ETV Bharat / state

ಬಿಜೆಪಿಯವರು ತಾಯಿ ಹೃದಯ ಇಲ್ಲದವರು: ಮಾಜಿ ಸ್ಪೀಕರ್ ರಮೇಶ್ ಕುಮಾರ್

author img

By

Published : Oct 13, 2019, 3:34 PM IST

ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ನೆರೆ ಪರಿಹಾರ ವಿಳಂಬ ಹಾಗೂ ಹೆಚ್ಚಿನ ಅನುದಾನ ನೀಡದಿರುವುದನ್ನು ಖಂಡಿಸಿ ಕಾಂಗ್ರೆಸ್​ ಮುಖಂಡ ಕೆ. ಆರ್ ರಮೇಶ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶಕುಮಾರ್

ಬಾಗಲಕೋಟೆ: ಬಿಜೆಪಿಯವರು ತಾಯಿ ಹೃದಯ ಇಲ್ಲದವರು. ಹೀಗಾಗಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವ ವೇಳೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸ್ಪೀಕರ್ ರಮೇಶಕುಮಾರ್

ನಗರದ ನೂತನ ನಿರೀಕ್ಷಣಾ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೆರೆ ಸಂತ್ರಸ್ತರ ಪರಿಹಾರ ಧನ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವಲ್ಲಿ ಕೇಂದ್ರ ವಿಳಂಬ ಧೋರಣೆಯನ್ನು ಟೀಕಿಸಿದ್ದಾರೆ.

ಸಭಾಧ್ಯಕ್ಷರಾದ ಸಮಯದಲ್ಲಿ ಕೊಟ್ಟಿರುವ ತೀರ್ಮಾನ ನ್ಯಾಯಸಮ್ಮತವಾಗಿದೆ. ಆತ್ಮಸಾಕ್ಷಿಯನ್ನು ಮೀರಿ ನಾನು ಕೆಲಸ ಮಾಡಿಲ್ಲ ಎಂದರು.

Intro:AnchorBody:ಬಿಜೆಪಿಯವರದು ತಾಯಿ ಯೇ ಇಲ್ಲದ ಹೃದಯ ಹೀಗಾಗಿ ಇನ್ನು ಮಲತಾಯಿ ಧೋರಣೆ ಎಲ್ಲಿಂದ ಬಂತು ಎಂದು ಕಾಂಗ್ರೆಸ್ ಮುಖಂಡ,ಮಾಜಿ ವಿಧಾನಸಭಾಧ್ಯಕ್ಷ ರಮೇಶಕುಮಾರ ವ್ಯಂಗ್ಯ ವಾಡಿದ್ದಾರೆ.
ಅವರು ಬಾಗಲಕೋಟೆ ನಗರದ ನೂತನ ಐಬಿ ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,ನೆರೆ ಸಂತ್ರಸ್ತರ ಪರಿಹಾರ ಧನ ಸೇರಿದಂತೆ ಇತರ ಸೌಲಭ್ಯಗಳು ನೀಡುವುವಲ್ಲಿ ಮಲತಾಯಿ ಧೋರಣೆ ತಾಳುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ ರಮೇಶಕುಮಾರ,ತಾಯಿ ಹೃದಯ ಇಲ್ಲದವರು,ಮಲತಾಯಿ ಆದಲ್ಲಿ ಮನೆಯಲ್ಲಿ ಆದರೂ ನೋಡುತ್ತಾಳೆ.ಆದರೆ ಬಿಜೆಪಿ ಯವರಿಗೆ ಅದು ಇಲ್ಲಾ ಎಂದು ವ್ಯಂಗ್ಯವಾಡಿ,ಸಭಾಧ್ಯಕ್ಷರಾದ ಸಮಯದಲ್ಲಿ ಕೊಟ್ಟಿರುವ ತೀರ್ಮಾನ ನ್ಯಾಯಸಮ್ಮತ ಆಗಿರುತ್ತದೆ.ಆತ್ಮಸಾಕ್ಷಿಯನ್ನು ಮೀರಿ ಕೆಲಸ ಮಾಡಿರುವುದಿಲ್ಲ ಎಂದ ಅವರು.ಆದರೆ ಇದಕ್ಕೆ ಕೆಲವೊಂದು ಅಪವಾದ ಬಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,ಮಹಾತ್ಮಾಗಾಂಧಿಜೀ ಯವರನ್ನೆ ಕೊಂದವರು ನಾವು,ಇನ್ನು ರಮೇಶ ಕುಮಾರ ಯಾವ ಲೆಕ್ಕ ಎಂದು ಮಾರ್ವಿಕವಾಗಿ ನುಡಿದರು..

ಬೈಟ್-- ರಮೇಶಕುಮಾರ( ಕಾಂಗ್ರೆಸ್ ಮುಖಂಡರು)Conclusion:ಈ ಟಿವಿ,ಭಾರತ,ಬಾಗಲಕೋಟೆ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.