ETV Bharat / state

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 29 ಮಂದಿಗೆ ಕೊರೊನಾ ಸೋಂಕು ದೃಢ

author img

By

Published : Jul 2, 2020, 12:00 AM IST

ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಇಂದೂ ಸಹ 29 ಪ್ರಕರಣಗಳು ದಾಖಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳಲ್ಲಿ ಸೋಂಕು ಪತ್ತೆಯಾಗಿದೆ.

29 people infected corona in Bangalore rural district Today
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 29 ಮಂದಿಗೆ ಕೊರೊನಾ ಸೋಂಕು ದೃಢ

ದೇವನಹಳ್ಳಿ (ಬೆಂ.ಗ್ರಾ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ 13, ಹೊಸಕೋಟೆ ತಾಲೂಕಿನ 09, ಹಾಗೂ ದೇವನಹಳ್ಳಿ ತಾಲೂಕಿನ 07 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು. ಜಿಲ್ಲೆಯಲ್ಲಿ ಒಟ್ಟು 29 ಜನರಲ್ಲಿ ಇಂದು ಕೊರೊನಾ ದೃಢವಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಪಿ-15433, ಪಿ-15434, ಪಿ-15435, ಪಿ-15437, ಪಿ-15438, ಪಿ-15439, ಪಿ-15440,7 ವ್ಯಕ್ತಿಗಳು ಇನ್‌ಫ್ಲೂಯೆನ್ಜಾ ಲೈಕ್‌ ಇಲ್ನೆಸ್‌(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದರು.

ಪಿ-15436 ಓರ್ವ ವ್ಯಕ್ತಿಯು ತೀವ್ರ ಉಸಿರಾಟದ ತೊಂದರೆಯಿಂದ ‌ಬಳಲುತ್ತಿದ್ದರು, ಪಿ-15442, ಪಿ-15443, ಪಿ-15444, ಮೂರು ವ್ಯಕ್ತಿಗಳು ಕೊರೊನಾ ಸೋಂಕಿತ ವ್ಯಕ್ತಿಯ(ಪಿ-11165) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದರು ಹಾಗೂ ಪಿ-15452 ಓರ್ವ ವ್ಯಕ್ತಿಯು ಕೊರೊನಾ ಸೋಂಕಿತ ವ್ಯಕ್ತಿಯ(ಪಿ-11992) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದರು ಇವರನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ದೊಡ್ಡಬಳ್ಳಾಪುರ ತಾಲೂಕಿನ ಪಿ-15441 ಓರ್ವ ವ್ಯಕ್ತಿಯ ಕೊರೊನಾ ಸೋಂಕಿನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಹೊಸಕೋಟೆ ತಾಲೂಕಿನ ಪಿ-15424, ಪಿ-15425, ಇಬ್ಬರು ವ್ಯಕ್ತಿಗಳು ಕೊರೊನಾ ಸೋಂಕಿತ ವ್ಯಕ್ತಿಯ (ಪಿ-11973) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದರು, ಪಿ-15426, ಪಿ-15427, ಪಿ-15428, ಮೂವರು ಇನ್‌ಫ್ಲೂಯೆನ್ಜಾ ಲೈಕ್‌ ಇಲ್ನೆಸ್‌(ಐಎಲ್‌ಐ) ತೊಂದರೆಯಿಂದ ಬಳಲುತ್ತಿದ್ದರು ಹಾಗೂ ಪಿ-15429, ಪಿ-15430, ಪಿ-15431, ಪಿ-15432, ನಾಲ್ವರು ಕೊರೊನಾ ಸೋಂಕಿತ ವ್ಯಕ್ತಿಯ (ಪಿ-11167) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದರು.

ದೇವನಹಳ್ಳಿ ತಾಲೂಕಿನ ಪಿ-15445, ಪಿ-15446, ಪಿ-15447, ಪಿ-15448,ನಾಲ್ವರು ಕೊರೊನಾ ಸೋಂಕಿತ ವ್ಯಕ್ತಿಯ (ಪಿ-9907) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ ಹಾಗೂ ವಿಜಯಪುರದ ಪಿ-15449, ಪಿ-15450, ಪಿ-15451, ಮೂವರು ಕೊರೊನಾ ಸೋಂಕಿತ ವ್ಯಕ್ತಿಯ(ಪಿ-10824) ಪ್ರಾಥಮಿಕ‌ ಸಂಪರ್ಕ ಹೊಂದಿದವರಾಗಿದ್ದ ಹಿನ್ನೆಲೆ, ಕೊರೊನಾ ಆರೋಗ್ಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿದೆ.

ಸೋಂಕಿತ ವ್ಯಕ್ತಿಗಳು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.