ETV Bharat / state

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ..

author img

By

Published : Sep 20, 2019, 7:57 AM IST

ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯ್ತು.

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ

ನೆಲಮಂಗಲ:ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 2 ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕವನ್ನು ನೆಲಮಂಗಲ ತಾಲೂಕು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್ ಉದ್ಘಾಟಿಸಿದರು.

2018-19 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನಿರ್ದೇಶಕ ಭಾಸ್ಕರ್, ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್ (ಬೆಂಗಳೂರು ಹಾಲು ಉತ್ಪಾದಕರ ಸಂಘ ಒಕ್ಕೂಟ)ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.

ಬಮೂಲ್​ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ..

ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ದತೆಯಲ್ಲಿ ಬಮೂಲ್ ಉತ್ತಮ ಸಾಧನೆ ಮಾಡಿದೆ ಎಂದ್ರು. ಕೇಂದ್ರ ಸರ್ಕಾರ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಚಿಂತನೆ ನಡೆಸಿದೆ.ರೈತರು ಒಂದಾಗಿ ಕೇಂದ್ರ ಸರ್ಕಾರದ ಆಮದು ನೀತಿ ಖಂಡಿಸಬೇಕಿದೆ. ಇಲ್ಲವಾದರೆ ಇಲ್ಲನ ಹೈನುಗಾರಿಕೆ ಉದ್ಯಮ ನಷ್ಟಕ್ಕೆ ಈಡಾಗಲಿದೆ ಎಂದರು.

Intro:ಬಮೂಲ್ ನಿಂದ ಜನರಿಗೆ ಶುದ್ಧ ನೀರಿನ ಘಟಕದ ಕೊಡುಗೆ.
Body:ನೆಲಮಂಗಲ : ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘ ದಲ್ಲಿ ಸುಮಾರು ೨ ಲಕ್ಷ ವೆಚ್ಚದಲ್ಲಿ ನೂತನ ಶುದ್ಧ ಕುಡಿಯುವ ನೀರಿನ ಘಟಕ ವನ್ನು ನೆಲಮಂಗಲ ತಾಲೂಕು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಭಾಸ್ಕರ್ ಉದ್ಘಾಟಿಸಿದರು

2018-19 ನೇ ಸಾಲಿನ ವಾರ್ಷಿಕ ಸಮಾನ್ಯ ಸಭೆಯಲ್ಲಿ ಮಾತನಾಡಿದ ನಿರ್ದೇಶಕ ಭಾಸ್ಕರ್ ರೈತರು ಪರಿಶುದ್ಧ ಮತ್ತು ಗುಣಮಟ್ಟದ ಹಾಲನ್ನು ಬಮೂಲ್ ಗೆ ನೀಡಿದಾಗ ಮಾತ್ರ ಸಹಕಾರ ಸಂಘಗಳು ಹಾಗೂ ಬಮೂಲ್ ಎರಡು ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಲು ಅನುಕೂಲವಾಗುತ್ತದೆ ಎಂದರು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಶುದ್ದತೆಯಲ್ಲಿ ಬಮೂಲ್ ಉತ್ತಮ ಸಾಧನೆ ಮಾಡಿದೆ, ನೆಲಮಂಗಲ ತಾಲೂಕಿನ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದ ನಾಲ್ಕೇ ತಿಂಗಳಿನಲ್ಲಿ ತಾಲೂಕಿನಾದ್ಯಂತ ೧೫ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದ್ದೇವೆ.
ಇವತ್ತು ಶುದ್ದವಾದ ನೀರು ಸಿಗೊದು ಕಷ್ಟವಾಗಿದೆ. ಅಶುದ್ಧ ನೀರಿನ ಬಳಕೆಯಿಂದ ಜನರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ, ಇದರಿಂದ ಬಮೂಲ್ ವತಿಯಿಂದ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ ಎಂದರು.

ಕೇಂದ್ರ ಸರ್ಕಾರ ನ್ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಚಿಂತನೆ ನಡೆಸಿದೆ . ರೈತರು ಒಂದಾಗಿ ಕೇಂದ್ರ ಸರ್ಕಾರದ ಆಮದು ನೀತಿ ಖಂಡಿಸಬೇಕಿದೆ. ಇಲ್ಲವಾದರೆ ಇಲ್ಲನ ಹೈನುಗಾರಿಕೆ ಉದ್ಯಮ ನಷ್ಟಕ್ಕೆ ಈಡಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಮೂಲ್ ವಿಸ್ತರಣಾಧಿಕಾರಿ ಮರೀಗೌಡ, ಹನುಮಂತಪುರ ಸಂಘದ ಅಧ್ಯಕ್ಷ ಮಂಜಣ್ಣ, ಉಪಾಧ್ಯಕ್ಷೆ ರುದ್ರಾಣಮ್ಮ, ಮುಖ್ಯ ಕಾರ್ಯನಿರ್ವಾಹಕ ಉಮಾಶಂಕರ್, ಬಮೂಲ್ ಕಲ್ಯಾಣ ಟ್ರಸ್ಟ್ ನ ರಮೇಶ್, ಸಿಬ್ಬಂದಿಗಳಾದ ಪಂಚಾಕ್ಷರಿ, ರಂಗನಾಥ್, ಸಂಘದ ನಿರ್ದೇಶಕರಾದ ಮಹಾಲಿಂಗಪ್ಪ, ಮಂಜುನಾಥ್, ಮುನಿರಾಜು, ಬಸವರಾಜು, ರಂಗಸ್ವಾಮಿ, ಚಂದ್ರಶೇಖರ್, ಶ್ರೀನಿವಾಸ್, ಗೌರಮ್ಮ, ಊರಿನ ಗ್ರಾಮಸ್ಥರು ಹಾಜರಿದ್ದರು.

ಬೈಟ್ - ಭಾಸ್ಕರ್ : ನಿರ್ದೇಶಕ, ಬೆಂಗಳೂರು ಹಾಲು ಒಕ್ಕೂಟ
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.