ETV Bharat / state

ಕೊಳವೆಬಾವಿ ದುರಸ್ತಿ ವೇಳೆ ಕಬ್ಬಿಣದ ಪೈಪ್ ಬಡಿದು ಬಾಲಕ ಸಾವು

author img

By

Published : Feb 28, 2021, 1:52 PM IST

ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಕೊಳವೆ ಬಾವಿ ದುರಸ್ತಿ ವೇಳೆ ಕಬ್ಬಿಣದ ಪೈಪ್ ಬಡಿದು ಬಾಲಕ ಸಾವನ್ನಪ್ಪಿದ್ದಾನೆ.

ಕೊಳವೆ ಬಾವಿ ದುರಸ್ಥಿ ವೇಳೆ ಕಬ್ಬಿಣದ ಪೈಪ್ ಬಡಿದು ಬಾಲಕ ಸಾವು

ಬಾಗಲಕೋಟೆ: ಕೊಳವೆ ಬಾವಿ ದುರಸ್ತಿ ವೇಳೆ ಕಬ್ಬಿಣದ ಪೈಪ್ ಅನ್ನು ಕೊಳವೆ ಬಾವಿಯಿಂದ ಮೇಲಕ್ಕೆತ್ತಿ ಕೆಳಗೆ ಬಿಡುವ ಸಂದರ್ಭ ಬಾಲಕನೋರ್ವನ ಮುಖಕ್ಕೆ ಪೈಪ್​ ಬಡಿದು ಸಾವನ್ನಪ್ಪಿದ್ದಾನೆ.

ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಗಣೇಶ ರವಿ ಜಂಗಳಿ (13) ಮೃತ ಬಾಲಕ. ಚಿಮ್ಮಡ ಗ್ರಾಮದಲ್ಲಿ ಬುಧವಾರ ಸಂಜೆ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗುವ ವೇಳೆ ಘಟನೆ ಜರುಗಿದೆ. ಬಳಗಾರ ಎಂಬುವರ ಜಮೀನಿನ ಬಳಿ ಕೊಳವೆ ಬಾವಿಯ ದುರಸ್ತಿ ವೇಳೆ ಬಾಲಕನ ಮುಖಕ್ಕೆ ಕಬ್ಬಿಣದ ಪೈಪ್​ ಬಡಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಇಂದು ಅಸುನೀಗಿದ್ದಾನೆ.

ಈ ಕುರಿತು ಜಂಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬಿಸನಾಳ ಗ್ರಾಮದ ಹನಮಂತ ಮಹಾದೇವ ರಾಮೋಜಿ, ಬೆಳಗಾವಿ ಜಿಲ್ಲೆಯ ಶಿರಹಟ್ಟಿ ಗ್ರಾಮದ ಮುತ್ತಪ್ಪ ಕಲ್ಲಪ್ಪ ಜಾಡರ್​ ಮತ್ತು ರಾಕೇಶ ಮಹಾದೇವ ಬೋರಗಲ್ಲಿ ಈ ಮೂವರನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.