ETV Bharat / state

ಶಾಸಕ ದೊಡ್ಡನಗೌಡ ಪಾಟೀಲ ಭಾಷಣ ಮಾಡುವಾಗ ಕಲ್ಲೆಸೆದ ಕಿಡಿಗೇಡಿಗಳು

author img

By

Published : Aug 17, 2022, 2:23 PM IST

ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಶಾಸಕ ದೊಡ್ಡನಗೌಡ ಪಾಟೀಲ ಅವರ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

miscreants-threw-stones-at-mla-doddana-gowda-patil
ಶಾಸಕ ದೊಡ್ಡನಗೌಡ ಪಾಟೀಲ ವೇದಿಕೆಯ ಭಾಷಣ ಮಾಡುವಾಗ ಕಲ್ಲೆಸೆದ ಕಿಡಿಗೇಡಿಗಳು

ಬಾಗಲಕೋಟೆ : ಹುನಗುಂದ ಮತ ಕ್ಷೇತ್ರದ ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಭಾಷಣ ಮಾಡುವ ವೇಳೆ ಕಿಡಿಗೇಡಿಗಳು ಕಲ್ಲು ಎಸೆದಿರುವ ಘಟನೆ ನಡೆದಿದೆ. ಇಲಕಲ್ಲ ತಾಲೂಕಿನ ಗುಡೂರು ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಭಾಷಣ ಮಾಡುವಾಗ ಶಾಸಕರ ಮೇಲೆ ಕಲ್ಲು ಎಸೆಯಲಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಶಾಸಕ ದೊಡ್ಡನಗೌಡ ಪಾಟೀಲ ವೇದಿಕೆಯ ಭಾಷಣ ಮಾಡುವಾಗ ಕಲ್ಲೆಸೆದ ಕಿಡಿಗೇಡಿಗಳು

ಈ ವೇಳೆ ಗಲಿಬಿಲಿಗೊಂಡ ಶಾಸಕ ದೊಡ್ಡನಗೌಡ ಪಾಟೀಲ ಕೆಲ ಕಾಲ ಭಾಷಣ ನಿಲ್ಲಿಸಿದ್ದಾರೆ. ಬಳಿಕ ಭಾಷಣ ಮುಂದುವರೆಸಿದ ಅವರು ,ಕಲ್ಲು ಎಸೆಯುವುದರಿಂದ ಮತ ಬರಲ್ಲ. ಇಂತಹ ಕೆಲಸ ಮಾಡಿದರೆ ರಾಜಕೀಯವಾಗಿ ಬೆಳೆಯಲ್ಲ. ಒಂದು ಅಲ್ಲ ನೂರು ‌ಕಲ್ಲು ಎಸೆದರೂ ನಾವು ಅಂಜುವುದಿಲ್ಲ, ನಾವು ಗುಂಡಿಗೆ ಇಟ್ಟುಕೊಂಡು ಬಂದಿದ್ದೇವೆ. ಸಂಗೊಳ್ಳಿ ರಾಯಣ್ಣ ವೇದಿಕೆಗೆ ಕಲ್ಲು ಎಸೆದಿರುವವರು ಮನುಷ್ಯರಾಗಿ ಹುಟ್ಟಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮಾಜಿ ಶಾಸಕರ ವಿರುದ್ದ ವಾಗ್ದಾಳಿ ನಡೆಸಿದರು.

ಕಲ್ಲು ಎಸೆಯುವುದು ಹೇಡಿಗಳ ಕೆಲಸವಾಗಿದೆ. ಇಂತಹ ಪವಿತ್ರ ವೇದಿಕೆಗೆ ಅಪಮಾನ ಮಾಡಿರುವುದು ಮಹಾ ನಾಯಕರಿಗೆ ಅಪಮಾನ ಮಾಡಿದಂತಾಗಿದೆ. ಸ್ವಾಭಿಮಾನ‌ ಬಿಟ್ಟು ಇರಲ್ಲ, ನಾವು ಈ ವೇದಿಕೆಗೆ ಬಂದರೆ ಏನು ತಪ್ಪು. ರಾಜಕೀಯ ಮಾಡಲು ಬೇರೆ ವೇದಿಕೆ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಕುಡಿದು ವಾಹನ ಚಾಲನೆ.. ಬೆಳಗಾವಿ ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.