ETV Bharat / state

ಅಹಮದಾಬಾದ್​ನಲ್ಲಿ ರಾಷ್ಟ್ರೀಯ ಯುವ ವಿಜ್ಞಾನ ಸಮಾವೇಶ: ಡಾ.ಶಿವಪ್ರಕಾಶ ರತ್ನಮ್

author img

By ETV Bharat Karnataka Team

Published : Aug 25, 2023, 10:38 PM IST

ಅಹಮದಾಬಾದ್​ನಲ್ಲಿ ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿಯಿಂದ ರಾಷ್ಟ್ರೀಯ ಯುವ ವಿಜ್ಞಾನ ಸಮಾವೇಶ ನಡೆಸಲಾಗುತ್ತಿದೆ.

ಇಂಡಿಯನ್ ಫಾರ್ಮಾಕಾಲಜಿಕಲ್ ಸೋಸೈಟಿ ಅಧ್ಯಕ್ಷ ಡಾ. ಶಿವಪ್ರಕಾಶ ರತ್ನಮ್
ಡಾ. ಶಿವಪ್ರಕಾಶ ರತ್ನಮ್

ಬಾಗಲಕೋಟೆ : ಔಷಧ ಶಾಸ್ತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು ಅಹಮದಾಬಾದ್‌ನಲ್ಲಿ ರಾಷ್ಟ್ರೀಯ ಯುವ ವಿಜ್ಞಾನ ಸಮಾವೇಶ ನಡೆಸಲಾಗುವುದು ಎಂದು ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿ ಅಧ್ಯಕ್ಷ ಡಾ. ಶಿವಪ್ರಕಾಶ ರತ್ನಮ್ ಹೇಳಿದರು.

ಪ್ರತಿಷ್ಠಿತ ಬಿವಿವಿ ಸಂಘದ ಹಾನಗಲ್ ಶ್ರೀ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ, ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಾಕಾಲಜಿಕಲ್ ಸೊಸೈಟಿ, ಇವರ ಸಹಯೋಗದೊಂದಿಗೆ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಶತಾಬ್ದಿ ಭವನದಲ್ಲಿ ನಡೆದ 3 ದಿನಗಳ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರಿನಲ್ಲಿ ನಡೆದ ಸಮ್ಮೇಳನಕ್ಕಿಂತ ಬಾಗಲಕೋಟೆಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧಕರು ಭಾಗವಹಿಸಿದ್ದು, ಸಮ್ಮೇಳನದ ಯಶಸ್ವಿಗೆ ಸಾಕ್ಷಿ. ಔಷಧ ಶಾಸ್ತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಆದ್ಯತೆ ಇದ್ದು, ಫಾರ್ಮಾಕಾಲಜಿ ವಿಷಯದಲ್ಲಿ ಸಂಶೋಧನೆಗೆ ನಮ್ಮ ಸಂಸ್ಥೆಯು ಹೆಚ್ಚು ಆದ್ಯತೆ ನೀಡುವುದರ ಜೊತೆಗೆ ಸಂಶೋಧಕರಿಗೆ ಅಗತ್ಯ ಹಣಕಾಸಿನ ನೆರವು ನೀಡುತ್ತೇವೆ. ಔಷಧಶಾಸ್ತ್ರ ತಜ್ಞರು ಹೆಚ್ಚೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಬಾರಿ ಅಹಮದಾಬಾದ್‌ನಲ್ಲಿ ನಮ್ಮ ಫಾರ್ಮಾಜಿಕಾಲಜಿ ಸೊಸೈಟಿಯಿಂದ ರಾಷ್ಟೀಯ ಯುವ ವಿಜ್ಞಾನ ಸಮ್ಮೇಳನ ಆಯೋಜಿಸಲಾಗುವುದು. ಅದರಿಂದ ನಮ್ಮ ಯುವ ವಿಜ್ಞಾನಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ದೇಶದಲ್ಲಿ ವ್ಯಾಪಾರಸ್ಥರು, ಉದ್ಯಮಿಗಳು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಉದಾರಣೆಗೆ ಬಿವಿವಿ ಸಂಘದ ಉತ್ತಮ ಗುಣಮಟ್ಟದ ಶಿಕ್ಷಣದ ದಾಸೋಹದ ಜೊತಗೆ ತಾನೂ ಅಭಿವೃದ್ಧಿಯಾಗುತ್ತ ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವುದು ಹೆಮ್ಮಯ ವಿಷಯ ಎಂದು ಶಿವಪ್ರಕಾಶ ರತ್ನಮ್ ನುಡಿದರು.

ಬಳಿಕ ಮುಖ್ಯ ಅತಿಥಿಗಳಾಗಿ ಸ್ಮರಣಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಭೂಪಾಲ ಮತ್ತು ಜಮ್ಮುವಿನ ಎಐಐಎಂಎಸ್‌ನ ಅಧ್ಯಕ್ಷ ಡಾ.ವೈ.ಕೆ ಗುಪ್ತಾ, ಪುಸ್ತಕದ ಜೊತೆಗೆ ಸಾಮಾಜಿಕ ವ್ಯವಸ್ಥೆಯಿಂದ ಕಲಿಯುವುದು ನಿಜವಾದ ಶಿಕ್ಷಣ. ನಮ್ಮ ಭಾರತದ ಮಹಾವಿದ್ಯಾಲಯಗಳಲ್ಲಿ ಕಲಿಕಾ ಪದ್ಧತಿಗಳು ಬದಲಾಗಬೇಕಿದೆ. ಪುಸ್ತಕ, ಪ್ರಾಯೋಗಿಕವಾಗಿ ಜೀವನದ ಸಮಾಜದ ಮೂಲಕ ಪಾಠವನ್ನು ಕಲಿಯುವ ಶೈಕ್ಷಣಿಕ ಪದ್ಧತಿ ಬೇಕಾಗಿದೆ.

ಕೃಷ್ಣಾನದಿ ತೀರದ ಬಾಗಲಕೋಟೆ ಮುಳುಗಡೆ ಪ್ರದೇಶವಾದರೂ ಉತ್ತಮ ವಾತಾವರಣ ಹೊಂದಿದ ನಗರವಾಗಿದೆ. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ತನ್ನ ಶೈಕ್ಷಣಿಗೆ ಅಭಿವೃದ್ಧಿಯೊಂದಿಗೆ ಬಾಗಲಕೋಟೆ ನಗರ ಗ್ರಾಮೀಣ ಅಭಿವೃದಿಯಾಗಿರುವುದಕ್ಕೆ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು.

ಡಾ.ವೀರಣ್ಣ ಸಿ.ಚರಂತಿಮಠ ಹೇಳಿಕೆ: ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಸಿ. ಚರಂತಿಮಠ ನಮ್ಮ ಫಾರ್ಮಕಾಲಜಿ ಕಾಲೇಜು ಔಷಧಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ವೇದಿಕೆಯಾಗುತ್ತಿರುವುದು ಹೆಮ್ಮೆಯ ವಿಷಯ. ಸಮ್ಮೇಳನದ ಫಲಿತಾಂಶ ಫಲಶ್ರುತಿಯಾಗಲಿ. ಸಮ್ಮೇಳನದಲ್ಲಿ ಚರ್ಚೆ ಮತ್ತು ಸಂವಾದಗಳು ನಡೆದು ಆರೋಗ್ಯಕರ ಸಮಾಜದ ಸ್ಥಾಪನೆಗೆ ನೆರವಾಗಲಿ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ದೇಶ ವಿದೇಶಗಳಿಂದ ಸುಮಾರು 1500 ಸಂಶೋಧಕರು, ಅಧ್ಯಾಪಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಮಾರು 26 ವೈಜ್ಞಾನಿಕ ಗೋಷ್ಠಿಗಳು ಜರುಗಿದವು ಹಾಗೂ ಇತರೆ ಸುಮಾರು 500 ಸಂಶೋಧನಾ ಲೇಖನಗಳ ಮಂಡನೆ, ಚರ್ಚೆ, ಸಂವಾದ, ವಿಚಾರಗೋಷ್ಠಿಗಳ ಮೂಲಕ ಹೊಸ ವಿಚಾರಗಳು ಅನಾವರಣಗೊಂಡವು.

ಇದನ್ನೂ ಓದಿ : 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಚಿಂತನೆ: ಸಚಿವ ಚಲುವರಾಯಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.