ETV Bharat / state

ಬೆಳಕಿಗಾಗಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ: ವೃದ್ಧ ಸಜೀವ ದಹನ

author img

By

Published : May 18, 2023, 11:21 AM IST

ಬೆಂಕಿ ತಗುಲಿ ವೃದ್ಧರೋರ್ವರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

70-years-old-died-in-fire-accident-at-doddaballapur
ಬೆಳಕಿಗಾಗಿ ಹಚ್ಚಿದ ದೀಪದಿಂದ ಮನೆಗೆ ಬೆಂಕಿ : ವೃದ್ಧ ಸಜೀವ ದಹನ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಬೆಳಕಿಗಾಗಿ ಹಚ್ಚಿಟ್ಟಿದ್ದ ದೀಪದಿಂದ ಮನೆಗೆ ಬೆಂಕಿ ತಗುಲಿ ವೃದ್ಧರೋರ್ವರು ಮೃತಪಟ್ಟಿರುವ ಘಟನೆ ನಗರದ ಕಛೇರಿಪಾಳ್ಯದಲ್ಲಿ ನಡೆದಿದೆ. ಮೃತ ವೃದ್ಧರನ್ನು ರಾಮಾಂಜಿನಪ್ಪ(70) ಎಂದು ಗುರುತಿಸಲಾಗಿದೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿಜೆ. ಮನೆಯಲ್ಲಿ ವಿದ್ಯುತ್​ ವ್ಯವಸ್ಥೆ ಇಲ್ಲದ ಕಾರಣ ಬೆಳಕಿಗಾಗಿ ದೀಪವನ್ನು ಹಚ್ಚಿಡಲಾಗಿತ್ತು. ದೀಪದ ಜ್ವಾಲೆಯು ಬಟ್ಟೆಗೆ ತಗುಲಿದ್ದು, ಬೆಂಕಿಯ ಕೆನ್ನಾಲಿಗೆ ಮನೆಯೆಲ್ಲ ಆವರಿಸಿದೆ. ಮಲಗಿದ್ದ ರಾಮಾಂಜಿನಪ್ಪ ಅವರಿಗೆ ಎದ್ದೇಳಲು ಸಾಧ್ಯವಾಗದೇ ಬೆಂಕಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಬಗ್ಗೆ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರಗೆ ತೆಗೆದು ಬೆಂಕಿ ನಂದಿಸಿದ್ದಾರೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಪೆಟ್ರೋಲ್​ ಬಂಕ್​ ಮಾಲೀಕನಿಗೆ 15 ಬಾರಿ ಇರಿದು ಕೊಂದು, ಹಣ ದರೋಡೆ; ಅರ್ಧಗಂಟೆಯಲ್ಲಿ ಆರೋಪಿಗಳು ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.