ನಿರ್ಮಲಾನಂದನಾಥ ಸ್ವಾಮೀಜಿ

author img

By

Published : Nov 19, 2020, 7:48 PM IST

ಶಾಲೆ ಪ್ರಾರಂಭ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಆದಿಚುಂಚನಗಿರಿ ಮಠದ ಹಿರಿಯ ಶ್ರೀಗಳಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.

Dr. Sri Nirmalanandanatha Swamiji
ಕೆರೆಕತ್ತಿಗನೂರು ಗ್ರಾಮ ದೇವತೆ ಅಮ್ಮನವರ ಧಾರ್ಮಿಕ ಕಾರ್ಯಕ್ರಮ

ನೆಲಮಂಗಲ: ಚಳಿಗಾಲದಲ್ಲಿ ವೈರಾಣುಗಳು ಸಕ್ರಿಯವಾಗುತ್ತವೆ. ಈ ಅವಧಿಯಲ್ಲಿ ಮಾರಣಾಂತಿಕ ಕೊರೊನಾ ವೈರಾಣು ಸಹ ಮಾನವನಿಗೆ ಹೆಚ್ಚು ತೊಂದರೆ ನೀಡುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಿ ಎಂದು ನಾಡಿನ ಜನತೆಗೆ ಆದಿಚುಂಚನಗಿರಿ ಮಠದ ಹಿರಿಯ ಶ್ರೀಗಳಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದ್ದಾರೆ.

ಕೆರೆಕತ್ತಿಗನೂರು ಗ್ರಾಮ ದೇವತೆ ಅಮ್ಮನವರ ಧಾರ್ಮಿಕ ಕಾರ್ಯಕ್ರಮ

ತಾಲೂಕಿನ ಕೆರೆಕತ್ತಿಗನೂರು ಗ್ರಾಮ ದೇವತೆ ಅಮ್ಮನವರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಕೋವಿಡ್-19 ಸಂದರ್ಭದಲ್ಲಿ ಆಫ್ ಲೈನ್ ತರಗತಿ ಸ್ಥಗಿತವಾಗಿತ್ತು. ಕೆಲವೊಂದು ಉನ್ನತ ತರಗತಿಗಳು ನಿನ್ನೆಯಿಂದ ಪ್ರಾರಂಭವಾಗಿವೆ. ಶಾಲೆ ಪ್ರಾರಂಭ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಕ್ಷಿಣ ಕಾಶಿ ಶಿವಗಂಗೆ ಹೊಯ್ಸಳರ ಕಾಲದ ರಾಜಧಾನಿಯಾಗಿತ್ತು. ಶಿವಗಂಗೆಯೂ ಧಾರ್ಮಿಕ ಸ್ಥಳ. ರಾಜ ವಿಷ್ಣುವರ್ಧನನ ಕಾಲದಲ್ಲೂ ಇತಿಹಾಸವಾದದ್ದು, ನಾಟ್ಯರಾಣಿ ಶಾಂತಲೆ ಪಟ್ಟದ ರಾಣಿಯಾಗಿದ್ದು, ಮಾಗಡಿ ಕೆಂಪೇಗೌಡರು ವಿದ್ಯಾಭ್ಯಾಸ ಮಾಡಿದ್ದು ಕೂಡ ಶಿವಗಂಗೆ ಕ್ಷೇತ್ರದಲ್ಲಿ. ಹೀಗಾಗಿ ಇಲ್ಲಿ ಶಾಖಾ ಮಠ ಮತ್ತು ಶಿಕ್ಷಣ ಸಂಸ್ಥೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.