ETV Bharat / state

ಸೇನಾಧಿಕಾರಿಗಳಿಂದ ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಹಲ್ಲೆ ಆರೋಪ: ಪ್ರಕರಣ ದಾಖಲು

author img

By

Published : Sep 20, 2022, 5:23 PM IST

ಸೇನಾ ಅಧಿಕಾರಿಗಳು KIALನ ವಿಐಪಿ ಪಾರ್ಕಿಂಗ್ ಏರಿಯಾದಲ್ಲಿ ಕಾರು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಬಂದ ಸೆಕ್ಯೂರಿಟಿ ಗಾರ್ಡ್​ಗಳು ಪಾರ್ಕಿಂಗ್​ಗೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಅವರು, ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Kempegowda International Airport
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಪಾರ್ಕಿಂಗ್ ಏರಿಯಾದಲ್ಲಿ ಸೇನಾಧಿಕಾರಿಗಳು ತಮ್ಮ ಕಾರನ್ನು ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಸೆಕ್ಯೂರಿಟಿ ಗಾರ್ಡ್​ಗಳು ಪಾರ್ಕಿಂಗ್ ಮಾಡಲು ನಿರಾಕರಿಸಿದ್ದಕ್ಕೆ, ಸೇನಾಧಿಕಾರಿಗಳು ಅವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 16 ರ ಬೆಳಗಿನ ಜಾವ 01:19 ರ ಸಮಯದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಡಿಪಾರ್ಚರ್ ಬಳಿ ಈ ಘಟನೆ ನಡೆದಿದೆ.

ಅಂದು ಸೇನಾಧಿಕಾರಿಗಳಾದ ಕ್ಯಾಪ್ಟನ್ ಠಾಕೂರ್ ಬರುವಾಲ್ ಮತ್ತು ಮೇಜರ್ ಪುಶೀಬ್ ರಜಪೂತ್ ಜಮ್ಮು ಮತ್ತು ಕಾಶ್ಮೀರ ನೋಂದಣಿ ಕಾರಿನಲ್ಲಿ ಬಂದಿದ್ದರು. ವಿಐಪಿ ಮತ್ತು ಸಿಐಎಸ್​ಎಫ್ ಅಧಿಕಾರಿಗಳಿಗೆ ಮೀಸಲಾದ ಪಾರ್ಕಿಂಗ್ ಸ್ಥಳವಾದ ಲೇನ್ 1 ರಲ್ಲಿ ಪಾರ್ಕಿಂಗ್ ಮಾಡಲು ಮುಂದಾಗಿದ್ದಾರೆ. ಆದರೆ, ಸೆಕ್ಯೂರಿಟಿ ಗಾರ್ಡ್​​​ ಗಳು ಕಾರು ಪಾರ್ಕಿಂಗ್​ಗೆ ನಿರಾಕರಿಸಿದ್ದು, ಲೇನ್ 2 ರಲ್ಲಿ ಪಾರ್ಕಿಂಗ್ ಮಾಡಲು ಹೇಳಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್​ ಬಂಕ್​ನಲ್ಲಿ ದರೋಡೆ; ಸೆಕ್ಯೂರಿಟಿ ಗಾರ್ಡ್ ಕೈ ಕಟ್ಟಿಹಾಕಿ ಹಲ್ಲೆ!

ಸೆಕ್ಯೂರಿಟಿ ಗಾರ್ಡ್​ಗಳ ಮಾತಿನಿಂದ ಕೋಪಗೊಂಡ ಸೇನಾಧಿಕಾರಿಗಳು ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ನೆಲಕ್ಕೆ ತಳ್ಳಿ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ. ನಾಲ್ವರು ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.