ETV Bharat / state

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ: ಬೆಚ್ಚಿಬಿದ್ದ ಬಾಗಲಕೋಟೆ

author img

By

Published : Oct 15, 2019, 11:26 PM IST

Updated : Oct 16, 2019, 6:51 AM IST

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಶಿವಪ್ಪ ಯಮನಮ್ಮ ಪೂಜಾರಿ ಹಾಗೂ ಮುಧೋಳ ತಾಲೂಕಿನ ಶಿರೋಳ ಗ್ರಾಮದ ಮಲ್ಲಪ್ಪ ತಳಗೇರಿ(62) ವಿಠ್ಠಲ ತಳಗೇರಿ(46) ಕೊಲೆಯಾದವರು. ಈ ಮೂವರ ಕೊಲೆಯಿಂದ ಜಿಲ್ಲೆಯ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ

ಬಾಗಲಕೋಟೆ: ಎರಡು ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆಯಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಬಾಗಲಕೋಟೆ ತಾಲೂಕಿನ ಬೇವೂರು ಗ್ರಾಮದ ಶಿವಪ್ಪ ಯಮನಮ್ಮ ಪೂಜಾರಿ(43) ಅವರನ್ನ ಎಂಟು ಜನರ ತಂಡ ಹಲ್ಲೆ ನಡೆಸಿ ಕೊಂದಿದೆ. ಶೇಖರಪ್ಪ ಪೂಜಾರಿ, ಗ್ಯಾನೆಪ್ಪ ಪೂಜಾರಿ,ಶಿವಪ್ಪ ಯಲ್ಲಪ್ಪ ಇದ್ದಲಗಿ,ಮುತ್ತಪ್ಪ ಪೂಜಾರಿ,ಶ್ರೀಶೈಲ್ ಪೂಜಾರಿ ಸೇರಿದಂತೆ ಎಂಟು ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಘಟನೆ ಸಂಬಂಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಘಟನೆಯಲ್ಲಿ ಮೂವರ ಕೊಲೆ

ಇನ್ನು ಮಂಗಳವಾರ ಸಂಜೆ ವೈಯಕ್ತಿಕ ದ್ವೇಷದ ಹಿನ್ನೆಲೆ ಮಾರಕಾಸ್ತ್ರಗಳಿಂದ ತಂದೆ, ಮಗನ ಬರ್ಬರ ಹತ್ಯೆ ಮಾಡಲಾಗಿದೆ. ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ತಳಗೇರಿ(62) ವಿಠ್ಠಲ ತಳಗೇರಿ(46) ಕೊಲೆಯಾದವರು.

ದುಷ್ಕರ್ಮಿಗಳು ಈ ಇಬ್ಬರನ್ನೂ ಕೊಚ್ಚಿ ಕೊಂದು, ರಸ್ತೆ ಬದಿ ಬಿಸಾಕಿ ಹೋಗಿದ್ದಾರೆ. ಸ್ಥಳಕ್ಕೆ ಎಸ್.ಪಿ.ಲೋಕೇಶ್​ ಜಗಲಸಾರ ಹಾಗೂ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ‌ ಎರಡು ಘಟನೆಗಳಿಂದ ಜಿಲ್ಲೆಯ ಜನರಲ್ಲಿ ಆತಂಕ ಉಂಟಾಗಿದೆ.

Intro:AnchorBody:ಬಾಗಲಕೋಟೆ-- ಜಿಲ್ಲೆಯ ಎರಡು ಪ್ರತೇಕ ಘಟನೆಯಲ್ಲಿ ಉಂಟಾದ ವೈಮನಸ್ಸು ದಿಂದ ಮೂವರ ಕೊಲೆ ಆಗಿರುವ ಘಟನೆ ಜರುಗಿದ್ದು,ಆತಂಕ ಮೂಡಿಸಿದೆ.
ವಾಲ್ಮೀಕಿ ಜಯಂತಿ ಮೆರವಣಿಗೆ ವೇಳೆ ಓರ್ವ ಯುವಕನಿಗೆ ಕಾಲು ಬಡಿದದ್ದೇ ನೆಪ ದಿಂದ
ಕಳೆದ ರಾತ್ರಿ ಶುರುವಾದ ಜಗಳ,ಮಾರಾಮಾರಿಯಿಂದ
ಎಂಟು ಜನರು ಸೇರಿ ಓರ್ವನಿಗೆ ಕಟ್ಟಿಗೆ ಕುಡಗೋಲ ದಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೇವೂರು ಗ್ರಾಮದಲ್ಲಿ ನಡೆದಿದೆ.
ಬಾಗಲಕೋಟೆ ತಾಲ್ಲೂಕಿನ ಬೇವೂರು ಗ್ರಾಮದ ಲ್ಲಿ ಶಿವಪ್ಪ ಯಮನಮ್ಮ ಪೂಜಾರಿ(43) ಕೊಲೆಯಾದ ವ್ಯಕ್ತಿ.ಶಿವಪ್ಪ ಪೂಜಾರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ,
ಶೇಖರಪ್ಪ ಪೂಜಾರಿ,ಗ್ಯಾನೆಪ್ಪ ಪೂಜಾರಿ,ಶಿವಪ್ಪ ಯಲ್ಲಪ್ಪ ಇದ್ದಲಗಿ,ಮುತ್ತಪ್ಪ ಪೂಜಾರಿ,ಶ್ರೀಶೈಲ್ ಪೂಜಾರಿ ಸೇರಿದಂತೆ ಎಂಟು ಜನರು ಸೇರಿ ಕೊಲೆ ಮಾಡಿದ್ದು,ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗುತ್ತಿದೆ.
ಇನ್ನೂ ಮಂಗಳವಾರ ಸಂಜೆ ವ್ಯಯಕ್ತಿಕ ದ್ವೇಷ ದ ಹಿನ್ನೆಲೆ ಮಾರಕಾಸ್ತ್ರಗಳಿಂದ ತಂದೆ,ಮಗನ ಬರ್ಬರ ಕೊಲೆ ಆಗಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.ಮಲ್ಲಪ್ಪ ತಳಗೇರಿ(62) ವಿಠ್ಠಲ ತಳಗೇರಿ(46). ಕೊಲೆ ಆಗಿರುವ ರ್ದುದೈವಿಗಳು.ಮಾರಕಾಸ್ತ್ರಗಳಿಂದ ಕೊಚ್ಚಿ ರಸ್ತೆ ಬಳಿ ಬಿಸಾಕಿರುವ ದುಷ್ಕರ್ಮಿಗಳು.ಸ್ಥಳಕ್ಕೆ ಎಸ್.ಪಿ.ಲೋಕೇಶ ಜಗಲಸಾರ, ಮುಧೋಳ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸಿದ್ದಾರೆ.ಈ‌ ಎರಡು ಘಟನೆಗಳಿಂದ ಜಿಲ್ಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
Last Updated : Oct 16, 2019, 6:51 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.