ETV Bharat / state

ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ನೀರು: ಚಿಕ್ಕಪಡಸಲಗಿ ಬ್ಯಾರೇಜ್​ ಬಳಿ ಭೂಕುಸಿತ

author img

By

Published : Jul 25, 2021, 6:22 PM IST

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 3.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ಪಡಸಲಗಿ ಬ್ಯಾರೇಜ್ ಬಳಿ ನಿರ್ಮಾಣ ಮಾಡಿರುವ ಶ್ರಮ ಬಿಂದು ಸಾಗರ ಬಳಿ ಭೂಕುಸಿತ ಉಂಟಾಗುತ್ತಿದೆ.

Landslide near Barrage
ಚಿಕ್ಕಪಡಸಲಗಿ ಬ್ಯಾರೇಜ್​ ಬಳಿ ಭೂ ಕುಸಿತ

ಬಾಗಲಕೋಟೆ: ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಬ್ಯಾರೇಜ್​ ಬಳಿ ಭೂ ಕುಸಿತ ಉಂಟಾಗುತ್ತಿದೆ.

ಚಿಕ್ಕಪಡಸಲಗಿ ಬ್ಯಾರೇಜ್​ ಬಳಿ ಭೂ ಕುಸಿತ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 3.50 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕ ಪಡಸಲಗಿ ಬ್ಯಾರೇಜ್ ಬಳಿ ನಿರ್ಮಾಣ ಮಾಡಿರುವ ಶ್ರಮ ಬಿಂದು ಸಾಗರ ಬಳಿ ಭೂ ಕುಸಿತ ಉಂಟಾಗುತ್ತಿದೆ. ಸ್ಥಳಕ್ಕೆ ಶಾಸಕ ಆನಂದ ನ್ಯಾಮಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈತರು ನಿರ್ಮಾಣ ಮಾಡಿದ್ದ ಬ್ಯಾರೇಜ್ ಶ್ರಮ ಬಿಂದು ಸಾಗರ ಸಂಪೂರ್ಣ ಮುಳುಗಡೆಯಾಗಿ ವಿಜಯಪುರ- ಜಮಖಂಡಿ ಮಾರ್ಗದ ಪ್ರಮುಖ ರಸ್ತೆಯ ಸೇತುವೆ ಕೆಳಗಡೆ ನೀರು ಹರಿದು ಹೋಗುತ್ತಿದೆ. ಶ್ರಮ ಬಿಂದು ಸಾಗರಕ್ಕೆ ಸಂಬಂಧಪಟ್ಟಂತೆ ಅಳವಡಿಸಿರುವ ವಿದ್ಯುತ್ ಪಂಪ ಸೆಟ್​ಗಳ ಕಾರ್ಯ ನಿರ್ವಹಣೆ ಮಾಡುವ ಕೊಠಡಿ ಹತ್ತಿರ ಮಣ್ಣು ಕುಸಿದು ನೀರು ಪಾಲಾಗುತ್ತಿದೆ. ಇದನ್ನು ತಡೆಯಲು ಶಾಸಕರ ನೇತೃತ್ವದಲ್ಲಿ ಕಾರ್ಯಚರಣೆ ನಡೆಯುತ್ತಿದೆ.

ಶಾಸಕ ಆನಂದ ನ್ಯಾಮಗೌಡ ಪ್ರತಿಕ್ರಿಯೆ ನೀಡಿದ್ದು, ಕೊಯ್ನಾ ಜಲಾಶಯದಿಂದ ಹಿಪ್ಪರಗಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಚಿಕ್ಕಪಡಲಗಿ ಸೇತುವೆ ಬಳಿ ಮಣ್ಣು ಕುಸಿಯುತ್ತಿದೆ. ಮುಂದೆ ಯಾವುದೇ ಅಪಾಯ ಆಗಬಾರದೆಂಬ ದೃಷ್ಟಿಯಿಂದ ಕಲ್ಲು, ಮಲ್ಲು ಹಾಕುವ ಕೆಲಸ ಮಾಡಲಾಗಿದೆ. ನದಿ ತೀರದ ಗ್ರಾಮಗಳ ಪ್ರವಾಹ ಭೀತಿ ಉಂಟಾಗಿದ್ದು,ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಗ್ರಾಮಗಳು ಸಂಪೂರ್ಣ ಜಲಾವೃತ:

ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದಾಗಿ‌ ಹಿಡಕಲ್ ಜಲಾಶಯ ಮೂಲಕ ನೀರು ಬಿಡಲಾಗುತ್ತಿರುವ ಪರಿಣಾಮ ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರಿಂದ ಮುಧೋಳ ತಾಲೂಕಿನ ಮಳಲಿ,ಮಿರ್ಜಿ ಹಾಗೂ ರಬಕವಿ ಬನ್ನಹಟ್ಟಿ ತಾಲೂಕಿನ ಢವಳೇಶ್ವರ ಗ್ರಾಮಗಳು ಸಂಪೂರ್ಣ ಜಲಾವೃತವಾಗಿವೆ.

ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ನೀರು ಬಿಟ್ಟ ಪರಿಣಾಮ ಗ್ರಾಮಗಳಲ್ಲಿದ್ದ ರಸ್ತೆಗಳು ನದಿಗಳಾಗಿ ಪರಿವರ್ತನೆ ಆಗಿದ್ದು, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇನ್ನು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಾಲೂಕು ಆಡಳಿತ ಮುಂದಾಗಿದೆ. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಗ್ರಾ.ಪಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಜನರನ್ನು ಸಾಗಿಸುತ್ತಿದ್ದಾರೆ.

ಇದನ್ನೂ ಓದಿ: ಭೂಕುಸಿತದ ಭಯಾನಕ ವಿಡಿಯೋ: ಪರ್ವತದಿಂದ ಉರುಳಿದ ಬಂಡೆಗಳಿಗೆ 9 ಪ್ರವಾಸಿಗರು ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.