ಆರ್‌ಎಸ್​ಎಸ್​ ಇಲ್ಲದಿದ್ದರೆ ದೇಶ ಪಾಕಿಸ್ತಾನ ಆಗುತ್ತಿತ್ತು: ಕೆ.ಎಸ್.ಈಶ್ವರಪ್ಪ

author img

By

Published : Oct 8, 2021, 12:57 PM IST

Updated : Oct 9, 2021, 2:23 AM IST

Without an RRS, the country would have been Pakistan - Minister KS Eshwarappa

ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗು ಜೆಡಿಎಸ್‌ ಕಡೆಯಿಂದ ಹೆಚ್‌.ಡಿ.ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದ ಮೇಲೆ ಕಣ್ಣಿಟ್ಟು ಆರ್‌ಆರ್‌ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆರ್‌ಎಸ್​ಎಸ್​ ಸಂಘಟನೆ ಇಲ್ಲದಿದ್ದರೆ ದೇಶ ಪಾಕಿಸ್ತಾನ ಆಗುತ್ತಿತ್ತು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಬಾಗಲಕೋಟೆ: ಆರ್‌ಎಸ್​ಎಸ್​ ಸಂಘಟನೆ ಇಲ್ಲವಾದಲ್ಲಿ ದೇಶ ಪಾಕಿಸ್ತಾನ ಆಗುತ್ತಿತ್ತು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಆರ್‌ಎಸ್​ಎಸ್​ ಇಲ್ಲದಿದ್ದರೆ ದೇಶ ಪಾಕಿಸ್ತಾನ ಆಗುತ್ತಿತ್ತು: ಕೆ.ಎಸ್.ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗು ಜೆಡಿಎಸ್‌ನಿಂದ ಕುಮಾರಸ್ವಾಮಿ ಇಬ್ಬರೂ ಕೂಡ ಮುಸ್ಲಿಂ ಸಮುದಾಯದ ಮೇಲೆ ಕಣ್ಣಿಟ್ಟು ಆರ್‌ಎಸ್​ಎಸ್​ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿಂದೆ ನೆಹರು ಹಾಗೂ ಇಂದಿರಾಗಾಂಧಿ ಅವರ ಕಾಲದಲ್ಲಿ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದಾಗ ಅವರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಇವರು ಯಾರು? ನಮ್ಮ ಲೆಕ್ಕಕ್ಕೆ ಎಂದು ಕಾಂಗ್ರೆಸ್ ಹಾಗೂ ಜನತಾದಳ ನಾಯಕರಿಗೆ ಈಶ್ವರಪ್ಪ ತಿರುಗೇಟು ಕೊಟ್ಟರು.

ಆರ್‌ಎಸ್‌ಎಸ್ ಇಡೀ ದೇಶದಲ್ಲಿ ಇರುವ ಯುವಕರಿಗೆ ರಾಷ್ಟ್ರಭಕ್ತಿ ನಿರ್ಮಿಸುವ ದೊಡ್ಡ ಸಂಸ್ಥೆ ಆಗಿದೆ. ಸಂಘವೇ ಇಲ್ಲವಾದಲ್ಲಿ ಇವತ್ತು ದೇಶ ಪಾಕಿಸ್ತಾನ ಆಗುತ್ತಿತ್ತು. ಐಎಎಸ್, ಐಪಿಎಸ್ ಅಧಿಕಾರಿಗಳ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ಅಧಿಕಾರ ನಡೆಸುತ್ತಿದೆ ಎಂದು ಮೆದುಳು ಮೇಲೆ ಪೂರೆ ಬಂದಿರುವವರು ಇಂತಹ ಹೇಳಿಕೆ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಆರ್‌ಎಸ್‌ಎಸ್ ಸಂಸ್ಥೆಯಿಂದ ಬಂದಿದ್ದು ವಿಶ್ವದ ಗಮನ ಸೆಳೆದಿದ್ದಾರೆ. ರಾಜ್ಯಪಾಲರು ಆರ್‌ಎಸ್‌ಎಸ್‌, ದೇಶದ ಅನೇಕ ಮುಖ್ಯಮಂತ್ರಿಗಳು ಆರ್‌ಎಸ್‌ಎಸ್‌ನಿಂದಲೇ ಬಂದಿದ್ದಾರೆ. ಸಂಘ ಏನೂ ಮಾಡಲ್ಲ. ಆದರೆ ಸಂಘದಿಂದ ತರಬೇತಿ ಪಡೆದು, ಶಿಕ್ಷಣ ಪಡೆದು ಏನು ಬೇಕಾದರೂ ಮಾಡುತ್ತಾರೆ ಎಂದು ಹೇಳಿದರು.

'ಕಾಂಗ್ರೆಸ್‌ ರಾಜ್ಯದ ಜನರ ಕ್ಷಮೆ ಯಾಚಿಸಬೇಕು'

ಐಟಿ ದಾಳಿ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಐಟಿ ದಾಳಿ ಕೇವಲ ಕಾಂಗ್ರೆಸ್‌ನವರ ಮೇಲೆ ಆಗ್ತಿದೆ ಅಂತಿದ್ದವರು ಈಗ್ಯಾಕೆ ಬಾಯಿ ಬಿಡ್ತಿಲ್ಲ. ಅವರು ಹೇಳಬೇಕಲ್ವಾ? ಕಾಂಗ್ರೆಸ್ ಮಾತ್ರ ಅಲ್ಲ, ಐಟಿ ಅವರಿಗೆ ಯಾರ ಮೇಲೆ ಅನುಮಾನ ಇದೆಯೋ ಅವರ ಮೇಲೆಲ್ಲಾ ದಾಳಿ ಮಾಡ್ತಾರೆ. ತಪ್ಪಿತಸ್ಥರಿದ್ದರೆ ಕ್ರಮ ತಗೋತಾರೆ ಇಲ್ಲದಿದ್ದರೆ ಇಲ್ಲ. ಕೇವಲ ಕಾಂಗ್ರೆಸ್‌ನವರನ್ನು ಗುರಿಯಾಗಿಸಿ ಐಟಿ ದಾಳಿ ಎಂದಿದ್ದ ಕಾಂಗ್ರೆಸ್‌ನವರು ಈಗ ರಾಜ್ಯದ ಮುಂದೆ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಯಡಿಯೂರಪ್ಪ ಅವರ ಆಪ್ತನ ಮೇಲೆ ಐಟಿ ದಾಳಿ, ಈ ಮೂಲಕ ಬಿಎಸ್ವೈ ಕಟ್ಟಿ ಹಾಕುವ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಾ, ಈ ಬಗ್ಗೆ ಯಡಿಯೂರಪ್ಪನವರೇ ನನ್ನ ಆಪ್ತ ಹೌದು ಅಂತ ಹೇಳಿದ್ದಾರೆ. ಬೊಮ್ಮಾಯಿ ಸಹ ಮುಂದುವರೆಸಿದ್ರು, ಈಗ ತೆಗೆದು ಹಾಕಿದ್ದಾರೆ. ಇದರಲ್ಲೇನೂ ಪ್ರಶ್ನೆ ಉದ್ಭವವಾಗೋದಿಲ್ಲ. ತಪ್ಪು ಯಾರ ಮಾಡಿದ್ದರೂ ತಪ್ಪು. ತಪ್ಲಿಲ್ಲ ಅಂದ್ರೆ ಹೊರ ಬತ್ರಾರೆ. ಇಲ್ಲವಾದರೆ ಅವರ ಮೇಲೆ ಕ್ರಮ ಆಗುತ್ತೆ ಎಂದರು.

ಇದನ್ನೂ ಓದಿ: 'ಹೆಚ್​ಡಿಕೆ - ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಬಗ್ಗೆ ಟೀಕೆ ಮಾಡಿಲ್ಲ ಎಂದರೆ ತಿಂದಿರುವ ಅನ್ನ ಕರಗುವುದಿಲ್ಲ'

Last Updated :Oct 9, 2021, 2:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.