ಬಾಗಲಕೋಟೆ: ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

author img

By

Published : Oct 3, 2022, 9:25 PM IST

Updated : Oct 3, 2022, 11:09 PM IST

protest-by-farmers-against-land-acquisition-in-bagalkote

ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಅಭಿವೃದ್ಧಿಗಾಗಿ ರೈತರ ಜಮೀನು ವಶ ಪಡಿಸಿಕೊಳ್ಳುವುದನ್ನು ವಿರೋಧಿಸಿ ಬಾದಾಮಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಾಗಲಕೋಟೆ : ವಿಮಾನ ನಿಲ್ದಾಣ ಹಾಗೂ ಕೈಗಾರಿಕಾ ಅಭಿವೃದ್ಧಿಗಾಗಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬಾದಾಮಿ ಪಟ್ಟಣದಲ್ಲಿ ರೈತರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ಹಲಕುರ್ಕಿ ಗ್ರಾಮದ ವ್ಯಾಪ್ತಿಯ 1,800 ಎಕರೆ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಒತ್ತಾಯಿಸಿ ಕಳೆದ 13 ದಿನಗಳಿಂದ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.

ಭೂಸ್ವಾಧೀನ‌ ಪ್ರಕ್ರಿಯೆ ಕೈ ಬಿಡುವಂತೆ ಆಗ್ರಹಿಸಿ ಹಲಕುರ್ಕಿ ಗ್ರಾಮದಿಂದ ಬಾದಾಮಿವರೆಗೆ ರೈತರು ಪಾದಯಾತ್ರೆ ಮಾಡಿದರು. ಪಾದಯಾತ್ರೆಯಲ್ಲಿ ನೇಗಿಲು ಹೊತ್ತು ಹಾಗೂ ಎತ್ತಿನ ಬಂಡಿಯ ಮೂಲಕ ಮೆರವಣಿಗೆ ನಡೆಸಿ ಸರ್ಕಾರದ ಕ್ರಮ ಖಂಡಿಸಿದರು. ಮೆರವಣಿಗೆಯಲ್ಲಿ ನೂರಾರು ಮಹಿಳೆಯರೂ ಸಹ ಭಾಗಿಯಗಿ ಸರ್ಕಾರದ ಹಾಗೂ ಸಚಿವ ನಿರಾಣಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ತಹಶಿಲ್ದಾರ್​ ಕಚೇರಿಗೆ ತೆರಳಿ ಭೂಸ್ವಾಧೀನ ಆದೇಶ ಹಿಂಪಡೆಯ ಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಭೂಸ್ವಾಧೀನ ವಿರೋಧಿಸಿ ರೈತರ ಬೃಹತ್ ಪ್ರತಿಭಟನೆ

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹನಮಂತ ಮಾವಿನಮರದ, ಆಪ್ ಪಕ್ಷದ ಮುಖಂಡರು ಹಾಗೂ ರೈತರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳು ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಆದೇಶ ಹಿಂಪಡೆಯದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟದ ಮಾಡುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದರು.

ಇದನ್ನೂ ಓದಿ : ಶಿವಮೊಗ್ಗ: ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ.. ಕೊಲೆ ಶಂಕೆ

Last Updated :Oct 3, 2022, 11:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.